ದೊಡ್ಡ ಅಪಘಾತ ತಪ್ಪಿತು; ರಕ್ತಪಾತದ ಸಾಧ್ಯತೆ
ಜಬಲ್‌ಪುರ (ಮಧ್ಯಪ್ರದೇಶ) – ಜಬಲ್‌ಪುರ-ನಾಗಪುರ ಮಾರ್ಗದ ಕಚ್‌ಪುರ ರೈಲು ನಿಲ್ದಾಣದ ಬಳಿ ಹಳಿ ಮೇಲೆ 15 ಅಡಿ ಉದ್ದದ ಮೂರು ಕಬ್ಬಿಣದ ಸರಳುಗಳು ಪತ್ತೆಯಾಗಿವೆ. ಲೋಕೋ ಪೈಲಟ್ ಮುಂಜಾಗ್ರತೆಯಿಂದ ದೊಡ್ಡ ಅನಾಹುತ ತಪ್ಪಿತು. ಈ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ರೈಲಿನ ವೇಗ ಕಡಿಮೆ ಇದ್ದ ಕಾರಣ ಹಳಿ ಮೇಲಿರುವ ಸರಳುಗಳನ್ನು ನೋಡಿ ರೈಲನ್ನು ಕೂಡಲೇ ನಿಲ್ಲಿಸಲಾಗಿತ್ತು. ಈ ಹಳಿಗಳ ಮೇಲೆ ರೈಲು ಹಾದು ಹೋಗಿದ್ದರೆ ಬೋಗಿಗಳು ಹಳಿ ತಪ್ಪಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ಕೆಲ ದಿನಗಳ ಹಿಂದೆ ಕಾನ್ಪುರದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ಹಳಿ ತಪ್ಪಿತ್ತು. ಹಳಿಗಳ ಮೇಲೆ ಯಾವುದೋ ವಸ್ತು ಇರಿಸಲಾಗಿತ್ತು ಎಂದು ಲೋಕೋ ಪೈಲಟ್ (ಚಾಲಕ) ಈ ಹಿಂದೆ ವರದಿ ಮಾಡಿದ್ದರು. ಇದರಿಂದ ರೈಲ್ವೆ ಅಪಘಾತಗಳ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಇದು ‘ರೈಲ್ವೆ ಜಿಹಾದ್’ ಆಗಿದೆಯೇ? ಎಂಬುದರ ತನಿಖೆ ನಡೆಸಬೇಕು. ಇದು ಬಾಂಬ್ ಸ್ಫೋಟಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಮತ್ತು ಕಡಿಮೆ ಶ್ರಮ, ಹಣ ಮತ್ತು ಮಾನವಶಕ್ತಿಯಿಂದ ಇದನ್ನು ಮಾಡಬಹುದು ಎಂಬ ಕಾರಣದಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ! |