ನಟ ಸಿದ್ದಕೀ ಬಲತ್ಕಾರ ಮಾಡಿದ್ದ ಮತ್ತು ನಟ ರಿಯಾಜ್ ಖಾನ್ ಅಶ್ಲೀಲ ಪ್ರಶ್ನೆ ಕೇಳಿದ್ದ ! – ನಟಿ ರೇವತಿ ಸಂಪತ್ ಆರೋಪ

ಕೇರಳ: ಮಲಯಾಳಂ ಸಿನಿಮಾರಂಗದಲ್ಲಿ ಅನೈತಿಕ ಸಂಬಂಧದ ಪ್ರಕರಣ !

ತಿರುವನಂತಪುರಂ (ಕೇರಳ) – ನ್ಯಾಯಮೂರ್ತಿ ಹೇಮಾ ಸಮಿತಿಯು ನಟಿಯರ ಲೈಂಗಿಕ ಶೋಷಣೆಯ ಬಗ್ಗೆ ತಯಾರಿಸಿರುದ ವರದಿ ಬಹಿರಂಗವಾದ ಬಳಿಕ ಮಲಯಾಳಂ ಚಲನಚಿತ್ರದಲ್ಲಿ ರಂಪಾರಾದ್ಧಾಂತ ನಿರ್ಮಾಣವಾಗಿದೆ. ಇದರ ಹಿನ್ನೆಲೆಯಲ್ಲಿ ಮಲಯಾಳಂ ನಟಿ ರೇವತಿ ಸಂಪತ್ ಅವರು ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿನ ಹಿರಿಯ ನಟ ಸಿದ್ದಿಕೀ ಮತ್ತು ನಟ ರಿಯಜ್ ಖಾನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬಳಿಕ ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯ ಮುಖ್ಯ ಸಚಿವರಾಗಿರುವ ಸಿದ್ದಿಕೀ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿ ಎಲ್ಲರಿಗೂ ನ್ಯಾಯ ಸಿಗುವುದು ಎಂದು ಸಿದ್ದಿಕೀ ಅವರು ಆಶ್ವಾಸನೆ ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದರು. ಕಲಾವಿದರ ಸಂಘಟನೆಯ ಅಧ್ಯಕ್ಷರಾದ ಮೋಹನ ಲಾಲ್ ಅವರಿಗೆ ಸಿದ್ದಿಕೀ ಪತ್ರ ಮುಖೇನ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ನಟ ಸಿದ್ದಿಕೀ ಅವರ ಮೇಲೆ ೨೦೧೯ ರಲ್ಲಿ ರೇವತಿ ಸಂಪತ್ ಬಲಾತ್ಕಾರದ ಗಂಭೀರ ಆರೋಪ ಮಾಡಿದ್ದರು ; ಆದರೆ ಆಗ ಈ ಪ್ರಕರಣ ಬಹಳಷ್ಟು ಚರ್ಚೆಗೆ ಬಂದಿರಲಿಲ್ಲ. ಈಗ ಹೇಮಾ ಸಮಿತಿಯ ವರದಿ ಬಂದ ನಂತರ ಅವರು ಮತ್ತೆ ಸಿದ್ದಿಕೀ ಅವರ ಮೇಲೆ ಆರೋಪ ಮಾಡಿದ್ದಾರೆ.

ರೇವತಿ ಸಂಪತ್ ಅವರು, ೨೦೧೬ ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಸಿದ್ದಿಕೀ ನನ್ನನ್ನು ಸಂಪರ್ಕಿಸಿದ್ದನು. ಅಭಿನಯದಲ್ಲಿ ನನಗೆ ಆಸಕ್ತಿ ಇರುವುದು ಗಮನಿಸಿ ಸಿದ್ದಿಕೀ ನನಗೆ ಅವನ ಚಲನಚಿತ್ರದಲ್ಲಿ ಅವಕಾಶ ನೀಡುವ ಕಾರಣದಿಂದ ಆತ್ಮೀಯತೆ ಹೆಚ್ಚಿಸಿದನು. ಸಿದ್ದಿಕೀ ಚಲನಚಿತ್ರದ ಪ್ರೇಮಿಯರ್ ಶೋಗಾಗಿ ನನಗೆ ಆಮಂತ್ರಿಸಲಾಗಿತ್ತು. ಕಾರ್ಯಕ್ರಮದ ನಂತರ ಅವನು ನನ್ನನ್ನು ತಿರುವನಂತಪುರಂದಲ್ಲಿನ ಹೋಟೆಲ್ ಮಸ್ಕತ್ ಗೆ ಕರೆದುಕೊಂಡು ಹೋದನು ಮತ್ತು ಹೋಟೆಲ್ ನ ಕೋಣೆಯೊಂದರಲ್ಲಿ ನನ್ನ ಮೇಲೆ ಬಲತ್ಕಾರ ಮಾಡಿದನು. ಅವನ ಮಗನ ಚಲನಚಿತ್ರದಲ್ಲಿ ಕೆಲಸ ಮಾಡುವುದರ ಕುರಿತು ಮಾತನಾಡುವುದಕ್ಕಾಗಿ ಸಿದ್ಧಕೀ ನನ್ನ ಜೊತೆಗೆ ಸಂಪರ್ಕಿಸಿದ್ದನು. ಅವನು ನನಗೆ ‘ಮಗಳೇ’ ಎಂದು ಸಂಬೋಧಿಸಿದ್ದರಿಂದ ನನಗೆ ಏನೂ ಅನುಮಾನ ಬಂದಿರಲಿಲ್ಲ ಮತ್ತು ನಾನು ಅವನ ಜೊತೆಗೆ ಹೋದೆ; ಆದರೆ ಹೋಟೆಲಿನ ಕೋಣೆಯಲ್ಲಿ ಅವನು ಅನುಚಿತವಾಗಿ ವರ್ತಿಸಿದನು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದನು. ಆ ಭಯಾನಕ ಘಟನೆಯ ನೋವಿನಿಂದ ನಾನು ಇಲ್ಲಿಯವರೆಗೂ ಹೊರಬಂದಿಲ್ಲ. ನಟ ಸಿದ್ದಿಕೀ ಬಹಳ ನೀಚ ವ್ಯಕ್ತಿಯಾಗಿದ್ದಾನೆ. ನನ್ನ ಕೆಲವು ಸ್ನೇಹಿತರ ಮೇಲೆ ಕೂಡ ಅವನು ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ನಟಿ ರೇವತಿ ಆರೋಪಿಸಿದ್ದಾರೆ.

ನಟ ರಿಯಾಜ ಖಾನ್ ಇವನ ಮೇಲೆ ಕೂಡ ಆರೋಪ

ನಟ ರಿಯಾಜ್ ಖಾನ್ ಇವನ ವಿರುದ್ಧವೂ ಕೂಡ ನಟಿ ರೇವತಿ ಸಂಪತ್ ಗಂಭೀರ ಆರೋಪ ಮಾಡಿದ್ದಾರೆ. ಓರ್ವ ಛಾಯ ಚಿತ್ರಕಾರರಿಂದ ನನ್ನ ನಂಬರ್ ಪಡೆದ ರಿಯಾಜ್ ಖಾನ್ ‘ಶಾರೀರಿಕ ಸಂಬಂಧ ಬೆಳೆಸಲು ಇಷ್ಟ ಪಡುತ್ತೀಯಾ?’ ಎಂದು ಫೋನ್ ನಲ್ಲಿ ಕೇಳಿದ್ದನು ಎಂದು ನಟಿ ರೇವತಿ ಹೇಳಿದ್ದಾರೆ.

ನಟಿಯ ಲೈಂಗಿಕ ಶೋಷಣೆಯ ವಿಚಾರಣೆಗಾಗಿ ವಿಶೇಷ ತನಿಖಾ ತಂಡದ ಸ್ಥಾಪನೆ !

ತಿರುವನಂತಪುರಂ – ಮಲಯಾಳಂ ಚಲನಚಿತ್ರದಲ್ಲಿ ಲೈಂಗಿಕ ಶೋಷಣೆಯ ಆರೋಪದ ವಿಚಾರಣೆ ನಡೆಸಲು ಕೇರಳ ಸರಕಾರದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ವಿಶೇಷ ತನಿಖಾ ತಂಡದ (ಎಸ್.ಐ.ಟಿ ಯ ) ಸ್ಥಾಪನೆ ಮಾಡುವ ನಿರ್ಣಯ ತೆಗೆದುಕೊಂಡಿದೆ. ಆಗಸ್ಟ್ ೧೯ ರಂದು ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ಕೆ. ಹೇಮಾ ಅವರು ಮಲಯಾಳಂ ಚಲನಚಿತ್ರ ಕ್ಷೇತ್ರದಲ್ಲಿ ನಟಿಯರ ಜೊತೆಗೆ ದುರ್ವರ್ತನೆಯ ಬಗ್ಗೆ ಕೇರಳದ ಮುಖ್ಯಮಂತ್ರಿ ಪೀನರಾಯಿ ವಿಜಯನ್ ಅವರಿಗೆ ೨೯೫ ಪುಟದ ವರದಿ ಪ್ರಸ್ತುತಪಡಿಸಿದ್ದರು.

ಈ ವರದಿಯಲ್ಲಿ ಮಲಯಾಳಂ ಸಿನಿರಂಗಲ್ಲಿ ಕಾಸ್ಟಿಂಗ್ ಕೌಚ್ (ಚಲನಚಿತ್ರದಲ್ಲಿ ಅವಕಾಶ ಪಡೆಯುವುದಕ್ಕಾಗಿ ನಟಿಯರು ಸಂಬಂಧಿತರ ಶಾರೀರಿಕ ಅವಶ್ಯಕತೆ ಪೂರ್ಣಗೊಳಿಸುವುದು) ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಸಮಸ್ಯೆಗಳ ಉಲ್ಲೇಖಿಸಲಾಗಿದೆ. ಚಲನಚಿತ್ರ ನಟರು ಮನಸ್ವೇಚ್ಛೆ ವರ್ತಿಸುತ್ತಾರೆ, ನಿರ್ಮಾಪಕರು ಪಾತ್ರಗಳ ಬದಲು ಶಾರೀರಿಕ ಸಂಬಂಧದ ಬೇಡಿಕೆ ಸಲ್ಲಿಸುತ್ತಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಮತಾಂಧರು ಎಷ್ಟೇ ದೊಡ್ಡವರಾದರೂ, ಅವರ ಮೂಲ ಕಾಮುಕ ಪ್ರವೃತ್ತಿ ಹೋಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಬೇರೆ ಸಮಯದಲ್ಲಿ ಶರಿಯಾ ಕಾನೂನಿನ ಗುಣಗಾನ ಮಾಡುವ ಮುಸಲ್ಮಾನ ನಾಯಕರು ಈಗ ಈ ನಟನಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಒತ್ತಾಯಿಸುವರೆ?