ಮಹಾರಾಷ್ಟ್ರದ ಎಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶ !

  • ಸುರಾಜ್ಯ ಅಭಿಯಾನ’ದ ದೂರಿನ ಪರಿಣಾಮ !

  • ವಾಹನದ ‘ಹೆಡ್‌ಲೈಟ್‌’ನಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ !

  • ಕ್ರಮ ಕೈಕೊಳ್ಳದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಸುರಾಜ್ಯ ಅಭಿಯಾನದಿಂದ ಎಚ್ಚರಿಕೆ

ಮುಂಬಯಿ – ವಾಹನದ ‘ಹೆಡ್‌ಲೈಟ್’ನ (ಎದುರಿನ ದೀಪ) ಬೆಳಕು ಹೇಗಿರಬೇಕು ? ಈ ವಿಷಯದ ಕುರಿತು ‘ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989’ ಅಡಿಯಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ; ಆದರೆ ಇದನ್ನು ನಿರ್ಲಕ್ಷಿಸಿ ಕೆಲವು ವಾಹನ ಚಾಲಕರು ವಾಹನಗಳ ಹೆಡ್ ಲೈಟ್ ಗಳಲ್ಲಿ ಕಣ್ಣುಗಳಿಗೆ ತೊಂದರೆಯಾಗುವಂತಹ ದೀಪಗಳನ್ನು ಅಳವಡಿಸುತ್ತಾರೆ. ಅದರಲ್ಲಿನ ತೊಂದರೆದಾಯಕ ಪ್ರಕಾಶಗಳಿಂದ ಅಪಘಾತಗಳಾಗಿರುವ ಅನೇಕ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ‘ಸುರಾಜ್ಯ ಅಭಿಯಾನ’ ಇದರ ಗಂಭೀರತೆಯನ್ನು ಗಮನಿಸಿ ರಾಜ್ಯ ಸಾರಿಗೆ ಆಯುಕ್ತರಿಗೆ ದೂರು ನೀಡಿತ್ತು. ಇದನ್ನು ಸಾರಿಗೆ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಆಗಸ್ಟ್ 23 ರಂದು ಸಾರಿಗೆ ಆಯುಕ್ತರು ರಾಜ್ಯದ ಎಲ್ಲಾ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿದೆ. ಹಾಗೆಯೇ ಹೆಡ್ ಲೈಟ್ ನ ನಿಯಮವನ್ನು ಉಲ್ಲಂಘಿಸುವ ವಾಹನಗಳನ್ನು ಪರಿಶೀಲಿಸಿ ತಪ್ಪಿತಸ್ಥ ವಾಹನ ಚಾಲಕರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು. ಹಾಗೆಯೇ ಈ ವಿಷಯದಲ್ಲಿ ಜನಜಾಗೃತಿ ಮೂಡಿಸಬೇಕು ಎಂದೂ ಸಾರಿಗೆ ಆಯುಕ್ತರು ರಾಜ್ಯದ ಎಲ್ಲಾ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ರಾಜ್ಯ ಸಂಯೋಜಕರಾದ ಶ್ರೀ. ಅಭಿಷೇಕ ಮುರುಕಟೆಯವರು ಮಾಹಿತಿ ನೀಡಿದ್ದಾರೆ.