ಅಸ್ಸಾಂನ ಮುಸಲ್ಮಾನ ಬಾಹುಸಂಖ್ಯಾತ 3 ಜಿಲ್ಲೆಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಆಧಾರ್ ಕಾರ್ಡ್
ಗೌಹಾಟಿ (ಅಸ್ಸಾಂ) – ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸವಾ ಸರಮಾ ಇವರು `ವರ್ಷ 2015 ರಲ್ಲಿ ಯಾರು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್.ಆರ್.ಸಿ.) ಯ ಭಾಗವಾಗಲು ಅರ್ಜಿಯನ್ನು ಸಲ್ಲಿಸಿರುವುದಿಲ್ಲವೋ, ಅವರಿಗೆ ಸರಕಾರ ಆಧಾರ ಕಾರ್ಡ ನೀಡುವುದಿಲ್ಲ’ ಎಂದು ಘೋಷಿಸಿದೆ.
1. ಮುಖ್ಯಮಂತ್ರಿ ಸರಮಾ ಇವರು ಇದಕ್ಕಾಗಿ ಧುಬರಿ, ಬಾರಪೆಟಾ ಮತ್ತು ಮೊರಿಗಾಂವ ಈ ಜಿಲ್ಲೆಯ ಉದಾಹರಣೆಯನ್ನು ನೀಡದರು; ಈ ಜಿಲ್ಲೆಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಆಧಾರ ಕಾರ್ಡಗಳನ್ನು ನೀಡಲಾಗಿದೆ. ಈ ಜಿಲ್ಲೆಗಳು ಮುಸಲ್ಮಾನ ಬಾಹುಳ್ಯವಾಗಿವೆ.
2. ಮುಖ್ಯಮಂತ್ರಿ ಸರಮಾ ಮಾತನಾಡಿ, ಈ ಜಿಲ್ಲೆಯಲ್ಲಿ ಶಂಕಿತ ವಿದೇಶಿ ವ್ಯಕ್ತಿಗಳು ಕೂಡ ಆಧಾರ್ ಕಾರ್ಡ್‌ಗಳನ್ನು ಪಡೆದಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ, ಭವಿಷ್ಯದಲ್ಲಿ ಆಧಾರ್ ಕಾರ್ಡ್‌ಗಳನ್ನು ನೀಡಲು ಪ್ರಮಾಣೀಕೃತ ಮಾನದಂಡವನ್ನು ಹಾಕಿಕೊಳ್ಳಲು ನಿರ್ಣಯಿಸಿದೆ. ಇದರಡಿಯಲ್ಲಿ ಆಧಾರಕಾರ್ಡ ಬೇಕಾದವರು ಎನ್.ಆರ್.ಸಿ. ಅರ್ಜಿ ಸಂಖ್ಯೆನ್ನು (2015 ರಲ್ಲಿ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ) ಸಲ್ಲಿಸುವುದು ಕಡ್ಡಾಯವಾಗಿದ್ದು, ಯಾವುದೇ ವ್ಯಕ್ತಿಯ ಹೆಸರು ಎನ್.ಆರ್.ಸಿಯಲ್ಲಿ ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಬೇರೆ ವಿಷಯ; ಆದರೆ ಅವನು ಅರ್ಜಿದಾರನಾಗಿರಬೇಕು. ಒಂದು ವೇಳೆ ನೀವು ಅರ್ಜಿ ಸಲ್ಲಿಸದಿದ್ದರೆ, ಇದರರ್ಥ ನೀವು ಆಸ್ಸಾಂನಲ್ಲಿ ಇರಲಿಲ್ಲ ಎಂದರ್ಥ. ಇದರಿಂದ ಪ್ರಾಥಮಿಕ ದೃಷ್ಟಿಯಿಂದ 2014ರ ನಂತರ ಅಸ್ಸಾಂನಲ್ಲಿ ಬಂದಿರಬಹುದೆಂದು ಊಹಿಸಬಹುದಾಗಿದೆ.
ಸಂಪಾದಕೀಯ ನಿಲುವುಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಅಸ್ಸಾಂನಲ್ಲಿನ ನುಸುಳುಕೋರರ ಮೇಲೆ ಅಂಕುಶವಿಡಲು ವಿವಿಧ ಉಪಾಯಯೋಜನೆಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇದು ಒಳ್ಳೆಯದಾಗಿದೆ; ಆದರೆ ನುಸುಳುಕೋರರ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ ಅವರನ್ನು ಈಗ ತಕ್ಷಣವೇ ಹೊರದಬ್ಬುವುದು ಅಷ್ಟೇ ಆವಶ್ಯಕವಾಗಿದೆ ! |