ಯುವತಿಯಿಂದ ಮೊಹಮ್ಮದ್‌ನ ಫೋಟೊ ಸಹಿತ ರೈಲ್ವೆ ಆ್ಯಪ್ ನಲ್ಲಿ ದೂರು ದಾಖಲಿಸಿದರು !
ಉಡುಪಿ – ರೈಲ್ವೇಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ಶುರೀಂ (22 ವರ್ಷ) ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈತ ಭಟ್ಕಳ ನಿವಾಸಿ. ಉಡುಪಿಯ ಗುಡ್ಡೆಯಂಗಡಿ ನಿವಾಸಿಯಾಗಿರುವ ಹಾಗೂ ಬೆಂಗಳೂರಿನಲ್ಲಿ ಐಟಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಆಗಸ್ಟ್ 24ರಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ರೈಲು ಮೂಲ್ಕಿ ನಿಲ್ದಾಣವನ್ನು ದಾಟಿದಾಗ ಆರೋಪಿ ಮಹಮ್ಮದ್ ಶುರೀಂ ಆಕೆಗೆ ಪದೇ ಪದೇ ಕಿರುಕುಳ ನೀಡಲಾರಂಭಿಸಿದ್ದ. ಬಳಿಕ ಅವರ ನಡುವೆ ವಾಗ್ವಾದ ನಡೆದಿದೆ. ಹುಡುಗಿ ತಕ್ಷಣವೇ ಅವನ ಫೋಟೊ ತೆಗೆದು ರೈಲ್ವೇ ಆ್ಯಪ್ ಮೂಲಕ ದೂರು ದಾಖಲಿಸಿದಳು. ಉಡುಪಿ ರೈಲು ನಿಲ್ದಾಣ ತಲುಪಿದ ಬಳಿಕ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಕಾಮುಕ ಮತಾಂಧ ! |