ತೀರ್ಥಕ್ಷೇತ್ರ ಮತ್ತು ಧಾರ್ಮಿಕ ಸ್ಥಳ ಚಿತ್ರಕೂಟದಲ್ಲಿ ಸಂತರೊಬ್ಬರ ಮನೆ ದರೋಡೆ ನಡೆದ ಎರಡು ತಿಂಗಳ ಬಳಿಕವೂ ಯಾವುದೇ ಕ್ರಮವಿಲ್ಲ

ಚಿತ್ರಕೂಟ (ಮಧ್ಯಪ್ರದೇಶ) – ಜೂನ್ 2ರಂದು ಕೆಲವು ಗೂಂಡಾಗಳು ಮಹಾತ್ಮಾ ಮೌನಿಜಿ ಅವರ ಮನೆಗೆ ಬಲವಂತವಾಗಿ ನುಗ್ಗಿ ಅವರ ಮನೆಯನ್ನು ಲೂಟಿ ಮಾಡಿದ್ದರು. ಗೂಂಡಾಗಳು ಮಹಾತ್ಮಾ ಮೌನಿಜಿಯವರ ಸಾಮಗ್ರಿಗಳನ್ನು ಧ್ವಂಸಗೊಳಿಸಿ, ಅವನ್ನು ಹೊರಗೆ ಎಸೆದರು. ನಂತರ ದೇವಸ್ಥಾನ ಹಾಗೂ ಅವರ ಮನೆಯನ್ನು ವಶಪಡಿಸಿಕೊಂಡರು. ಈ ಪ್ರಕರಣದಲ್ಲಿ ನಾಯಗಾವ ಪೊಲೀಸರು ಇದುವರೆಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಇದೆಲ್ಲವೂ ಪೋಲೀಸರ ಕುಮ್ಮಕ್ಕಿನಿಂದ ನಡೆದಿದೆಯೆಂದು ಮೌನಿಜಿಯವರು ಆರೋಪಿಸಿದ್ದಾರೆ.

ಮೌನಿಜಿಯವರು ಕಳೆದ 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ವನವಾಸಿ ರಾಮಮಂದಿರದಲ್ಲಿ ಅವರು ಪೂಜೆ ಸಲ್ಲಿಸುತ್ತಾರೆ. ಸಚಿನ ಗರ್ಗ್ ಎಂಬವರ ಗೂಂಡಾಗಳು ವನವಾಸಿ ರಾಮ ಮಂದಿರವನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆಂದು ಮೌನಿಜಿಯವರು ಆರೋಪಿಸಿದ್ದಾರೆ. ಅಪರಾಧಿಗಳನ್ನು ಶಿಕ್ಷಿಸಬೇಕು ಮತ್ತು ಮೌನಿಜಿಯವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಅನೇಕರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಭಾಜಪ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ.