ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಕ್ರಮ
ಮುಂಬಯಿ – ನಿಯಮಗಳ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್. ಬಿ.ಐ.ಯಿಂದ) ಎಚ್.ಡಿ.ಎಫ್. ಸಿ. ಮತ್ತು ಎಕ್ಸಿಸ್ ಈ ಬ್ಯಾಂಕ್‌ಗಳಿಗೆ ೨ ಕೋಟಿ ೯೧ ಲಕ್ಷ ರೂಪಾಯಿ ದಂಡ ವಿಧಿಸಿದೆ. ಎಚ್.ಡಿ.ಎಫ್.ಸಿ. ಮತ್ತು ಎಕ್ಸಿಸ್ ಎರಡು ಬ್ಯಾಂಕುಗಳು ಖಾಸಗಿ ಕ್ಷೇತ್ರದಲ್ಲಿನ ದೊಡ್ಡ ಬ್ಯಾಂಕುಗಳಾಗಿವೆ. ಈ ದಂಡ ಈ ಬ್ಯಾಂಕ್‌ಗಳ ಸಾಮಾನ್ಯ ಗ್ರಾಹಕರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಎಂದು ಕೂಡ ಸ್ಪಷ್ಟಪಡಿಸಿದೆ.
RBI Cracks Down: Imposes penalties of ₹1.91 crore on Axis Bank and ₹1 crore on HDFC Bank for non-compliance with directives.
Banks failed to follow RBI’s instructions, leading to regulatory action.#Compliance #Banking #BankingRegulations
Image credit : @DailyMarksmen pic.twitter.com/6tkcdtioxL— Sanatan Prabhat (@SanatanPrabhat) September 11, 2024
‘ಬ್ಯಾಂಕಿಂಗ್ ನಿಯಮನ ಕಾನೂನಿ’ನಲ್ಲಿನ ವ್ಯವಸ್ಥೆಯ ಉಲ್ಲಂಘನೆ !
ಆರ್.ಬಿ.ಐ. ಸಪ್ಟೆಂಬರ್ ೧೦ ರಂದು ಪ್ರಸಾರ ಮಾಡಿರುವ ಸುತ್ತೋಲೆಯಲ್ಲಿ, ಈ ಎರಡು ಬ್ಯಾಂಕಿನಿಂದ ‘ಬ್ಯಾಂಕಿಂಗ್ ನಿಯಮನ ಕಾನೂನಿ’ನ ವ್ಯವಸ್ಥೆಯನ್ನು ಉಲ್ಲಂಘಿಸಿದ್ದಾರೆ. ಡಿಪಾಸಿಟ್ ಮೇಲಿನ ಬಡ್ಡಿದರ, ಬ್ಯಾಂಕಿನ ಸಾಲ ವಸುಲಿ ತಂಡ (ರಿಕವರಿ ಏಜೆಂಟ್) ಮತ್ತು ಬ್ಯಾಂಕಿನಲ್ಲಿನ ಗ್ರಾಹಕ ಸೇವಾ ಇವುಗಳಿಗೆ ಸಂಬಂಧಿಸಿದ ಕೆಲವು ಆದೇಶದ ಪಾಲನೆ ಮಾಡದೆ ಇರುವುದರಿಂದ ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ೧ ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಆರ್.ಬಿ.ಐ.ಯಿಂದ ಸುತ್ತೋಲೆಯಲ್ಲಿ, ಡಿಪಾಸಿಟ್ ಬಡ್ಡಿದರ, ಕೆವೈಸಿ ಮತ್ತು ಕೃಷಿ ಸಾಲ ಪ್ರವಾಹಕ್ಕೆ ಸಂಬಂಧಿತ ಕೆಲವು ಸೂಚನೆಗಳ ಪಾಲನೆ ಮಾಡದೆ ಇರುವುದರಿಂದ ಎಕ್ಸಿಸ್ ಬ್ಯಾಂಕಿಗೆ ೧ ಕೋಟಿ ೯೧ ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಈ ಹಿಂದೆ ೩ ಬ್ಯಾಂಕುಗಳಿಗೆ ದಂಡ ವಿಧಿಸಲಾಗಿತ್ತು !
ಆರ್.ಬಿ.ಐ. ಯಿಂದ ೧೦ ದಿನಗಳ ಹಿಂದೆ ಯುಕೋ ಬ್ಯಾಂಕ್‌ಗೆ ೨ ಕೋಟಿ ೬೮ ಲಕ್ಷ ರೂಪಾಯಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ೧ ಕೋಟಿ ೩೨ ಲಕ್ಷ ರೂಪಾಯಿ ಹಾಗೂ ಸೆಂಟ್ ಬ್ಯಾಂಕ್ ಹೋಂ ಫೈನಾನ್ಸ್ ಲಿಮಿಟೆಡ್ ಗೆ ೨ ಲಕ್ಷ ೧೦ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.