ಪೊಲೀಸರ ವಶದಿಂದ ಆರೋಪಿ ತಫಾಜುಲ್ ಇಸ್ಲಾಂ ಪರಾರಿಯಾಗುತ್ತಿರುವಾಗ ಕೆರೆಯಲ್ಲಿ ಬಿದ್ದು ಸಾವು

ಅಸ್ಸಾಂನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ

ನಾಗಾವ (ಅಸ್ಸಾಂ) – ನಾಗಾವ ಜಿಲ್ಲೆಯ ಧಿಂಗ್ ಪ್ರದೇಶದಲ್ಲಿ 14 ವರ್ಷದ ಹಿಂದೂ ಹುಡುಗಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರ ಹೆಸರು ಬಹಿರಂಗವಾಗಿತ್ತು. ಇದರಲ್ಲಿ ಕೇವಲ ತಫಾಝುಲ ಇಸ್ಲಾಮ ಹೆಸರಿನ ಆರೋಪಿಯ ಬಂಧನವಾಗಿತ್ತು. ಪೊಲೀಸರು ಆರೋಪಿಯನ್ನು ಘಟನಾಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಅವನು ಪರಾರಿಯಾಗಲು ಪ್ರಯತ್ನಿಸಿದನು. ಈ ಪ್ರಯತ್ನದಲ್ಲಿ ಅವನು ಕೆರೆಗೆ ಹಾರಿದನು; ಆದರೆ ಅಲ್ಲಿ ಅವನು ಸಾವನ್ನಪ್ಪಿದನು. ಕೆರೆಯಲ್ಲಿ ಅವನನ್ನು ಶೋಧಿಸಲು ಪೊಲೀಸರು ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ಕರೆಸಿ, ಅವನ ಮೃತದೇಹವನ್ನು ಹೊರಗೆ ತೆಗೆದರು. ಅವನಿಗೆ ಕೈಕೊಳ ಹಾಕಿದ್ದ ಪೊಲೀಸನಿಗೂ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂತ್ರಸ್ತ ಹುಡುಗಿ ರಾತ್ರಿ 8 ಗಂಟೆಯ ಸುಮಾರಿಗೆ ಟ್ಯೂಷನ್ ಮುಗಿಸಿ ಸೈಕಲನಿಂದ ಮನೆಗೆ ಮರಳುತ್ತಿರುವಾಗ ಬೈಕ್‌ನಿಂದ ಬಂದ ಮೂವರು ಅವಳ ಮೇಲೆ ಬಲಾತ್ಕಾರ ಮಾಡಿದರು. ಬಲಾತ್ಕಾರದ ಬಳಿಕ ಅವಳನ್ನು ಗಾಯಗೊಂಡ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಒಂದು ಕೆರೆಯ ಹತ್ತಿರದ ರಸ್ತೆಯ ಬದಿಗೆ ಎಸೆದು ಹೋದರು. ಸ್ಥಳೀಯರು ಅವಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಈ ಘಟನೆಯ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಜನರು ಪ್ರತಿಭಟಿಸಿ ರಸ್ತೆಗಿಳಿದರು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಒಂದೇ ಸಮಾಜದ ಜನರಿಗೆ ಈ ರೀತಿಯ ಅಪರಾಧಗಳಿಗೆ ಪ್ರಚೋದನೆ ನೀಡಲಾಗುತ್ತಿದೆ ! – ಮುಖ್ಯಮಂತ್ರಿ ಸರಮಾ

ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮಾತನಾಡಿ, ಹಿಂದೂ ಹುಡುಗಿಯರೊಂದಿಗೆ ಇಂತಹ ಘೋರ ಅಪರಾಧ ಮಾಡಲು ಧೈರ್ಯ ತೋರಿಸುವ ಅಪರಾಧಿಗಳನ್ನು ಕಾನೂನು ಬಿಡುವುದಿಲ್ಲ. ಲೋಕಸಭೆಯ ಚುನಾವಣೆಯ ಬಳಿಕ ಒಂದು ನಿರ್ದಿಷ್ಟ ಸಮುದಾದ ಒಂದು ಗುಂಪು ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರಿಗೆ ಇಂತಹ ಅಪರಾಧಗಳನ್ನು ಮಾಡಲು ಪ್ರಚೋದಿಸಲಾಗುತ್ತಿದೆ; ಆದರೆ ನಾವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಬಿಡುವುದಿಲ್ಲ.

ಸಂಪಾದಕೀಯ ನಿಲುವು

ಜಾತ್ಯಾತೀತವಾದಿಗಳು, ಪ್ರಗತಿ(ಅಧೋ)ಪರರು, ಮುಸಲ್ಮಾನರನ್ನು ಓಲೈಸುವವರು ಈಗ ಈ ಘಟನೆಯಿಂದ ಭಾಜಪ ಸರಕಾರವನ್ನು ಟೀಕಿಸಿ, `ಇದು ಉದ್ದೇಶಪೂರ್ವಕವಾಗಿ ಮಾಡಿರುವ ಹತ್ಯೆಯಾಗಿದೆ’ ಎಂದು ಆರೋಪಿಸುತ್ತಾರೆ !