ಕೊಯಿಮತ್ತೂರು (ತಮಿಳುನಾಡು) ಮುಖ್ಯೋಪಾಧ್ಯಾಯರ ಸಹಿತ ೪ ಶಿಕ್ಷಕರ ಬಂಧನ !
ಚೆನ್ನೈ (ತಮಿಳುನಾಡು) – ಶಾಲೆಯೊಂದರಲ್ಲಿ ೯ ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಓರ್ವ ಸಂತ್ರಸ್ತ ವಿದ್ಯಾರ್ಥಿನಿಯು ಈ ಬಗ್ಗೆ ಮಾಹಿತಿ ನೀಡಿದ್ದು, ನಟರಾಜನ್ ಎಂಬ ಶಿಕ್ಷಕ ಅನೇಕ ತಿಂಗಳಿಂದ ಹೆಚ್ಚುವರಿ ತರಗತಿಯ ಹೆಸರಿನಲ್ಲಿ ಆಕೆಯ ಲೈಂಗಿಕ ಶೋಷಣೆ ಮಾಡುತ್ತಿದ್ದನು.(ಇಂತಹ ಕಾಮುಕ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಅಂಟಿರುವ ಕಳಂಕ ! – ಸಂಪಾದಕರು) ಅನ್ಯ ವಿದ್ಯಾರ್ಥಿನಿಯರ ವಿಚಾರಣೆ ಮಾಡಿದಾಗ ನಟರಾಜನ್ ೭, ೮ ಹಾಗೂ ೯ನೆಯ ತರಗತಿಯಲ್ಲಿ ಓದುತ್ತಿರುವ ೯ ವಿದ್ಯಾರ್ಥಿನಿಯರಿಗೆ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿರುವುದು ಗಮನಕ್ಕೆ ಬಂದಿದೆ. ಮುಖ್ಯೋಪಾಧ್ಯಾಯ ಮತ್ತು ತರಗತಿ ಶಿಕ್ಷಕರಿಗೆ ಈ ಬಗ್ಗೆ ದೂರು ನೀಡಿದರೂ ಕೂಡ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತ ವಿದ್ಯಾರ್ಥಿಯರು ಹೇಳಿದರು. ಸದ್ಯ ಮುಖ್ಯೋಪಾಧ್ಯಾಯ ಮತ್ತು ನಾಲ್ವರು ಶಿಕ್ಷಕರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಕೋಲಕಾತಾ ಮತ್ತು ಬದಲಾಪುರ ನಲ್ಲಿನ ಘಟನೆಯ ನಂತರ ದೇಶದಲ್ಲಿನ ವಾತಾವರಣ ಕುದಿಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಅನೇಕ ವಿಡಿಯೋಗಗಳಲ್ಲಿ ಹುಡುಗಿಯರು ಕಾನೂನು ಕೈಗೆತ್ತಿಕೊಂಡು ಇಂತಹ ಕೆಲಸ ಮಾಡುವವರನ್ನು ಕೊಲ್ಲಬೇಕು, ಎಂಬ ಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಲೇಬೇಕೆಂದು ಕೊಯಿಮತ್ತೂರು ನಂತಹ ಘಟನೆಯ ನಂತರ ಜನರಿಗೆ ಅನಿಸುತ್ತಿದೆ ! |