43 ವರ್ಷಗಳಲ್ಲಿ ಅಸ್ಸಾಂ ನಲ್ಲಿ ಶೇ. 56 ರಷ್ಟು ಮುಸಲ್ಮಾನರು ನುಸುಳಿದ್ದಾರೆ !

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರಿಂದ ಮಾಹಿತಿ

ಗೌಹಾಟಿ (ಆಸ್ಸಾಂ) – ಆಸ್ಸಾಂನಲ್ಲಿ ಸುಮಾರು 48 ಸಾವಿರ ನುಸುಳುಕೋರರನ್ನು ಗುರುತಿಸಲಾಗಿದ್ದು, ಅವರಲ್ಲಿ ಶೇ. 56 ರಷ್ಟು ಮುಸ್ಲಿಮರಾಗಿದ್ದಾರೆ. ಈ ಮಾಹಿತಿಯನ್ನು ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ನುಸುಳುಕೋರರ ಪ್ರಶ್ನೆಗೆ ಉತ್ತರ ನೀಡುವಾಗ ಹೇಳಿದರು. 1971 ರಿಂದ 2014 ರ 43 ವರ್ಷಗಳ ಅವಧಿಯಲ್ಲಿ 47 ಸಾವಿರದ 928 ಬಾಂಗ್ಲಾದೇಶಿಗಳು ನುಸುಳಿದ್ದಾರೆ. ಸರಕಾರದ ವಿದೇಶಿ ಸಚಿವಾಲಯ ಇವರೆಲ್ಲರನ್ನೂ ‘ವಿದೇಶಿಯರು’ ಎಂದು ಘೋಷಿಸಿದ್ದಾರೆ. ಇವರಲ್ಲಿ ಶೇ.56ರಷ್ಟು ಅಂದರೆ 27 ಸಾವಿರದ 309 ಮಂದಿ ಮುಸ್ಲಿಮರಿದ್ದರೆ, 20 ಸಾವಿರದ 613 ಮಂದಿ ಹಿಂದೂಗಳಿದ್ದಾರೆ.

ಮುಖ್ಯಮಂತ್ರಿ ಮಾತು ಮುಂದುವರಿಸಿ,

1. ಮುಸ್ಲಿಂ ನುಸುಳುಕೋರರಲ್ಲಿ ಜೋಹರಾತ್ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 4 ಸಾವಿರದ 182 ನುಸುಳುಕೋರರು ಇದ್ದರೆ, ಗೌಹಾಟಿ ನಗರದಲ್ಲಿ 3 ಸಾವಿರದ 897 ಮುಸ್ಲಿಂ ನುಸುಳುಕೋರರನ್ನು ಗುರುತಿಸಲಾಗಿದೆ.

2. ದಿಬ್ರುಗಢದಲ್ಲಿ 2 ಸಾವಿರದ 782, ಹೋಜಯಿ, ಶಿವಸನಗರ, ನಾಗಾಂವ, ಕಛಾರ ಜಿಲ್ಲೆಯಲ್ಲಿ ತಲಾ 2 ಸಾವಿರಕ್ಕೂ ಹೆಚ್ಚು ಮುಸ್ಲಿಂ ನುಸುಳುಕೋರರು ವಾಸಿಸುತ್ತಿದ್ದಾರೆ.

3. ಬಾಂಗ್ಲಾದೇಶದಿಂದ ಬರುವ ಹೆಚ್ಚಿನ ಸಂಖ್ಯೆಯ ಹಿಂದೂಗಳು ಕಛಾರ, ಗೌಹಾಟಿ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಇದ್ದಾರೆ.

4. 1971 ರಲ್ಲಿ ಭಾರತಕ್ಕೆ ಬಂದ ನುಸುಳುಕೋರರನ್ನು ಗುರುತಿಸಲು ಕಾರಣವೆಂದರೆ ‘1985 ರ ಆಸ್ಸಾಂ ಒಪ್ಪಂದ’ವಾಗಿದೆ. ಈ ಒಪ್ಪಂದದಂತೆ 1971 ರಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ನುಸುಳಿರುವ ಜನರನ್ನು ನುಸುಳುಕೋರರೆಂದು ಪರಿಗಣಿಸಲಾಗುವುದು.

5. ರಾಜ್ಯದಲ್ಲಿ ಶೇ. 72 ರಷ್ಟು ಜನರು ಆಸ್ಸಾಮಿ ಭಾಷೆಯನ್ನು ಮಾತನಾಡುತ್ತಿದ್ದರೆ, ಶೇಕಡಾ 28 ರಷ್ಟು ಜನರು ಬಂಗಾಳಿ ಮಾತನಾಡುತ್ತಾರೆ.

ಹಿಂದೂ ಅಲ್ಲ, ಬದಲಾಗಿ ಮುಸ್ಲಿಮರು ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ! – ಮುಖ್ಯಮಂತ್ರಿ ಸರಮಾ

ಮುಖ್ಯಮಂತ್ರಿ ಸರಮಾ ಇವರು ಮಾತು ಮುಂದುವರೆಸಿ, ಬಾಂಗ್ಲಾದೇಶದಲ್ಲಿ ಸರಕಾರ ಬದಲಾದನಂತರ ಅಲ್ಲಿ ಹಿಂದೂಗಳು ಹೋರಾಡುತ್ತಿದ್ದರೆ, ಮುಸ್ಲಿಮರು ಓಡಿಹೋಗಿ ಭಾರತಕ್ಕೆ ನುಸುಳುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 35 ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ ಬಾಂಗ್ಲಾದೇಶದಿಂದ ಒಬ್ಬನೇ ಒಬ್ಬ ಹಿಂದೂವೂ ಭಾರತಕ್ಕೆ ಬಂದಿಲ್ಲ. ಇತ್ತೀಚೆಗೆ ಇಬ್ಬರನ್ನು ಬಂಧಿಸಿ ಅಸ್ಸಾಂನ ಕರೀಂಗಂಜ್‌ಗೆ ಕಳುಹಿಸಲಾಗಿತ್ತು. ಅಲ್ಲಿನ ಹಿಂದೂ ಸಮುದಾಯ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿಲ್ಲ, ಆದರೆ ಮುಸ್ಲಿಮರು ನಿರಂತರವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. (ಮುಸ್ಲಿಮರು ಎಲ್ಲೆಡೆ ‘ದಾರುಲ್ ಇಸ್ಲಾಂ’ (ಇಸ್ಲಾಮಿಕ್ ಸ್ಟೇಟ್) ಸ್ಥಾಪಿಸಲು ಬಯಸುತ್ತಾರೆ, ಅವರು ಎಷ್ಟೇ ಬಡವರಾಗಿದ್ದರೂ, ಅವರು ‘ದಾರುಲ್ ಹರಬ್’ (ಅನ್-ಇಸ್ಲಾಮಿಕ್ ಪ್ರಾಂತ್ಯಗಳು) ಸ್ಥಳಗಳಿಗೆ ಹೋಗುತ್ತಾರೆ ಇದು ಸತ್ಯವಾಗಿದೆ ! – ಸಂಪಾದಕರು)

ಅವರು ತಮ್ಮ ಮಾತು ಮುಂದುವರಿಸಿ, ಬಾಂಗ್ಲಾದೇಶಿ ಮುಸ್ಲಿಮರು ಆಸ್ಸಾಂ ಮೂಲಕ ಬೆಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರಿಗೆ ಹೋಗುವವರಿರುತ್ತಾರೆ ಎಂದು ಹೇಳಿದರು. ಬಾಂಗ್ಲಾದೇಶದ ಮಸೂಮ್ ಖಾನ್ ಮತ್ತು ಸೋನಿಯಾ ಅಖ್ತರ್ ಇವರಿಬ್ಬರೂ ಜವಳಿ ಉದ್ಯಮಕ್ಕಾಗಿ ಮೇಲಿನ ಎರಡು ನಗರಗಳಿಗೆ ಹೋಗಲು ಬಯಸಿದ್ದರು. ಮಾಸೂಮ್ ಬಾಂಗ್ಲಾದೇಶದ ಮಾಡೆಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ಸೋನಿಯಾ ಢಾಕಾ ನಿವಾಸಿಯಾಗಿದ್ದಾರೆ. ಇಬ್ಬರನ್ನೂ ಆಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ಇವು ಸರಕಾರದ ಅಂಕಿಅಂಶಗಳಾಗಿವೆ. ವಾಸ್ತವದಲ್ಲಿ, ನುಸುಳುವಿಕೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಸಂಭವಿಸಿದೆ ಎಂದು ಯೋಚಿಸದಿರುವುದು ಉತ್ತಮ ! ಕೇಂದ್ರ ತನಿಖಾ ಇಲಾಖೆಯ ಮಾಜಿ ಮುಖ್ಯಸ್ಥ ಜೋಗಿಂದರ್ ಸಿಂಗ್ ಅವರ ಅಭಿಪ್ರಾಯದ ಪ್ರಕಾರ, ‘ಅಸ್ಸಾಂ ಒಂದರಲ್ಲೇ ಸುಮಾರು 1 ಕೋಟಿ ಮುಸ್ಲಿಂ ನುಸುಳುಕೋರರು ವಾಸಿಸುತ್ತಿದ್ದಾರೆ.’ ಇದರಿಂದ ನುಸುಳುಕೋರರ ಸಮಸ್ಯೆಯ ಭೀಕರತೆಯು ಗಮನಕ್ಕೆ ಬರುವುದು !
  • ಕೆಲವು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಸರಮಾ ನೀಡಿದ ಹೇಳಿಕೆಯ ಪ್ರಕಾರ, ‘ಬಾಂಗ್ಲಾದೇಶದ ನುಸುಳುಕೋರರು ಅಸ್ಸಾಂನ 40 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರನ್ನು ಶಾಸಕರಾಗಿ ಆಯ್ಕೆ ಮಾಡಬೇಕೆಂದು ನಿರ್ಧರಿಸುತ್ತಾರೆ. ಇದರಿಂದ ನುಸುಳುವಿಕೆಯ ವಾಸ್ತವ ಗಮನಕ್ಕೆ ಬರುತ್ತದೆ !
  • ಕಳೆದ 5 ದಶಕಗಳಲ್ಲಿ ನುಸುಳುಕೋರರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಇಲ್ಲಿಯವರೆಗಿನ ಎಲ್ಲಾ ಸರಕಾರಗಳಿಗೆ ನಾಚಿಕೆಗೇಡು !