ಶೇ. ೩೫ ಮಹಿಳಾ ವೈದ್ಯರು ರಾತ್ರಿ ಪಾಳಿ ಮಾಡಲು ಹೆದರುತ್ತಾರೆ ! – ಇಂಡಿಯನ್ ಮೆಡಿಕಲ್ ಅಸೋಸಿಯೇಷನ್

ಸಮಾಜದ ನೈತಿಕತೆ ಕುಸಿದಿರುವ ಸಮೀಕ್ಷೆ

ನವ ದೆಹಲಿ – ಕೋಲಕಾತಾ ಇಲ್ಲಿಯ ‘ರಾಧಾ ಗೋವಿಂದ’ (ಆರ್.ಜಿ) ಕರ ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ಡಾಕ್ಟರ್ ಮೇಲೆ ನಡೆದಿರುವ ಬಲಾತ್ಕಾರ ಮತ್ತು ಹತ್ಯೆಯ ಘಟನೆಯ ನಂತರ ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ ನಿಂದ (ಐ.ಎಂ.ಎ.ನ) ಆನ್ಲೈನ್ ಸಮೀಕ್ಷೆ ನಡೆಸಿದೆ. ಇದರಲ್ಲಿ ಭಾಗವಹಿಸಿದ್ದ ಸುಮಾರು ಶೇ. ೩೫ ರಷ್ಟು ಮಹಿಳಾ ಡಾಕ್ಟರರು, ರಾತ್ರಿಪಾಳಿ ಮಾಡುವಾಗ ಸುರಕ್ಷಿತ ಅನಿಸುವುದಿಲ್ಲ ಎಂಬುದು ಒಪ್ಪಿಕೊಂಡಿದ್ದಾರೆ.

೧. ಓರ್ವ ಮಹಿಳಾ ಡಾಕ್ಟರ್, ಆಕೆ ಯಾವಾಗಲು ತನ್ನ ಹ್ಯಾಂಡ್ ಬ್ಯಾಗನಲ್ಲಿ ಚಾಕು ಮತ್ತು ಖಾರದ ಪುಡಿಯ ಸ್ಪ್ರೇ ಇಟ್ಟುಕೊಳ್ಳುತ್ತಾಳೆ; ಕಾರಣ ಕೆಲಸದ ಕೋಣೆಗಳು ಕತ್ತಲೆ ಸ್ಥಳದಲ್ಲಿ ಇದೆ ಎಂದು ಹೇಳಿದ್ದಾರೆ.

೨. ಕೆಲವು ಡಾಕ್ಟರರು ಅತಿ ದಕ್ಷತಾ ವಿಭಾಗದಲ್ಲಿ ಅಸಭ್ಯ ವರ್ತನೆಗಳ ಕುರಿತು ದೂರು ನೀಡಿದ್ದಾರೆ. ಓರ್ವ ಮಹಿಳಾ ಡಾಕ್ಟರರು ಗದ್ದಲದ ಅತಿದಕ್ಷತಾ ವಿಭಾಗದಲ್ಲಿ ಅನೇಕ ಬಾರಿ ‘ಅಯೋಗ್ಯ ಸ್ಪರ್ಶ’ವನ್ನು ಎದುರಿಸಬೇಕಾಯಿತು.

೩. ‘ಕೇರಳ ರಾಜ್ಯ ಯುನಿಟ್’ನ ‘ರೀಸರ್ಚ್ ಸೆಲ್’ನಿಂದ ಈ ಸಮೀಕ್ಷೆ ನಡೆಸಲಾಗಿತ್ತು. ಅದರ ಅಧ್ಯಕ್ಷ ಡಾ. ರಾಜೀವ ಜಯದೇವನ್ ಇವರು, ೨೨ ರಾಜ್ಯಗಳಲ್ಲಿನ ಡಾಕ್ಟರರು ಈ ಸಮೀಕ್ಷೆಯಲ್ಲಿ ಸಹಭಾಗಿದ್ದರು. ಸಮೀಕ್ಷೆಗಾಗಿ ಅವಶ್ಯಕ ಮಾಹಿತಿಯ ಗೂಗಲ್ ಫಾರಂ ಮೂಲಕ ಭಾರತಾದ್ಯಂತದ ಸರಕಾರಿ ಮತ್ತು ಖಾಸಗಿ ಡಾಕ್ಟರರಿಗೆ ಕಳುಹಿಸಲಾಗಿತ್ತು. ೨೪ ಗಂಟೆಯಲ್ಲಿ ೩ ಸಾವಿರದ ೮೮೫ ಪ್ರತಿಕ್ರಿಯೆಗಳು ದೊರೆತವು ಎಂದು ಹೇಳಿದರು.

೪. ಡಾ. ಜಯದೇವನ್ ಇವರು, ಇಲ್ಲಿಯವರೆಗಿನ ಸಮೀಕ್ಷೆಯಿಂದ ಏನೆಲ್ಲಾ ಬಹಿರಂಗವಾಗಿದೆ ಅದರಲ್ಲಿ ಸುರಕ್ಷಾ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವುದು, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು, ಕೇಂದ್ರ ಸುರಕ್ಷಾ ಕಾನೂನು (ಸಿಪಿಎ) ಜಾರಿಗೊಳಿಸುವುದು, ಸುರಕ್ಷತೆ ಹೆಚ್ಚಿಸುವುದಕ್ಕಾಗಿ ಅಲಾರಾಂ ಸಿಸ್ಟಂನ ಸಮಾವೇಶ ಮಾಡುವುದು ಮತ್ತು ಲಾಕ್ ಸಹಿತ ಸುರಕ್ಷಿತ ಡ್ಯೂಟಿ ರೂಂ ಮುಂತಾದ ವಿಷಯಗಳು ಸಮಾವೇಶವಿದೆ.

೫. ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ ೨೦ ರಂದು ವೈದ್ಯಕೀಯ ಕ್ಷೇತ್ರದಲ್ಲಿನ ಜನರ ಸುರಕ್ಷತೆಗಾಗಿ ೧೪ ಸದಸ್ಯರ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸ್ಥಾಪಿಸಿದ್ದಾರೆ ಅದರಲ್ಲಿ ೯ ವೈದ್ಯರು ಮತ್ತು ಕೇಂದ್ರ ಸರಕಾರದ ೫ ಅಧಿಕಾರಿಗಳ ಸಮಾವೇಶವಿದೆ.