ನವದೆಹಲಿ – ನ್ಯಾಯಾಲಯದಲ್ಲಿನ ತೀರ್ಪು ಮತ್ತು ವಿಚಾರಣೆ ನಮಗೆ ಯಾವಾಗಲೂ ಕೇಳಲು ಸಿಗುತ್ತವೆ. ಆರೋಪ ಪ್ರತ್ಯಾರೋಪದ ಈ ಗಂಭೀರ ವಾತಾವರಣದಲ್ಲಿ ನಡೆದಿರುವ ಹಾಸ್ಯ ಪ್ರಸಂಗಳನ್ನೂ ಕೂಡ ಇನ್ನು ಮುಂದೆ ನಮಗೆ ತಿಳಿಯಲಿದೆ. ದೆಹಲಿ ಉಚ್ಚ ನ್ಯಾಯಾಲಯವು ಇನ್ನು ಮುಂದೆ ಇದರ ನೇತೃತ್ವ ವಹಿಸಲಿದೆ. ಶೀಘ್ರದಲ್ಲಿಯೇ ದೆಹಲಿ ಉಚ್ಚ ನ್ಯಾಯಾಲಯದ ಜಾಲತಾಣದಲ್ಲಿ ನ್ಯಾಯಾಂಗದ ಕಾರ್ಯಕಲಾಪದ ವೇಳೆ ನಡೆದ ಹಾಸ್ಯಗಳನ್ನೂ ಕೂಡ ಸೇರಿಸಲಾಗುವುದು.
೧. ಶೀಘ್ರದಲ್ಲಿಯೇ ದೆಹಲಿ ಉಚ್ಚ ನ್ಯಾಯಾಲಯದ ಜಾಲತಾಣದಲ್ಲಿ ನ್ಯಾಯದಾನ ಕಕ್ಷೆಯಲ್ಲಿನ ಅನಪೇಕ್ಷಿತ ವಿನೋದ ಭರಿತ ಕ್ಷಣಗಳ ಒಂದು ಹೊಸ ಪುಟವನ್ನು ಜೋಡಿಸಲಾಗುವುದು. ಈ ಪುಟದಲ್ಲಿ ನ್ಯಾಯಾಲಯದಲ್ಲಿನ ವಿನೋದ ಘಟನೆಗಳು ಹಾಗೂ ಸಂವಾದಗಳನ್ನು ಪೋಸ್ಟ್ ಮಾಡಲಾಗುವುದು.
೨. ನ್ಯಾಯದಾನ ಕಕ್ಷೆಯು (ಕೋರ್ಟ ರೂಮ್) ವಿನೋದಗಳ ಹಾಸ್ಯ ಭೂಮಿಯೂ ಆಗಿದೆ ಎಂದು ನ್ಯಾಯಾಲಯವು ಹೇಳಿದೆ. ಇದಕ್ಕಾಗಿ ವಿಶೇಷ ಇ-ಮೇಲ್ ಐಡಿ ಕೂಡ ತಯಾರಿಸಲಾಗಿದೆ .
೩. ನ್ಯಾಯದಾನ ಕಕ್ಷೆಯಲ್ಲಿ ನಡೆದ ಹಾಸ್ಯಮಯ ಘಟನೆಗಳು ಮತ್ತು ವಿನೋದಗಳನ್ನು ನ್ಯಾಯವಾದಿಗಳು, ಅರ್ಜಿದಾರರು ಮತ್ತು ಸಾಕ್ಷಿದಾರರು ಈ ಮೇಲ್ ಐಡಿಗೆ ಕಳುಹಿಸಬಹುದು. ಬಂದ ಇ-ಮೇಲ್ ಗಳನ್ನು ಒಂದು ವಿಶೇಷ ಸಮಿತಿಯ ಮೂಲಕ ಪರಿಶೀಲನೆ ನಡೆಸಿ ನಂತರ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವುದು, ಎಂದು ದೆಹಲಿ ಉಚ್ಚ ನ್ಯಾಯಾಲಯ ತಿಳಿಸಿದೆ.
ಗಂಭೀರ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ನಡೆದ ಹಾಸ್ಯಗಳನ್ನು ಸದ್ಯ ಜೋಪಾನ ಮಾಡಲಾಗುವುದು
ದಿನನಿತ್ಯದ ಒತ್ತಡದ ಕಾರ್ಯಕಲಾಪದಲ್ಲಿ ಕೂಡ ಕೆಲವೊಮ್ಮೆ ವಕೀಲರು ಅಥವಾ ನ್ಯಾಯಾಧೀಶರ ವಿನೋದ ಬುದ್ಧಿಯಿಂದ ಹಾಗೂ ಕೆಲವೊಮ್ಮೆ ವಾದಿ ಪ್ರತಿವಾದಿಗಳ ಸಾಕ್ಷಿದಾರರ ಟಿಪ್ಪಣಿಗಳಿಂದ ಹಾಸ್ಯ ಸನ್ನಿವೇಶಗಳು ನಡೆಯುತ್ತವೆ. ಹ್ಯುಮರ್ ಇನ್ ಕೋರ್ಟ್ (ನ್ಯಾಯಾಲಯದಲ್ಲಿನ ವಿನೋದಗಳು) ಇದು ದೆಹಲಿ ನ್ಯಾಯಾಲಯದ ಮಾಹಿತಿ ತಂತ್ರಜ್ಞಾನ ಮತ್ತು ಕೃತ್ರಿಮ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ಸಮಿತಿಯ ಪರಿಕಲ್ಪನೆ ಆಗಿದೆ. ಗಂಭೀರ ವಿಚಾರಣೆಯ ಸಮಯದಲ್ಲಿನ ವಿನೋದದ ಕ್ಷಣಗಳನ್ನು ಮುಂದಿನ ಪೀಳಿಗೆಗಾಗಿ ಜೋಪಾನ ಮಾಡಲಾಗುವುದು. ಜಾಲತಾಣದಲ್ಲಿನ ಈ ಪುಟ ಈವರೆಗೆ ಕೆಲಸ ಮಾಡಬೇಕಿತ್ತು ಆದರೆ ಸದ್ಯ ಈ ಪುಟದಲ್ಲಿ ಕೇವಲ ಐದು ಹಾಸ್ಯ ಸನ್ನಿವೇಶಗಳನ್ನು ಸೇರಿಸಲಾಗಿದ್ದು ಅದರಲ್ಲಿ ಒಂದು ಸನ್ನಿವೇಶವನ್ನು ಓರ್ವ ನ್ಯಾಯಮೂರ್ತಿಗಳೇ ಸ್ವತಃ ಬರೆದಿದ್ದಾರೆ.
ನ್ಯಾಯಮೂರ್ತಿಗಳು ಬರೆದ ಹಾಸ್ಯ
ಈ ಹಾಸ್ಯ ಪೋಸ್ಟ್ ನಲ್ಲಿ ನ್ಯಾಯವಾದಿ – ನ್ಯಾಯಾಧೀಶರ ನಡುವಿನ ಸಂವಾದವನ್ನು ಬರೆದಿದ್ದಾರೆ.
ಹಿರಿಯ ನ್ಯಾಯವಾದಿ ‘ಅ’ : ನ್ಯಾಯಮೂರ್ತಿ ಮಹೋದಯರೆ, ದಯವಿಟ್ಟು ತಾವು ಈಗ ಪೇಪರ್ ಬುಕ್ ಪುಟ ಸಂಖ್ಯೆ ೬ಕ್ಕೆ ಬರಬೇಕು ಮತ್ತು ಎಡ ಭಾಗದಲ್ಲಿನ ಸ್ಟಾರ್ ನೋಡಬೇಕು.
ನ್ಯಾಯಮೂರ್ತಿ : ಮಿಸ್ಟರ್ ‘ಅ’, ನನಗೆ ಸಂಜೆ ೭ರ ನಂತರ ಮಾತ್ರ ಆಕಾಶದಲ್ಲಿ ಸ್ಟಾರ್ ಕಾಣಿಸುತ್ತದೆ. ನೀವು ಹೇಳುತ್ತಿರುವುದು ಸ್ಟಾರ್ ಚಿನ್ಹೆ ಆಗಿದೆ. (ಸಪ್ಟೆಂಬರ್ ೬ ರಂದು ನ್ಯಾಯಮೂರ್ತಿ ರಾಜೀವ ಶಕಧರ್ ಅವರು ಬರೆದ ಹಾಸ್ಯ ಸಂವಾದ).