ಉಜ್ಜೈನಿ (ಮಧ್ಯಪ್ರದೇಶ) – ಕೆಲವು ದಿನಗಳ ಹಿಂದೆ, ಫುಟ್‌ಪಾತ್ ನಲ್ಲಿ ಹಗಲಿನಲ್ಲಿಯೇ ಕಸ ಮತ್ತು ಗುಜರಿ ಸಂಗ್ರಹಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಲಾಗಿತ್ತು. ಈ ಘಟನೆ ನಡೆಯುತ್ತಿರುವಾಗ ದಾರಿಹೋಕರು ಆಕೆಯನ್ನು ರಕ್ಷಿಸಲಿಲ್ಲ, ಬದಲಾಗಿ ಓರ್ವ ವ್ಯಕ್ಯಿ ಮಹಿಳೆಯನ್ನು ಉಳಿಸುವ ಬದಲು, ಅತ್ಯಾಚಾರದ ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ. (ಅತ್ಯಾಚಾರ ನಡೆಯುತ್ತಿರುವಾಗ ನಿಷ್ಕ್ರಿಯವಾಗಿರುವ ಸಮಾಜವು ನಾಶವಾಗಲು ಅರ್ಹ ! – ಸಂಪಾದಕರು) ಈಗ ಪೊಲೀಸರು ಚಿತ್ರೀಕರಣ ಮಾಡಿದವನನ್ನು ಬಂಧಿಸಿದ್ದಾರೆ. ಈತನ ಹೆಸರು ಮಹಮ್ಮದ್ ಸಲೀಂ (ವಯಸ್ಸು 42 ವರ್ಷ) ಈತ ರಿಕ್ಷಾ ಚಾಲಕನಾಗಿದ್ದಾನೆ. (ಮತಾಂಧರ ಮನಸ್ಥಿತಿಯನ್ನು ತಿಳಿಯಿರಿ ! – ಸಂಪಾದಕರು) ಅವನ ಮೇಲೆ ಅನೇಕ ಅಪರಾಧಗಳ ದಾಖಲೆ ಇದೆ.
ಅತ್ಯಾಚಾರ ಮಾಡಿದ ವ್ಯಕ್ತಿ ಯು ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಆ ದಿನ ಅವನು ಆ ಮಹಿಳೆಗೆ ಮದ್ಯಪಾನ ಮಾಡಿಸಿ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಈಗಾಗಲೇ ಅತ್ಯಾಚಾರಿಯನ್ನು ಬಂಧಿಸಿದ್ದು, ಆತನ ಹೆಸರನ್ನು ಬಹಿರಂಗಪಡಿಸಿಲ್ಲ.
ಸಂಪಾದಕೀಯ ನಿಲುವುದೇಶದಲ್ಲಿ ಪ್ರತಿದಿನ ಕದ್ದು ಮುಚ್ಚಿ ಅತ್ಯಾಚಾರಗಳು ನಡೆಯುತ್ತಿವೆ. ಈಗ ಬಹಿರಂಗವಾಗಿ ಮತ್ತು ಹಗಲು ಹೊತ್ತಿನಲ್ಲಿಯೇ ಅತ್ಯಾಚಾರ ನಡೆಯುತ್ತಿದೆ. ಇದರಿಂದ ಸಮಾಜದ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದು ಗಮನಕ್ಕೆ ಬರುತ್ತದೆ ! ಈಗಲಾದರೂ ಎಲ್ಲಾ ಪಕ್ಷದ ಸರಕಾರಗಳು, ಆಡಳಿತ, ಪೊಲೀಸ್ ಮತ್ತು ನ್ಯಾಯಾಂಗಗಳು ಎಚ್ಚೆತ್ತುಕೊಂಡು ಏನಾದರೂ ಮಾಡುತ್ತವೆಯೇ ? |