|
ಹುಬ್ಬಳ್ಳಿ – ನಾನು ನಿಮ್ಮ ಮಗಳನ್ನು ಪ್ರೀತಿಸುತ್ತೇನೆ. ಒಂದು ವೇಳೆ ನೀವು ಅವಳೊಂದಿಗೆ ಮದುವೆಯಾಗಲು ನಿರಾಕರಿಸಿದರೆ, ‘ನೇಹಾ ಹಿರೇಮಠ’ರಂತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಅಬ್ಬಾಸನ ವಿರುದ್ಧ ಅಪ್ರಾಪ್ತ ಬಾಲಕಿಯ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಬ್ಬಾಸ್‌ನನ್ನು ‘ಪೋಕ್ಸೊ’ ಕಾಯ್ದೆಯಡಿ ಬಂಧಿಸಿದ್ದಾರೆ. ಮದುವೆ ವಿಚಾರವಾಗಿ ನೇಹಾ ಹಿರೇಮಠಳನ್ನು ಆಕೆಯ ಮುಸ್ಲಿಂ ಸ್ನೇಹಿತ ಕಾಲೇಜ್ ಆವರಣದಲ್ಲಿಯೇ ಕೊಲೆ ಮಾಡಿದ್ದನು.
ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಅಬ್ಬಾಸ ಅವಳೊಂದಿಗೆ ಸ್ನೇಹ ಬೆಳೆಸಿದ್ದನು. ಆ ನಂತರ ಆಕೆಯನ್ನು ಹಲವು ಬಾರಿ ಗಾರ್ಡನ್ ಕರೆದುಕೊಂಡು ಹೋಗಿದ್ದನು. ಜೂನ್ 22ರಂದು ಅಬ್ಬಾಸ್ ಅವಳಿಗೆ ‘ನಿನ್ನನ್ನು ಮನೆಗೆ ಬಿಡುತ್ತೇನೆ’, ಎಂದು ಹೇಳಿ ರೇವಡಿಹಾಳ್ ಸೇತುವೆ ಬಳಿ ಅವಳ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದನು. ಆಗಸ್ಟ್ 18ರಂದು ಅಬ್ಬಾಸ್ ಬಾಲಕಿಯ ಮನೆ ಬಳಿ ಬಂದು ಜಗಳವಾಡಿದ್ದನು. ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದನು. ಈ ವೇಳೆ ಬಾಲಕಿಯ ಪೋಷಕರಿಗೆ ಆತ ಮೇಲಿನ ಬೆದರಿಕೆ ಹಾಕಿದ್ದಾನೆ.
ಸಂಪಾದಕೀಯ ನಿಲುವುಇಂತಹ ಮನಸ್ಥಿತಿ ಇರುವವರಿಗೆ ಜೀವಾವಧಿ ಶಿಕ್ಷೆಯಾಗಬೇಕು! |