ಎಲ್ಲಾ ಶಾಲಾ ಮತ್ತು ಕಾಲೇಜುಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವಂತೆ ಮಧ್ಯ ಪ್ರದೇಶದ ಭಾಜಪ ಸರಕಾರದ ಆದೇಶ
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ರಾಜ್ಯದಲ್ಲಿನ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಆದೇಶ ನೀಡಿದೆ. ಸರಕಾರವು ಎಲ್ಲಾ ಇಲಾಖೆಯ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಆದೇಶ ಪ್ರಸಾರ ಮಾಡಿ, ಆಗಸ್ಟ್ ೨೬ ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರತಿಯೊಂದು ಜಿಲ್ಲೆಯಲ್ಲಿರುವ ಶ್ರೀಕೃಷ್ಣನ ದೇವಸ್ಥಾನದ ಸ್ವಚ್ಛತೆ ಮಾಡಬೇಕು ಮತ್ತು ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆ ಮಾಡಬೇಕು. ಇದಲ್ಲದೆ ಎಲ್ಲಾ ಸರಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶ್ರೀಕೃಷ್ಣನು ಪಡೆದಿರುವ ಶಿಕ್ಷಣ, ಸ್ನೇಹ ಮತ್ತು ಅವನು ಬೋಧಿಸಿರುವ ಜೀವನದ ತತ್ವ ಜ್ಞಾನದ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆ ಮಾಡಬೇಕು ಎಂದು ಹೇಳಿದೆ.
Schools and Colleges directed to hold events to celebrate Krishna Janmashtami by the BJP government in Madhya Pradesh.
Programs that highlight Bhagwan Shri Krishna’s teachings, as well as themes of friendship, life philosophy and values to be organised.
Commendable decision by… pic.twitter.com/0YADOUUhiI
— Sanatan Prabhat (@SanatanPrabhat) August 24, 2024
ಶಿಕ್ಷಣದ ಮತಾಂತರವಾಗುತ್ತಿದೆಯಂತೆ ! – ಕಾಂಗ್ರೆಸ್
ಸರಕಾರದ ಈ ಆದೇಶಕ್ಕೆ ಕಾಂಗ್ರೆಸ್ ಶಿಕ್ಷಣದ ಮತಾಂತರ ಎಂದು ಹೇಳಿದೆ. (ಶಿಕ್ಷಣದ ಮತಾಂತರ ಅಲ್ಲ, ಇದು ‘ಘರವಾಪಸಿ’ ಆಗುತ್ತಿದೆ. ಕಾಂಗ್ರೆಸ್ ಶಿಕ್ಷಣದ ‘ಹಸಿರುಕರಣ’ ಮಾಡಿತ್ತು, ಅದನ್ನು ಈಗ ಸರಿಪಡಿಸಲಾಗುತ್ತಿದೆ ! – ಸಂಪಾದಕರು) ಶೈಕ್ಷಣಿಕ ಸಂಸ್ಥೆ ಇದು ಶಿಕ್ಷಣದ ಕೇಂದ್ರವಾಗಿದ್ದು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗಬೇಕು ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನ ಶಾಸಕ ಆರೀಫ್ ಮಸೂದ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರಕಾರ ಶೈಕ್ಷಣಿಕ ಸಂಸ್ಥೆಗಳನ್ನು ನಾಶ ಮಾಡುವಲ್ಲಿ ಏಕೆ ತೊಡಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು. ಧಾರ್ಮಿಕ ಹಬ್ಬದ ದಿನದಂದು ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ ಮತ್ತು ಎಲ್ಲಾ ಧರ್ಮದ ಜನರು ತಮ್ಮ ತಮ್ಮ ಪದ್ಧತಿಯ ಪ್ರಕಾರ ಈ ದಿನವನ್ನು ಆಚರಿಸುತ್ತಾರೆ. ಒಂದು ಕಡೆ ನೀವು ಶೈಕ್ಷಣಿಕ ಸಂಸ್ಥೆಯಲ್ಲಿ ಜನ್ಮಾಷ್ಟಮಿ ಅನಿವಾರ್ಯ ಎಂದು ಹೇಳುತ್ತೀರಾ ಮತ್ತು ಇನ್ನೊಂದು ಕಡೆ ನಮ್ಮ ಮದರಸಾಗಳ ಮೇಲೆ ಸವಾಲ್ ಹಾಕುತ್ತೀರಾ. (ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿರುವುದರಿಂದ ಮಕ್ಕಳು ಆದರ್ಶ ನಾಗರೀಕರಾಗುವರು ಮತ್ತು ನೈತಿಕತೆ ಕಲಿಯುವರು. ಮದರಸಾಗಳಲ್ಲಿ ಶಿಕ್ಷಣ ಪಡೆದವರು ಭಯೋತ್ಪಾದಕರಾಗುತ್ತಾರೆ, ಎಂಬುದೇ ಬಹಳಷ್ಟು ಬಾರಿ ಕಂಡು ಬಂದಿದೆ, ಅಷ್ಟೇ ಅಲ್ಲದೆ ಮದರಸಾಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಅಲ್ಲಿಯ ಶಿಕ್ಷಕರೇ ಲೈಂಗಿಕ ದೌರ್ಜನ್ಯ ನಡೆಸುತ್ತಾರೆಂಬುದು ಪದೇ-ಪದೇ ಬೆಳಕಿಗೆ ಬಂದಿದೆ ! – ಸಂಪಾದಕರು) ನಿಮಗೆ ನಿಜವಾಗಲೂ ಬೇಕಾಗಿರುವುದೇನು? ಎಂದು ಮಸೂದ್ ಪ್ರಶ್ನಿಸಿದರು.
ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಿದರೆ ಕಾಂಗ್ರೆಸ್ಸಿನವರು ಮಥುರೆಗೆ ಹೋಗುವುದನ್ನೇ ನಿಲ್ಲಿಸುವರೆ ? – ಮುಖ್ಯಮಂತ್ರಿ ಮೋಹನ ಯಾದವ
ರಾಜ್ಯದ ಮುಖ್ಯಮಂತ್ರಿ ಮೋಹನ ಯಾದವ ಅವರು ಕಾಂಗ್ರೆಸ್ಸಿಗೆ ಪ್ರತ್ಯುತ್ತರ ನೀಡುತ್ತಾ ಭಗವಾನ್ ಶ್ರೀಕೃಷ್ಣನು ೫ ಸಾವಿರ ವರ್ಷಗಳ ಹಿಂದೆಯೇ ಶಿಕ್ಷಣದ ಮಹತ್ವ ತಿಳಿಸಿದ್ದಾನೆ. ಶ್ರೀಕೃಷ್ಣನು ಮಥುರೆಯಿಂದ ಉಜ್ಜೈನಿಗೆ ಶಿಕ್ಷಣ ಪಡೆಯಲು ಬಂದಿದ್ದನು. ಶ್ರೀಮಂತ ಮತ್ತು ಬಡವರ ನಡುವಿನ ಸ್ನೇಹದ ದೊಡ್ಡ ಉದಾಹರಣೆ ಎಂದರೆ ನಾರಾಯಣಧಾಮ, ಇಲ್ಲಿಯ ಶ್ರೀಕೃಷ್ಣ ಮತ್ತು ಸುದಾಮ ಇವರಲ್ಲಿನ ಸ್ನೇಹ. ಭಗವಾನ್ ಶ್ರೀ ಕೃಷ್ಣನ ಶೌರ್ಯದ ಪ್ರತೀಕ ಇರುವ ಈ ಸ್ಥಾನಕ್ಕೆ ಮಹತ್ವ ನೀಡುವುದರಲ್ಲಿ ಅಯೋಗ್ಯವೇನಿದೆ ? ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನ ವಿಶೇಷ ಸ್ಥಳಗಳು ನಿಮಗೆ ನೆನಪಿಗೆ ಬರುವುದಿಲ್ಲ, ಆದರೆ ಮಥುರೆಯ ನೆನಪು ಏಕೆ ಬರುತ್ತದೆ ? ಮಥುರೆಯಲ್ಲಿ ಜನ್ಮಾಷ್ಟಮಿ ಬಹಳ ವಿಜೃಂಭಣೆಯಿಂದ ಆಚರಿಸಿದರೆ ಕಾಂಗ್ರೆಸ್ಸಿನವರು ಮಥುರೆಗೆ ಹೋಗುವುದನ್ನೇ ನಿಲ್ಲಿಸುವರೆ? ಇದು ಆಗೌರವವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಂದು ರಾಜ್ಯಗಳು ಹೀಗೆ ನಿರ್ಣಯ ತೆಗೆದುಕೊಳ್ಳುವ ಬದಲು ಕೇಂದ್ರ ಸರಕಾರವೇ ಹಿಂದುಗಳ ಹಬ್ಬಗಳನ್ನು ಆಚರಿಸಲು ಸಂಪೂರ್ಣ ದೇಶಾದ್ಯಂತ ಆದೇಶ ನೀಡಬೇಕೆಂದು ಹಿಂದುಗಳ ಅನಿಸಿಕೆಯಾಗಿದೆ. |