ಇಬ್ಬರು ಯುವಕರಿಂದ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ !

ರಾಂಚಿ (ಝಾರಖಂಡ) – ಇಲ್ಲಿನ ಲಾಲ್‌ಪುರ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರು ಪೊಲೀಸರನ್ನು ಥಳಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಎಲ್ಲೆಡೆ ಪ್ರಸಾರವಾಗಿದ್ದರಿಂದ ‘ಪೊಲೀಸರ ವಿಷಯದಲ್ಲಿ ಹೆದರಿಕೆ ಸಮಾಜದಲ್ಲಿ ಉಳಿದಿದೆಯೋ ಇಲ್ಲವೋ,’ ಎನ್ನುವ ಪ್ರಶ್ನೆ ಮೂಡುತ್ತದೆ. ವಿಡಿಯೋದಲ್ಲಿ ಈ ಯುವಕ ಓರ್ವ ಪೊಲೀಸನನ್ನು ಗೋಡೆಗೆ ಜೋರಾಗಿ ತಳ್ಳುತ್ತಿರುವುದು ಕಂಡುಬರುತ್ತಿದೆ. ಈ ಘಟನೆ ಸಪ್ಟೆಂಬರ 6 ರಂದು ತಡರಾತ್ರಿ ನಡೆದಿದೆಯೆಂದು ಹೇಳಲಾಗುತ್ತಿದೆ.

1. ರಾತ್ರಿ 1 ಗಂಟೆ ಸುಮಾರಿಗೆ ಬಿಳಿ ಬಣ್ಣದ ಒಂದು ಕಾರಿನಿಂದ ರವಿರಂಜನ ಲಾಕ್ರಾ ಮತ್ತು ವಿನೋದ ಲಾಕ್ರಾ ಹೆಸರಿನ 2 ಯುವಕರು ಅತಿವೇಗವಾಗಿ ಹೋಗುತ್ತಿದ್ದರು.

2. ಲಾಲಪುರ ವೃತ್ತದಲ್ಲಿ ಬರುತ್ತಲೇ ಗಸ್ತಿಯಲ್ಲಿದ್ದ ಇಬ್ಬರು ಪೊಲೀಸರು ಅವರನ್ನು ತಡೆದರು. ಪೊಲೀಸರು ಅವರ ಬಳಿ ದಾಖಲೆಗಳನ್ನು ನೀಡುವಂತೆ ತಿಳಿಸಿದರು.

3. ಆ ಸಮಯದಲ್ಲಿ ಇಬ್ಬರೂ ಪೊಲೀಸರನ್ನು ಅವಾಚ್ಯ ಭಾಷೆಯಲ್ಲಿ ಬೈಯ್ದರು ಮತ್ತು ನಾವು ಒಂದು ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದಾರೆಂದು ಹೇಳಿದರು. ಹಾಗೆಯೇ `ನಾವು ನಿಮ್ಮ ಸಮವಸ್ತ್ರವನ್ನು 2 ನಿಮಿಷಗಳಲ್ಲಿ ತೆಗೆಸಬಲ್ಲೆವು’, ಎಂದು ಬೆದರಿಕೆಯನ್ನು ಹಾಕಿದರು.

4. ತದನಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸ ಠಾಣೆಗೆ ಕರೆದೊಯ್ದರು. ಇಬ್ಬರೂ ಅಲ್ಲಿಯೂ ವಾಗ್ದಾದ ಮಾಡಿದರು ಮತ್ತು ಅಲ್ಲಿಯ ಕೆಲವು ದಾಖಲೆಗಳನ್ನು ಹರಿದರು. ತದನಂತರ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. ಇದರಲ್ಲಿ ಓರ್ವ ಪೊಲೀಸ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು.

5. ಇದರಿಂದಾಗಿ ಪೊಲೀಸರು ಇಬ್ಬರ ವಿರುದ್ಧ ದುರು ದಾಖಲಿಸಿ ಬಂಧಿಸಿದರು. ತದನಂತರ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರದೇ ಸುಳ್ಳು ಮಾತನಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಸಮಾಜದಲ್ಲಿ ಪೊಲೀಸರ ಪ್ರಭಾವ ಹೇಗೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ! ಇದಕ್ಕೆ ಭಾಗಶಃ ಪೊಲೀಸ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಒಂದು ರೀತಿಯಲ್ಲಿ ಕಾರಣವಾಗಿದೆ. ಪೋಲೀಸರು ಕಠಿಣವಾಗಿ ನಡೆದುಕೊಂಡಿದ್ದರೆ, ಸಮಾಜದಲ್ಲಿ ಅವರ ಬಗ್ಗೆ ಗೌರವ ಮತ್ತು ಭಯ ತನ್ನಿಂತಾನೇ ನಿರ್ಮಾಣವಾಗಿರುತ್ತಿತ್ತು. ಇದು ಸತ್ಯ.