೪ ಜನರ ಬಂಧನ
ಸತನಾ (ಮಧ್ಯಪ್ರದೇಶ) – ಹಸುಗಳನ್ನು ತುಂಬಿ ಹರಿಯುವ ನದಿಗೆ ತಳ್ಳಿದ್ದರಿಂದ ೫೦ ರಲ್ಲಿನ ೧೫ – ೨೦ ಹಸುಗಳು ಮುಳುಗಿ ಮೃತಪಟ್ಟವೆ ಈ ಕುರಿತಾದ ಒಂದು ವಿಡಿಯೋ ಪ್ರಸಾರವಾಗಿದ್ದು ಅದರಲ್ಲಿನ ಕೆಲವು ಜನರು ನೆರೆಯ ನೀರಲ್ಲಿ ಹಸುಗಳನ್ನು ತಳ್ಳುತ್ತಿರುವುದು ಕಾಣುತ್ತಿದೆ. ಈ ವಿಡಿಯೋದಲ್ಲಿ ಹಸುಗಳು ನೆರೆಯ ನೀರಿನಲ್ಲಿ ಒದ್ದಾಡುತ್ತಿರುವುದು ಕಾಣುತ್ತಿದೆ. ಈ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಹುಡುಗ ಸಹಿತ ನಾಲ್ಕು ಜನರನ್ನು ಬಂಧಿಸಲಾಗಿದೆ. ಈ ಘಟನೆ ರಾಜ್ಯ ಸಚಿವ ಪ್ರತಿಮಾ ಬಾಗರಿ ಇವರ ವಿಧಾನಸಭಾ ಮತದಾರ ಕ್ಷೇತ್ರದಲ್ಲಿನದಾಗಿದೆ.
೧. ಭೋಪಾಲದಿಂದ ೫೧೫ ಕಿಲೋಮೀಟರ್ ಅಂತರದಲ್ಲಿರುವ ನಾಗೌಡ ಪರಿಸರದಲ್ಲಿನ ನದಿಯ ತೀರದಲ್ಲಿರುವ ಬ್ರಮ್ಹೌರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
೨. ಈ ಘಟನೆಯ ವಿಡಿಯೋ ತಯಾರಿಸಿರುವ ಓರ್ವ ಗ್ರಾಮಸ್ಥನು ಪೊಲೀಸರಿಗೆ ದೂರು ನೀಡಿದರು . ಪೊಲೀಸರು ‘ಮಧ್ಯಪ್ರದೇಶ ಗೋ ರಕ್ಷಣಾ ಕಾನೂನಿ’ನ ಅಂತರ್ಗತ ದೂರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿನ ನಾಲ್ಕೂ ಆರೋಪಿಗಳನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.
೩. ನಾಗೌಡ ಪೊಲೀಸ ಠಾಣೆಯ ಮುಖ್ಯಸ್ಥ ಅಶೋಕ ಪಾಂಡೆ ಇವರು ಮಾತನಾಡಿ, ಆರೋಪಿಗಳಲ್ಲಿ ಓರ್ವನು ಅಪ್ರಾಪ್ತನಾಗಿರುವನು, ಇತರರ ಹೆಸರು ಬೀಟಾ ಬಾಗರಿ, ರವಿ ಬಾಗರಿ ಮತ್ತು ರಾಮಪಾಲ ಚೌದರಿ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಮತ್ತು ಅಪ್ರಾಪ್ತ ಹುಡುಗನನ್ನು ಬಾಲವಿಕಸನ ಗೃಹಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
೪. ಪ್ರಾಥಮಿಕ ವರದಿಯ ಪ್ರಕಾರ ಸುಮಾರು ೫೦ ಹಸುಗಳನ್ನು ನದಿಗೆ ತಳ್ಳಲಾಗಿತ್ತು, ಅದರಲ್ಲಿನ ೧೫ – ೨೦ ಹಸುಗಳು ಮೃತಪಟ್ಟಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಂಪಾದಕೀಯ ನಿಲುವುಪ್ರಾಣಿಗಳ ಮೇಲೆ ಕೂಡ ದಯೆ ತೋರಿಸುವ ಶಿಕ್ಷಣ ನೀಡುವ ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆಯೇ ? ಎಂಬ ಪ್ರಶ್ನೆ ಜನರಿಗೆ ಕಾಡಿದರೆ ಅದರಲ್ಲಿ ತಪ್ಪೇನು ಇಲ್ಲ ! |