|
ಮಂಡ್ಯ – ಸೆಪ್ಟೆಂಬರ್ 11 ರ ರಾತ್ರಿ ಮಂಡ್ಯದಲ್ಲಿ ಹಿಂದೂ ಮೆರವಣಿಗೆಗಳ ಮೇಲೆ ಮುಸ್ಲಿಮರು ದಾಳಿ ನಡೆಸಿದರು. ಈ ಕುರಿತು ಸ್ಥಳೀಯ ಹಿಂದೂರೊಬ್ಬರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅವರು, ಹಿಂದೂ ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಹಿಂದೂಗಳಿಗೆ ಸ್ವರಕ್ಷಣೆಯ ಆವಶ್ಯಕತೆ ಇದೆ. ಇತಿಹಾಸದ ಎಲ್ಲಾ ಅಪರಾಧಗಳನ್ನು ನೋಡಿದರೆ, ಮುಸ್ಲಿಮರ ಅಂಗಡಿಗಳ ಮೇಲೆ ಹಿಂದೂಗಳು ದಾಳಿ ಮಾಡಿದ ಪ್ರಕರಣ ಎಲ್ಲಿ ಕಂಡುಬಂದಿದೆ ? ಶೇ. 95 ರಷ್ಟು ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳು ಗಣೇಶೋತ್ಸವವನ್ನು ಆಚರಿಸಲು ಬಯಸಿದರೆ, ಅವರು ಜಿಲ್ಲಾಧಿಕಾರಿಗಳ ಅಲ್ಲ ಬದಲಾಗಿ ಮುಸ್ಲಿಮರ ಅನುಮತಿಯನ್ನು ತೆಗೆದುಕೊಳ್ಳಬೇಕೇ ? ಮುಸ್ಲಿಮರು ಪೆಟ್ರೋಲ್ ಬಾಂಬ್ ಎಸೆಯುತ್ತಾರೆ, ಕತ್ತಿಗಳನ್ನು ತೋರಿಸುತ್ತಾರೆ. ಹಿಂದೂಗಳೂ ಇಂತಹ ಕತ್ತಿಗಳನ್ನು ಕೈಗೆ ತೆಗೆದುಕೊಂಡರೆ ಏನಾಗುತ್ತದೆ ಎಂದು ಯಾರಾದರೂ ಯೋಚಿಸುತ್ತಾರೆಯೇ ? ಮುಸ್ಲಿಮರು ಹಿಂದೂಗಳನ್ನು ಪೀಡಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಒಂದೂವರೆ ಕೋಟಿ ರೂಪಾಯಿ ನಷ್ಟ ! – ಭೀಮರಾಜ್, ಮಾಲೀಕರು, ‘ಸಾಧನಾ ಟೆಕ್ಸ್‌ಟೈಲ್ಸ್’
ಮಂಡ್ಯದಲ್ಲಿ ಹಲವು ಹಿಂದೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ‘ಸಾಧನ ಟೆಕ್ಸ್ ಟೈಲ್ಸ್’ ಎಂಬ ಅಂಗಡಿಯೂ ಸೇರಿತ್ತು. ಈ ಕುರಿತು ಮಾಲೀಕ ಭೀಮರಾಜ್ ಮಾತನಾಡಿ, ಬೆಂಕಿಯಿಂದ ನಮ್ಮ ಅಂಗಡಿಗೆ ಒಂದೂವರೆ ಕೋಟಿ ರೂಪಾಯಿ ನಷ್ಟವಾಗಿದೆ. (ದಂಗೆಕೋರ ಮುಸಲ್ಮಾನರಿಂದ ಈ ಹಾನಿಯನ್ನು ವಸೂಲಿ ಮಾಡಬೇಕು ! – ಸಂಪಾದಕರು) ಅಂಗಡಿಯಲ್ಲಿದ್ದ ಬಟ್ಟೆಗಳೆಲ್ಲ ಸಂಪೂರ್ಣ ಸುಟ್ಟು ಕರಕಲಾಗಿವೆ. ರಾತ್ರಿ 12.30ಕ್ಕೆ ಜನರು ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ನಾನು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ನಂದಿಸಿದೆ. ಇದಾದ ಬಳಿಕ ಮತ್ತೆ ಅಂಗಡಿ ಮೇಲೆ 200ಕ್ಕೂ ಹೆಚ್ಚು ಮಂದಿ ದಾಳಿ ನಡೆಸಿ ಗಾಜಿನ ಬಾಟಲಿ, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರೂ ಓಡಿ ಹೋದರು. ಜೀವ ಉಳಿಸಿಕೊಳ್ಳಲು ನಾವೂ ಅವರ ಹಿಂದೆ ಓಡಿದೆವು. ಎಲ್ಲಿ ಪೊಲೀಸರೇ ಸುರಕ್ಷಿತವಾಗಿಲ್ಲ ಅಲ್ಲಿ ನಾವು ಹೇಗೆ ಸುರಕ್ಷಿತವಾಗಿರುವುದು ? ನಾವು 2-3 ಮಂದಿ ಅಂಗಡಿ ಉಳಿಸಲು ಬಂದಿದ್ದೇವೆ, ಆದರೆ 100-200 ಜನರ ಮುಂದೆ ನಾವು ಏನು ಮಾಡಬಹುದು? ನಾವು ಇಂದು ಸಾಯುತ್ತೇವೆ ಎಂದು ಯೋಚಿಸುತ್ತಿದ್ದೆವು. ಈ ನಷ್ಟವು ನಾನು 20 ವರ್ಷಗಳ ಹಿಂದೆ ಹೋಗಿದ್ದೇನೆ ಎಂದು ನನಗೆ ಅನಿಸುತ್ತದೆ. ಈಗ ನಾವು ಎಲ್ಲವನ್ನೂ ಮರಳಿ ಪಡೆಯಬೇಕಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|