‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ !
ಶ್ರೀನಗರ (ಜಮ್ಮು-ಕಾಶ್ಮೀರ) – ಮುಂದಿನ ತಿಂಗಳು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ತಯಾರಿ ಆರಂಭಿಸಿವೆ. ‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷವು ಆಗಸ್ಟ್ 19 ರಂದು ಪ್ರಣಾಳಿಕೆಯನ್ನು ಪ್ರಸಾರ ಮಾಡಿದೆ. ಆರ್ಟಿಕಲ್ 370 ಅನ್ನು ಮತ್ತೆ ಜಾರಿಗೆ ತಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಸೂತ್ರವನ್ನು ಇದು ಒಳಗೊಂಡಿದೆ. 2000ನೇ ಇಸವಿಯಲ್ಲಿ ಆಗಿನ ವಿಧಾನಸಭೆ ಅಂಗೀಕರಿಸಿದ ಸ್ವಾಯತ್ತತೆ ಠರಾವನ್ನು ಜಾರಿಗೊಳಿಸುವುದು ಇದರಲ್ಲಿ ಸೇರಿದೆ. ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರ ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದರ ಅಡಿಯಲ್ಲಿ, ಜಮ್ಮು-ಕಾಶ್ಮೀರವನ್ನು ಅದರ 1953 ರ ಹಿಂದಿನ ಸಾಂವಿಧಾನಿಕ ಸ್ಥಾನಮಾನಕ್ಕೆ ಮರುಸ್ಥಾಪಿಸಲು ಬೇಡಿಕೆ ಇತ್ತು. ಈ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಜತೆ ಚರ್ಚಿಸುತ್ತೇವೆ ಎಂದೂ ಉಲ್ಲೇಖಿಸಲಾಗಿದೆ.
1. ನ್ಯಾಷನಲ್ ಕಾನ್ಫರೆನ್ಸ್‌ನ ಇತರ ಆಶ್ವಾಸನೆಗಳ ಪೈಕಿ, ರಾಜಕೀಯ ಕೈದಿಗಳನ್ನು ಕ್ಷಮಾದಾನ ಮಾಡಲಾಗುವುದು ಮತ್ತು ಬಂಧನದಿಂದ ಬಿಡುಗಡೆ ಮಾಡಲಾಗುವುದು ಎಂದು ಘೋ ಷಿಸಿದೆ. ಇದರೊಂದಿಗೆ ಕಾಶ್ಮೀರಿ ಹಿಂದೂಗಳನ್ನು ಗೌರವಪೂರ್ವಕವಾಗಿ ಕಾಶ್ಮೀರ ಕಣಿವೆಗೆ ಮರಳಿ ಕರೆತರಲಾಗುವುದು ಎಂದೂ ಹೇಳಲಾಗಿದೆ.
2. ನಾಗರಿಕರಿಗೆ ಉಚಿತ ವಿದ್ಯುತ್ ಮತ್ತು ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.
3. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಿಗುವವರೆಗೆ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಒಮರ್ ಅಬ್ದುಲ್ಲಾ ಘೋಷಿಸಿದ್ದಾರೆ. ಇದರಿಂದಾಗಿ ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮುಂಬರುವ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿ ವಹಿಸಲಿದ್ದಾರೆ.
ಸಂಪಾದಕೀಯ ನಿಲುವುಇಂಥವರನ್ನು ಆಯ್ಕೆ ಮಾಡಬೇಕೋ ಬೇಡವೋ ?, ಜನರೇ ನಿರ್ಧರಿಸಬೇಕು ! |
ಭಾರತ ಮತ್ತು ಪಾಕಿಸ್ತಾನದ ನಡುವೆ ಚರ್ಚೆಯನ್ನು ಪ್ರಾರಂಭಿಸಲು ಪ್ರಯತ್ನಿಸೋಣ! – ಒಮರ್ ಅಬ್ದುಲ್ಲಾ
ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸುವ ಬಗ್ಗೆಯೂ ಒಮರ್ ಅಬ್ದುಲ್ಲಾ ಪ್ರಸ್ತಾಪಿಸಿದ್ದಾರೆ. ನಾವು ಸರಕಾರ ರಚಿಸಿದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಮುಕ್ತ ಮಾತುಕತೆಗೆ ಪ್ರಯತ್ನಿಸುತ್ತೇವೆ. ಅದರಲ್ಲಿ ತಪ್ಪೇನು?, ನಾವು ಯಾವಾಗಲೂ ಚರ್ಚೆಯ ಪರವಾಗಿರುತ್ತೇವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ‘ನಾವು ಸ್ನೇಹಿತರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನಲ್ಲ’ ಎಂದು ಹೇಳಿದ್ದರು. ಇಂದು ನಾವು ಪಾಕಿಸ್ತಾನದೊಂದಿಗೆ ಚರ್ಚಿಸುವ ಸ್ಥಿತಿಯಲ್ಲಿಲ್ಲ; ಆದರೆ ಮುಂದೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.