ಬೆಂಗಳೂರು – ರಾಜ್ಯದಲ್ಲಿ ಬಲಾತ್ಕಾರದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 7 ತಿಂಗಳಲ್ಲಿ ಒಟ್ಟು 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಭಾಜಪ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಭ್ರಷ್ಟಾಚಾರಿ ಮತ್ತು ಪಕ್ಷಪಾತಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿರುವಾಗ 7 ತಿಂಗಳಲ್ಲಿ 340 ಬಲಾತ್ಕಾರದ ಪ್ರಕರಣಗಳು ದಾಖಲಾಗಿರುವುದು ಗಂಭೀರ ಪರಿಸ್ಥಿತಿಯ ಸಂಕೇತವಾಗಿದೆ. ಕರ್ನಾಟಕವು ಬಲಾತ್ಕಾರಿಗಳ ರಾಜ್ಯವಾಗುತ್ತಿದೆ ಮತ್ತು ಹೆಣ್ಣುಮಕ್ಕಳಿಗೆ ಅಸುರಕ್ಷಿತ ಸ್ಥಳವೆಂದು ಗುರುತಿಸಲಾಗುತ್ತಿದೆ. `ಕರ್ನಾಟಕವು ಮಹಾನ್ ಶಿವಶರಣೆ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಇಂತಹ ವೀರ ಮಹಿಳೆಯರ ಪುಣ್ಯಭೂಮಿಯಾಗಿದೆಯೆಂದು ಹೇಳಲು ನಾಚಿಕೆಪಡುವಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಮಹಿಳೆಯರ ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಭೂಮಿಯಲ್ಲಿ ಕೇಸರಿ ಬಾವುಟವಿರುವ ಭೂಮಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಸಂಪೂರ್ಣ ರಾಜ್ಯವು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಿದೆಯೆಂದು ಅವರು ಟೀಕಿಸಿದ್ದಾರೆ.