United Nations on Bangladesh Hindus : ಬಾಂಗ್ಲಾದೇಶದ ಹಿಂಸಾಚಾರದಲ್ಲಿ ಹಿಂದೂಗಳೇ ಹೆಚ್ಚು ಸಾವನ್ನಪ್ಪಿದರು ! – ವಿಶ್ವಸಂಸ್ಥೆ

  • ಕೊನೆಗೂ ಬಾಯಿ ತೆರೆದ ವಿಶ್ವ ಸಂಸ್ಥೆ !

  • ಹಿಂಸಾಚಾರದ ಘಟನೆಗಳ ತನಿಖೆಗಾಗಿ ವಿಶ್ವಸಂಸ್ಥೆಯ ಒಂದು ತಂಡ ಬಾಂಗ್ಲಾದೇಶಕ್ಕೆ ಹೋಗಲಿದೆ !

ಜಿನೀವಾ (ಸ್ವಿಟ್ಜರ್ಲೆಂಡ್) / ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹಿಂದೂ ವಿರೋಧಿ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ಕೊನೆಗೂ ಬಾಯಿ ತೆರೆದಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಚ್ಚಾಯುಕ್ತರ ವರದಿಯಲ್ಲಿ ಇದನ್ನು ವಿವರಿಸಲಾಗಿದೆ; ಆದರೆ ಹಿಂದೂಗಳ ಮೇಲೆ ದಾಳಿ ಮಾಡುವ ಮತಾಂಧ ಮುಸ್ಲಿಮರು ಎಂದು ಉಲ್ಲೇಖಿಸುವುದನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ. ಈ ವರದಿಯ ಪ್ರಕಾರ, ಜುಲೈ 16 ಮತ್ತು ಆಗಸ್ಟ್ 4 ರ ನಡುವೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 400 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 5 ಮತ್ತು 6 ರಂದು ನಡೆದ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ.

ವಿಶ್ವಸಂಸ್ಥೆಯ ವರದಿಯಲ್ಲಿ ಮಂಡಿಸಲಾದ ಇತರ ಅಂಶಗಳು !

1. ಜುಲೈ 16 ರಿಂದ ಆಗಸ್ಟ್ 11 ರ ಕಾಲಾವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ಆಂದೋಲನದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ 650 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸತ್ತವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಹಿಂದೂಗಳಾಗಿದ್ದರು.
2. ದೇಶಾದ್ಯಂತ ಎಲ್ಲಾ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು, ಆಸ್ಪತ್ರೆಗಳಲ್ಲಿ ಸ್ಥಳಾವಕಾಶವೇ ಉಳಿದಿರಲಿಲ್ಲ.
3. ಅಧಿಕಾರಿಗಳು ಆಸ್ಪತ್ರೆಗಳಿಂದ ಮಾಹಿತಿಯನ್ನು ನೀಡಲು ತಡೆದಿರುವುದರಿಂದ ನಿಖರವಾದ ಸಾವಿನ ಸಂಖ್ಯೆ ತಿಳಿಯಲು ಸಾಧ್ಯವಾಗಲಿಲ್ಲ.
4. ರಕ್ಷಣಾ ಪಡೆಗಳು ಹೆಚ್ಚಿನ ಬಲವನ್ನು ಬಳಸಿದವು.

ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ವೋಲ್ಕರ್ ತುರ್ಕ್

ವೋಲ್ಕರ್ ತುರ್ಕ್

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಚ್ಚಾಯುಕ್ತ ವೋಲ್ಕರ್ ತುರ್ಕ್ ಈ ಕುರಿತು ಪ್ರತಿಕ್ರಿಯಿಸುವಾಗ, ಹಿಂಸಾಚಾರ ಮಾಡುವವರು, ಈ ಹಿಂಸಾಚಾರಕ್ಕೆ ಕಾರಣರಾಗಿರುವವರ ಮತ್ತು ಬೇಜವಾಬ್ದಾರಿಯನ್ನು ತೋರಿ ವಿಫಲರಾಗಿರುವವರ ಕಾರಣದಿಂದ ನೂರಾರು ಜನರು ಜೀವ ಕಳೆದು ಕೊಳ್ಳುವಂತಾಯಿತು. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನಮ್ಮ ಒಂದು ತಂಡ ಬಾಂಗ್ಲಾದೇಶಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಈ ತಂಡವು ಹಿಂಸಾಚಾರದ ಘಟನೆಗಳ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹೀಗೆ ಹೇಳುವ ವಿಶ್ವಸಂಸ್ಥೆ ‘ಈ ಹಿಂಸಾಚಾರವನ್ನು ಕಟ್ಟರವಾದಿ ಮುಸ್ಲಿಮರು ಮಾಡಿದ್ದಾರೆ. ಅಲ್ಲಿನ ಮುಸ್ಲಿಮರು ಅಸಹಿಷ್ಣುಗಳಾಗಿದ್ದಾರೆ. ಅವರು ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳುವ ಧೈರ್ಯ ತೋರಿಸುವುದಿಲ್ಲ. ಈಗ ಈ ವಿಷಯದಲ್ಲಿ ಕೇಂದ್ರ ಸರಕಾರವೇ ವಿಶ್ವಸಂಸ್ಥೆಯನ್ನು ಕೇಳಬೇಕು !