|
(‘ಸೆಮಿಕಂಡಕ್ಟರ್’ ಎಂದರೆ ಅರೆವಾಹಕ. ಎಲೆಕ್ಟ್ರಾನಿಕ್ಸ್ ಕ್ಷೇತ್ರ ಮತ್ತು ಸಾಧನಗಳಲ್ಲಿ ‘ಸೆಮಿಕಂಡಕ್ಟರ್’ ಒಂದು ಪ್ರಮುಖ ವಸ್ತುವಾಗಿದೆ, ಆದರೆ ಚಿಪ್ ಎಂದರೆ ಸಣ್ಣ ಡಿಸ್ಕ್)
ನವದೆಹಲಿ – ಭಾರತವನ್ನು ‘ಸೆಮಿಕಂಡಕ್ಟರ್ ಪವರ್‌ಹೌಸ್’ ಮಾಡಲು ಸರಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ದೇಶದಲ್ಲಿ ಚಿಪ್ ಉತ್ಪಾದನೆಯನ್ನು ಹೆಚ್ಚಿಸಲು ಸರಕಾರ ಗಮನಹರಿಸುತ್ತಿದೆ. ಜಗತ್ತಿನ ಪ್ರತಿಯೊಂದು ಸಲಕರಣೆಗಳಲ್ಲಿ ಭಾರತೀಯ ಚಿಪ್ ಇರಬೇಕು ಎಂಬುದು ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಗ್ರೇಟರ್ ನೋಯ್ಡಾದಲ್ಲಿ ‘ಸೆಮಿಕಂಡಕ್ಟರ್ ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮವಾದ ‘ಸೆಮಿಕಾನ್ ಇಂಡಿಯಾ 2024’ ಅನ್ನು ಪ್ರಧಾನಿ ಉದ್ಘಾಟಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಮಂತ್ರಿ ಅವರು ಮಾತು ಮುಂದುವರೆಸಿ, “’ಸ್ಮಾರ್ಟ್‌ಫೋನ್ ಎಲೆಕ್ಟ್ರಾನಿಕ್ ವೆಹಿಕಲ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮುಂತಾದ ಎಲ್ಲ ವಸ್ತುಗಳ ಆಧಾರವೆಂದರೆ ಸೆಮಿಕಂಡಕ್ಟರ್. ಸೆಮಿಕಂಡಕ್ಟರ್ ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತವು ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದೆ.” ಎಂದು ಹೇಳಿದರು.
ಈ ವಲಯದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ
ಪ್ರಧಾನಿ ಮೋದಿ ಮಾತು ಮುಂದುವರೆಸಿ, ‘ಚಿಪ್ ಉತ್ಪಾದನೆಯನ್ನು ಹೆಚ್ಚಿಸುವುದು’ ಎಂಬುದು ಇಂದಿನ ಭಾರತದ ಮಂತ್ರವಾಗಿದೆ. ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಸರಕಾರವು ಶೇ. 50 ರಷ್ಟು ಆರ್ಥಿಕ ನೆರವು ನೀಡುತ್ತಿದೆ. ಈ ವಲಯದಲ್ಲಿ ಅತಿ ಕಡಿಮೆ ಸಮಯದಲ್ಲಿ 1.5 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಹಲವು ಯೋಜನೆಗಳು ಜಾರಿಯಾಗುವ ಹಾದಿಯಲ್ಲಿದೆ. ಟಾಟಾ ಗ್ರೂಪ್ ತೈವಾನ್ ಕಂಪನಿಯೊಂದಿಗೆ ಮತ್ತು ಅದಾನಿ ಗ್ರೂಪ್ ಮಹಾರಾಷ್ಟ್ರದಲ್ಲಿ ಇಸ್ರೇಲಿ ಕಂಪನಿಯೊಂದಿಗೆ ‘ಚಿಪ್ ಪ್ಲಾಂಟ್’ ಸ್ಥಾಪಿಸುತ್ತಿದೆ. ‘ಅಮೇರಿಕನ್ ಮೆಮೊರಿ ಮೇಕರ್ ಮೈಕ್ರಾನ್ ಟೆಕ್ನಾಲಜಿ’ ಗುಜರಾತ್‌ನಲ್ಲಿ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ. ‘ಸಿಜಿ ಪವರ್’ ಗುಜರಾತ್‌ನಲ್ಲಿ ‘ಚಿಪ್ ಪ್ಯಾಕೇಜಿಂಗ್ ಪ್ಲಾಂಟ್’ ಅನ್ನು ಸ್ಥಾಪಿಸುತ್ತಿದೆ. ಸೆಮಿಕಂಡ್ಕರ್ ನ ‘ವಿನ್ಯಾಸ’ದಲ್ಲಿ ದೇಶದ ಕೊಡುಗೆ ಶೇ.20ರಷ್ಟಿದೆ. ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಭಾರತವು 85 ಸಾವಿರ ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ತಜ್ಞರನ್ನು ಸಿದ್ಧಪಡಿಸುತ್ತಿದೆ. ಭಾರತದ ಎಲೆಕ್ಟ್ರಾನಿಕ್ಸ್ ವಲಯವು 150 ಶತಕೋಟಿ ಮೌಲ್ಯದ್ದಾಗಿದೆ. ಇದು ದಶಕದ ಅಂತ್ಯದ ವೇಳೆಗೆ 500 ಶತಕೋಟಿ ತಲುಪುವ ಗುರಿ ಹೊಂದಿದೆ. ಇದರಿಂದ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.” ಎಂದು ಹೇಳಿದರು.