ತೆಲಂಗಾಣ ಕಾಂಗ್ರೆಸ್ ನ ಮುಖ್ಯಮಂತ್ರಿ ರೇವಂತಾ ರೆಡ್ಡಿಯ ಚಳಿ ಬಿಡಿಸಿದ ಸರ್ವೋಚ್ಚ ನ್ಯಾಯಾಲಯ !

ನ್ಯಾಯಾಲಯವು ನಾಯಕರಿಗೆ ಕೇಳಿ ಅಲ್ಲ ಕಾನೂನಿನ ಪ್ರಕಾರ ತೀರ್ಪು ಕೊಡುತ್ತದೆ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ನ್ಯಾಯಾಲಯಗಳು ಕಾನೂನಿನ ಪ್ರಕಾರ ತೀರ್ಮಾನಿಸುತ್ತವೆ, ನಾಯಕರನ್ನು ಕೇಳುವ ಮೂಲಕ ಅಲ್ಲ. ನಮ್ಮ ನಿರ್ಧಾರಗಳ ಬಗ್ಗೆ ನಾಯಕರು ಅಥವಾ ಬೇರೆಯವರು ಏನು ಹೇಳುತ್ತಾರೆ, ಇದು ನಮಗೆ ಏನೂ ವ್ಯತ್ಯಾಸ ಆಗುವುದಿಲ್ಲ. ನ್ಯಾಯಾಲಯಕ್ಕೆ ರಾಜಕೀಯ ವಿವಾದವನ್ನು ಎಳೆದು ತರುವುದು ತಪ್ಪು ಇದೆ. ಮುಖ್ಯಮಂತ್ರಿಯೊಬ್ಬರು ಇಂತಹ ಹೇಳಿಕೆ ನೀಡುವುದರಿಂದ ಜನರ ಮೇಲೆ ತಪ್ಪು ಪರಿಣಾಮ ಆಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ತೆಲಂಗಾಣ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತಾ ರೆಡ್ಡಿ ಅವರಿಗೆ ಛೀಮಾರಿ ಹಾಕಿದೆ. ದೆಹಲಿ ಸರಕಾರದ ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿಯ ಮುಖ್ಯಸ್ಥೆ ಕೆ. ಕವಿತಾಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆ ನಂತರ ಮುಖ್ಯಮಂತ್ರಿ ರೆಡ್ಡಿ ಅವರು ಲೋಕಸಭೆ ಚುನಾವಣೆಯಲ್ಲಿ ಭಾಜಪ ಮತ್ತು ಭಾರತ ರಾಷ್ಟ್ರ ಸಮಿತಿ ನಡುವಿನ ಒಪ್ಪಂದದಿಂದಾಗಿ ಕೆ. ಕವಿತಾಳ ಬಂಧನವಾಗಿ 5 ತಿಂಗಳೊಳಗೆ ಜಾಮೀನು ಸಿಕ್ಕಿದೆ. ಆದರೆ, ಎಎಪಿ ನಾಯಕ ಮನೀಶ್ ಸಿಸೋದಿಯಾ ಇವರಿಗೆ ಮಾತ್ರ 15 ತಿಂಗಳ ನಂತರ ಜಾಮೀನು ಸಿಕ್ಕಿತ್ತು ಎಂದು ಹೇಳಿದ್ದರು.

ಮುಖ್ಯಮಂತ್ರಿ ರೇವಂತಾ ರೆಡ್ಡಿಯವರಿಂದ ಕ್ಷಮೆಯಾಚನೆ

ಮುಖ್ಯಮಂತ್ರಿ ರೇವಂತಾ ರೆಡ್ಡಿ ಅವರ ಹೇಳಿಕೆಗಾಗಿ ಸರ್ವೋಚ್ಚ ನ್ಯಾಯಾಲಯದ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಕ್ಷಮೆಯಾಚಿಸಿದ್ದಾರೆ. ಅವರು, ನನ್ನ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕಟವಾದ ಸುದ್ದಿಯಲ್ಲಿ ನನ್ನ ಟೀಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಕಾನೂನಿನ ನಿಯಮಗಳನ್ನು ಗೌರವಿಸುತ್ತೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.