ಭಾರತದಲ್ಲಿ ಪ್ರತಿ 3 ಗಂಟೆಗಳಿಗೊಮ್ಮೆ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ! ಬೆಚ್ಚಿಬೀಳಿಸುವ ವರದಿ

ದೇಶದಲ್ಲೇ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ

ನವ ದೆಹಲಿ – ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆ (ಎನ್.ಸಿ.ಆರ್.ಬಿ.) ಪ್ರಕಟಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. 2022ರಲ್ಲಿ ದೇಶದಲ್ಲಿ ಒಟ್ಟು 31 ಸಾವಿರದ 516 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅತ್ಯಧಿಕ ಬಲಾತ್ಕಾರಗಳು ರಾಜಸ್ಥಾನದಲ್ಲಿ ನಡೆದಿವೆ. ಈ ಸ್ಥಳದಲ್ಲಿ 5 ಸಾವಿರದ 399 ಅಪರಾಧಗಳು ದಾಖಲಾಗಿವೆ. ತದನಂತರ ಉತ್ತರ ಪ್ರದೇಶದಲ್ಲಿ 3 ಸಾವಿರದ 690 ಬಲಾತ್ಕಾರದ ಪ್ರಕರಣಗಳು ಬೆಳಕಿಗೆ ಬಂದಿವೆ. ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶ ರಾಜ್ಯವಿದ್ದು, ಅಲ್ಲಿ 3 ಸಾವಿರದ 29 ಬಲಾತ್ಕಾರದ ಪ್ರಕರಣಗಳು ದಾಖಲಾಗಿವೆ. ತದನಂತರ, ಮಹಾರಾಷ್ಟ್ರದ ಸ್ಥಾನವಿದ್ದು, ಅಲ್ಲಿ 2 ಸಾವಿರದ 904 ಬಲಾತ್ಕಾರದ ಪ್ರಕರಣಗಳು ದಾಖಲಾಗಿವೆ.

ಶೇ.27 ರಷ್ಟು ಆರೋಪಿಗಳಿಗೆ ಶಿಕ್ಷೆ !

ಭಾರತದಲ್ಲಿ, ಬಲಾತ್ಕಾರದ ಪ್ರಕರಣಗಳಲ್ಲಿ 100 ಆರೋಪಿಗಳಲ್ಲಿ, ಕೇವಲ 27 ಜನರಿಗೆ ಶಿಕ್ಷೆಯಾಗುತ್ತದೆ, ಅಂದರೆ, ಈ ಪ್ರಮಾಣ ಕೇವಲ ಶೇ. 27 ರಷ್ಟಿದೆ. 2022ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ 18 ಸಾವಿರ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. 5 ಸಾವಿರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. 12 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. (ಇದು ಭಾರತೀಯ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗೆ ನಾಚಿಕೆಗೇಡು ! ಇಂತಹ ಪರಿಸ್ಥಿತಿ ಇದ್ದರೆ, ದೇಶದಲ್ಲಿ ಬಲಾತ್ಕಾರದ ಘಟನೆಗಳು ಎಂದಾದರೂ ನಿಲ್ಲುತ್ತವೆಯೇ ? – ಸಂಪಾದಕರು)

ಸಂಪಾದಕೀಯ ನಿಲುವು

  • ‘ಭಾರತ ಅತ್ಯಾಚಾರಿಗಳ ದೇಶವಾಗಿದೆ’, ಎಂದು ಯಾರಾದರೂ ಟೀಕಿಸುತ್ತಿದ್ದರೆ, ಅದನ್ನು ಹೇಗೆ ತಡೆಯುವಿರಿ ?
  • ಈ ಅಂಕಿಅಂಶಗಳು ದೇಶವನ್ನು ತಲೆತಗ್ಗಿಸುವಂತಿದೆ. ಇದನ್ನು ಎಲ್ಲಪಕ್ಷದ ಆಡಳಿತಗಾರರು, ಪೊಲೀಸರು, ಆಡಳಿತ ಮತ್ತು ನ್ಯಾಯ ವ್ಯವಸ್ಥೆಯ ವಿಚಾರವನ್ನು ಮಾಡುತ್ತಿದ್ದಾರೆಯೇ ? ಮತ್ತು ಅದಕ್ಕನುಗುಣವಾಗಿ ಕಾರ್ಯ ಮಾಡುತ್ತಿದ್ದಾರೆಯೇ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ !
  • ಇಲ್ಲಿಯವರೆಗೆ ಬಲಾತ್ಕಾರಿಗಳಿಗೆ ಎಂದಿಗೂ ಕಠಿಣ ಶಿಕ್ಷೆಯಾಗದೇ ಇರುವುದರಿಂದ ಮತ್ತು ಅದು ಆಗಬಾರದು ಎಂದು ಸಮಾಜಕಂಟಕರ ಗುಂಪು ನಿರಂತರವಾಗಿ ಪ್ರಯತ್ನಿಸುತ್ತಿರುವುದರಿಂದ ಬಲಾತ್ಕಾರದ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ !