‘ಮುಂದಿನ ಚುನಾವಣೆಯ ನಂತರ ರಾಜ್ಯದ ಎಲ್ಲಾ ಬುಲ್ಡೋಜರ್‌ಗಳು ಗೋರಖ್‌ಪುರದ (ಮುಖ್ಯಮಂತ್ರಿಯ ಮತದಾರರ ಕ್ಷೇತ್ರ) ಕಡೆಗೆ ಸಾಗಲಿವೆ’ ಎಂಬ ಅಖಿಲೇಶ್ ಯಾದವ್ ರವರ ಹೇಳಿಕೆಗೆ ಪ್ರತಿಕ್ರಿಯೆ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬುಲ್ಡೋಜರ್ ಓಡಿಸಲು ಸದೃಢ ಮನಸ್ಸು ಮತ್ತು ಬುದ್ಧಿ ಎರಡೂ ಬೇಕು. ಬುಲ್ಡೋಜರ್ ಅನ್ನು ನಡೆಸುವ ಸಾಮರ್ಥ್ಯ ಮತ್ತು ದೃಢತೆಯನ್ನು ಹೊಂದಿದ್ದರೆ ಮಾತ್ರ ಅವರು ನಡೆಸಬಹುದು. ಗಲಭೆಕೋರರ ಮುಂದೆ ಮೂಗು ತಿಕ್ಕುವವರನ್ನು ಬುಲ್ಡೋಜರ್ ಸೋಲಿಸುತ್ತದೆ. ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು. ಸರಕಾರಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಯೋಗಿ ಅವರು ಮುಂದೆ ಮಾತನಾಡಿ, ಟಿಪ್ಪು ಕೂಡ ಸುಲ್ತಾನನಾಗುವ ಕನಸು ಕಾಣುತ್ತಿದ್ದ. ಅವನಿಗೆ ಅವಕಾಶ ಸಿಕ್ಕಾಗಲೆಲ್ಲ, ರಾಜ್ಯದಲ್ಲಿ ಜಾತಿ ಮತ್ತು ಧರ್ಮಗಳಿಗಾಗಿ ಯುದ್ಧ ಮಾಡಿದನು. ಎಲ್ಲರೂ ಬುಲ್ಡೋಜರ್ ಓಡಿಸಲು ಸಾಧ್ಯವಿಲ್ಲ. ಅದಕ್ಕೆ ಸದೃಢ ಮನಸ್ಸು ಬೇಕು.
ಈ ಹಿಂದೆ ಅಖಿಲೇಶ್ ಯಾದವ್ ಅವರು 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಎಂದು ಹೇಳಿದ್ದರು. ಚುನಾವಣಾ ಫಲಿತಾಂಶ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಸರಕಾರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. (ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಆಡಳಿತದಲ್ಲಿ ಹಿಂದೂಗಳ ಮೇಲೆ ಲೆಕ್ಕವಿಲ್ಲದಷ್ಟು ದೌರ್ಜನ್ಯಗಳಾಗಿವೆ, ಅದರ ಬಗ್ಗೆ ಯಾದವ್ ಏಕೆ ಮೌನವಾಗಿದ್ದಾರೆ ? – ಸಂಪಾದಕರು) ರೈತ ಆತಂಕಗೊಂಡಿದ್ದಾನೆ. ಯುವಕರ ಭವಿಷ್ಯ ಮಂಕಾಗಿದೆ. ಸಮಾಜದಲ್ಲಿ ಪ್ರತಿಯೊಂದು ವರ್ಗವೂ ನರಳುತ್ತಿದೆ. 2027 ರಲ್ಲಿ ಸಮಾಜವಾದಿ ಪಕ್ಷದ ಸರಕಾರ ರಚನೆಯಾದ ತಕ್ಷಣ, ರಾಜ್ಯದಲ್ಲಿನ ಎಲ್ಲಾ ಬುಲ್ಡೋಜರ್‌ಗಳು ಗೋರಖ್‌ಪುರದ (ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ) ಕಡೆಗೆ ಚಲಿಸುತ್ತವೆ ಎಂದು ಹೇಳಿದ್ದರು.