ನವದೆಹಲಿ – ದೆಹಲಿ ವಕ್ಫ್ ಬೋರ್ಡ್‌ನಲ್ಲಿ ನಡೆದ ಹಣಕಾಸು ದುರ್ಬಳಕೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ (‘ಇ.ಡಿ) ಬಂಧಿಸಿದೆ. ಅಮಾನತುಲ್ಲಾ ಖಾನ್ ಇವರ ಮೇಲೆ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದಾಗ 32 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡ ಆರೋಪವಿದೆ. ಇದರೊಂದಿಗೆ ದೆಹಲಿ ವಕ್ಫ್ ಬೋರ್ಡ್‌ನ ಹಲವು ಆಸ್ತಿಗಳನ್ನು ಅಕ್ರಮವಾಗಿ ಬಾಡಿಗೆಗೆ ನೀಡಿದ್ದರು ಹಾಗೂ ಮಂಡಳಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ.
ಸಂಪಾದಕೀಯ ನಿಲುವುಹಿಂದೂಗಳ ದೇವಾಲಯಗಳಲ್ಲಿ ಅವ್ಯವಹಾರದ ಹೆಸರಿನಲ್ಲಿ ಹಿಂದೂ ದೇವಾಲಯಗಳನ್ನು ಸರಕಾರಿಕರಣ ಮಾಡುವ ಆಡಳಿತಗಾರರು ಈಗ ವಕ್ಫ್ ಬೋರ್ಡ್ಅನ್ನು ಏಕೆ ಸರಕಾರಿಕರಣ ಮಾಡುತ್ತಿಲ್ಲ ? ಇಲ್ಲವಾದಲ್ಲಿ ಈ ಬೋರ್ಡ್ ಬಗ್ಗೆ ಜನರಲ್ಲಿ ಸಿಟ್ಟಿದೆ ಹಾಗೆಯೇ ವಕ್ಫ್ ಕಾಯಿದೆ ಸಾರ್ವಜನಿಕ ವಿರೋಧಿಯಾಗಿದೆ ! |