ಬೆಂಗಳೂರು – 20 ವರ್ಷದ ಯುವಕನ ಮುಂದೆಯೇ 40 ವರ್ಷದ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಅತ್ಯಾಚಾರಿಗಳಿಗೆ ಸಹಾಯ ಮಾಡಿರುವುದು ವರದಿಯಾಗಿದೆ. ಮಹಿಳೆಯರ ಎದುರು ಅತ್ಯಾಚಾರ ನಡೆಯುತ್ತಿದ್ದರೂ ಅವರು ಶಾಂತದಿಂದ ನೋಡುತ್ತಿದ್ದರು. ಸಂತ್ರಸ್ತೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಪ್ರಕರಣದಲ್ಲಿ ಸೌಮ್ಯ ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಾಬುದ್ದೀನ್, ಸ್ವಾತಿ ಮತ್ತು ಮಾದೇಶ್ ಜೊತೆಗೆ ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ, ಆಕೆಯ ಮಗ ಮತ್ತು ಘಟನೆಗೆ ಸಂಬಂಧಿಸಿದ ಕೆಲವರು ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಜೋಸೆಫ್ ಮತ್ತು ಶ್ರೀನಿವಾಸ್ ಇಲ್ಲಿನ ದರೋಡೆಕೋರರಾಗಿದ್ದು ಸಂತ್ರಸ್ತೆ ಮತ್ತು ಆಕೆಯ ಮಗನಿಗೆ ಪರಿಚಿತರು. ಮೊಬೈಲ್ ಮತ್ತು ಚಿನ್ನದ ಚೈನ್ ಕಳ್ಳತನದ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆಕೆಯ ಮಗ ಸಹಭಾಗಿ ಆಗಿದ್ದರು ಎಂದು ಆರೋಪಿಗಳಿಗೆ ತಿಳಿದಿತ್ತು. ಆದ್ದರಿಂದ ಅವರಿಂದ ಹಣ ಕಿತ್ತುಕೊಳ್ಳಲು ಆರೋಪಿಗಳು ಮಹಿಳೆಯ ಅಪಹರಣ ಮಾಡಿ ಈ ಕೃತ್ಯ ಎಸಗಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮುಕರಿಗೆ ಗಲ್ಲುಶಿಕ್ಷೆ ವಿಧಿಸಬೇಕು! |