ಆರ್. ಜಿ. ಕರ ಆಸ್ಪತ್ರೆಯ ಮಾಜಿ ಪ್ರಮುಖ ಡಾ. ಸಂದೀಪ ಘೋಷ ಇವರ ೬೪ ಗಂಟೆ ವಿಚಾರಣೆ !

ಆಸ್ಪತ್ರೆಯ ತತ್ಕಾಲಿನ ಉಪಾಧಿಕ್ಷಕ ಅಖ್ತರ ಅಲಿ ಇವರಿಂದ ಘೋಷ್ ಇವರ ಮೇಲೆ ಗಂಭೀರ ಆರೋಪ !

ಕೋಲಕಾತಾ (ಬಂಗಾಲ) – ಇಲ್ಲಿಯ ಅರ್.ಜಿ. ಕರ ಆಸ್ಪತ್ರೆಯಲ್ಲಿ ೩೧ ವರ್ಷದ ಮಹಿಳಾ ಡಾಕ್ಟರ್ ಮೇಲಿನ ಬಲಾತ್ಕಾರ ಮತ್ತು ಹತ್ಯೆಯ ಘಟನೆಯ ವಿರುದ್ಧ ಕೊಲಕಾತಾದಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಆಗಸ್ಟ್ ೨೧ ರಂದು ಇಲ್ಲಿಯ ಆರೋಗ್ಯ ಭವನದ ಹತ್ತಿರ ಇಲ್ಲಿಯವರೆಗಿನ ಎಲ್ಲಕ್ಕಿಂತ ದೊಡ್ಡ ಪ್ರತಿಭಟನೆ ನಡೆಸಲಾಯಿತು. ಇದರಲ್ಲಿ ಸಾವಿರಾರು ಡಾಕ್ಟರಗಳು ಸಹಭಾಗಿ ಆಗಿದ್ದರು. ಇಂಥದರಲ್ಲಿ ಸಿಬಿಐಯಿಂದ ಆಸ್ಪತ್ರೆಯ ಮಾಜಿ ಪ್ರಮುಖ ಪ್ರಾ. ಸಂದೀಪ ಘೋಷ್ ಇವರನ್ನು ೬೪ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಇಂಥದರಲ್ಲಿ ಕಳೆದ ವರ್ಷ ಘೋಷ ಇವರ ವಿರುದ್ಧ ಗಂಭೀರ ಆರೋಪ ಮಾಡಿರುವ ಆರ್. ಜಿ. ಕರ ಆಸ್ಪತ್ರೆಯ ತತ್ಕಾಲಿನ ಮಾಜಿ ಅಧಿಕಾರಿ ಆಖ್ತರ ಅಲಿ ಇವರು ಘೋಷ ಇವರ ಮೇಲೆ ಹೊಸದಾಗಿ ಗಂಭೀರ ಆರೋಪ ಮಾಡಿದ್ದಾರೆ. ಸಂದೀಪ ಘೋಷ ಅನಾಥ ಶವಗಳ ಮಾರಾಟದ ಜೊತೆಗೆ ಅನೇಕ ಅಕ್ರಮ ಕೆಲಸಗಳಲ್ಲಿ ಸಹಭಾಗಿ ಆಗಿದ್ದರು. ೨೦೨೩ ರ ವರೆಗೆ ಆಸ್ಪತ್ರೆಯಲ್ಲಿನ ಜೈವಿಕ ವೈದ್ಯಕೀಯ ತ್ಯಾಜ್ಯ ಮತ್ತು ವೈದ್ಯಕೀಯ ಉಪಕರಣಗಳ ಕಳ್ಳ ಸಾಗಾಣಿಕೆ ಮಾಡುವಲ್ಲಿ ಘೋಷ್ ಇವರು ತೊಡಗಿದ್ದರು. ರಾಜ್ಯ ದಕ್ಷತಾ ಆಯೋಗಕ್ಕೆ ದೂರು ನೀಡಿದ ನಂತರ ಪರಿಶೀಲನೆಯಲ್ಲಿ ತಪ್ಪಿತಸ್ಥ ಎಂದು ಕಂಡು ಬಂದರೂ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಲಿಲ್ಲ. (ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ವ್ಯವಹಾರ ! – ಸಂಪಾದಕರು) ಮಹಿಳಾ ಡಾಕ್ಟರ್ ಹತ್ಯೆಯನ್ನು ಖಂಡಿಸಿ ಡಾಕ್ಟರ್ ಘೋಷ್ ಇವರು ಆರ್. ಜೆ. ಕರ ಆಸ್ಪತ್ರೆಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದರ ನಂತರ ಕೆಲವೇ ಗಂಟೆಯಲ್ಲಿ ಕೊಲಕಾತಾ ವೈದ್ಯಕೀಯ ಕಾಲೇಜಿನಲ್ಲಿ ಅವರನ್ನು ಮುಖ್ಯೋಪಾಧ್ಯಾಯ ಸ್ಥಾನಕ್ಕೆ ನೇಮಕ ಮಾಡಲಾಯಿತು. ಕೋಲಕಾತಾ ಉಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಘೋಷ್ ಇವರನ್ನು ಅನಿಶ್ಚಿತ ಕಾಲ ರಜೆಯಲ್ಲಿ ಕಳುಹಿಸಿದರು.

ಆಖ್ತರ ಅಲಿ ಇವರು ದಾವೆ,

೧. ಡಾ. ಘೋಷ್ ಇವರ ವಿರುದ್ಧ ಪರಿಶೀಲನ ವರದಿ ಪ್ರಸ್ತುತ ಗೊಳಿಸಿರುವುದಕ್ಕಾಗಿ ಅದೇ ದಿನ ವರ್ಗಾವಣೆ !

ಅಖ್ತರ ಅಲಿ ಇವರು ಡಾಕ್ಟರ್ ಘೋಷ್ ಇವರ ವಿರುದ್ಧ ಪರಿಶೀಲನ ವರದಿ ರಾಜ್ಯದ ಆರೋಗ್ಯ ಇಲಾಖೆಗೆ, ಬಂಗಾಲದ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿ ಇವರಿಗೂ ಕೂಡ ಕಳುಹಿಸಿದ್ದರು; ಆದರೆ ಆರೋಗ್ಯ ಇಲಾಖೆಯು ಈ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ನಂತರ ಅಲಿ ಇವರನ್ನು ಆಸ್ಪತ್ರೆಯಿಂದ ವರ್ಗಾವಣೆ ಮಾಡಿದರು. ಅಲಿ ಅವರು, ಯಾವ ದಿನ ನಾನು ಪರಿಶೀಲನ ವರದಿ ಪ್ರಸ್ತುತಪಡಿಸಿದೆ, ಅದೇ ದಿನ ನನ್ನ ವರ್ಗಾವಣೆ ಆಯಿತು. ವಿಚಾರಣಾ ಸಮಿತಿಯಲ್ಲಿನ ಇತರ ಇಬ್ಬರ ಸದಸ್ಯರನ್ನು ಕೂಡ ವರ್ಗಾಯಿಸಲಾಗಿದೆ. ಘೋಷ್ ಇವರಿಂದ ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕಾಗಿ ನಾನು ನನ್ನ ಕಡೆಯಿಂದ ಸಾಧ್ಯವಾದ ಎಲ್ಲಾ ಪ್ರಯತ್ನವು ಮಾಡಿದೆ; ಆದರೆ ನಾನು ವಿಫಲವಾಗಿದ್ದೇನೆ.

೨. ವಿದ್ಯಾರ್ಥಿಗಳಿಂದ ಲಂಚ ಪಡೆಯುತ್ತಿದ್ದರು !

ವೈದ್ಯಕೀಯ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಘೋಷ್ ಲಂಚ ಕೇಳುತ್ತಿದ್ದರು. ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲಾಗುತ್ತಿತ್ತು.

೩. ಆಸ್ಪತ್ರೆಯ ವಿಶ್ರಾಂತಿ ಗೃಹದಲ್ಲಿ ವೇಶ್ಯಾವಾಟಿಕೆ ?

ಆಸ್ಪತ್ರೆಯ ವಿಶ್ರಾಂತಿಗೃಹದಲ್ಲಿ (ಗೆಸ್ಟ್ ಹೌಸ್ ನಲ್ಲಿ) ಕೆಲವು ವೇಶ್ಯೆಯರನ್ನು ಕರೆತರಲಾಗುತ್ತಿತ್ತು. ನಾನು ಸ್ವತಃ ಇದನ್ನು ಪರೀಕ್ಷಿಸಿದ್ದೇನೆ. ನಾನು ಅಲ್ಲಿ ಸಿ.ಸಿ.ಟಿವಿ ಅಳವಡಿಸಿದ್ದೇನು, ಆದರೆ ಕಾಲಅಂತರದಲ್ಲಿ ಅದನ್ನು ತೆಗೆದ ಹಾಕಲಾಗಿದೆ ಎಂದು ನನ್ನ ಗಮನಕ್ಕೆ ಬಂದಿತು. ಅಲ್ಲಿ ನೈಟ್ ಡ್ಯೂಟಿ ಮಾಡುವವರಿಗಾಗಿ ನನಗಿಂತಲೂ ಕಿರಿಯ ಅಧಿಕಾರಿಗಳಿಗೆ ಉಳಿಯಲು ವ್ಯವಸ್ಥೆ ಇರುತ್ತಿತ್ತು; ಆದರೆ ಯಾವಾಗ ಈ ರೀತಿ ಹೊರಗಿನಿಂದ ಹುಡುಗಿಯರನ್ನು ತರುತ್ತಿದ್ದರು ಅಂದಿನಿಂದ ಉಪಾಧಿಕ್ಷಕರನ್ನು ಅಲ್ಲಿ ವಾಸಿಸಲು ನಿರಾಕರಿಸಲಾಯಿತು.

ಡಾ. ಘೋಷ್ ಇವರ ವಿರುದ್ಧ ಧ್ವನಿ ಎತ್ತಿರುವುದರಿಂದ ಜೀವಕ್ಕೆ ಅಪಾಯ !

ಅಖ್ತರ ಅಲಿ ಇವರು ಡಾ. ಸಂದೀಪ್ ಘೋಷ ವಿರುದ್ಧ ಕಳೆದ ವರ್ಷ ಗಂಭೀರ ಆರೋಪ ಮಾಡಿದ ನಂತರ ಅವರನ್ನು ಕೇವಲ ವರ್ಗಾವಣೆ ಮಾಡುವುದಷ್ಟೇ ಅಲ್ಲದೆ ಅವರಿಗೆ ಜೀವ ಬೆದರಿಕೆ ಕೂಡ ನೀಡಲಾಗುತ್ತಿದ್ದವು. ಅವರು, ನನ್ನ ಮಗಳ ಮೊಬೈಲ್ ಗೆ ಕೂಡ ಬೆದರಿಕೆಗಳು ಬರುತ್ತಿದ್ದವು. ನನ್ನ ಕುಟುಂಬ ಮೊದಲು ಸುರಕ್ಷಿತವಾಗಿರಬೇಕು. ನಾನು ಈಗ ಒಂದು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ‘ಸನಾತನ ಪ್ರಭಾತ’ದ ಪ್ರತಿನಿಧಿವು ಅಲಿ ಇವರಿಂದ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ಅವರನ್ನು ಸಂಪರ್ಕಿಸಿದಾಗ ಸಾಧ್ಯವಾಗಲಿಲ್ಲ.