ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಪ್ರಸಿದ್ಧ ತಜ್ಞ ಮಯಾಂಕ್ ಜೈನ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನವದೆಹಲಿ – ನೆರೆಯ ಭಾರತದ 100 ಕೋಟಿ ಹಿಂದೂಗಳು ತಮಗಾಗಿ ಏನನ್ನೂ ಮಾಡುತ್ತಿಲ್ಲ ಎಂದು ಬಾಂಗ್ಲಾದೇಶದ ಹಿಂದೂಗಳಿಗೆ ಅನಿಸುತ್ತಿದೆ. ‘ನೆಹರು-ಲಿಯಾಖತ್ ಅಲಿ ಒಪ್ಪಂದ’ದ ಪ್ರಕಾರ ನಾವು ನಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಬೇಕು. ಬಾಂಗ್ಲಾದೇಶದ ರಚನೆಯ ನಂತರವೂ, ಶೇಖ್ ಮುಜಿಬುರ್ ರೆಹಮಾನ್ ಅವರೊಂದಿಗೆ ಅಂತಹ ಒಪ್ಪಂದ ಮಾಡಲಾಗಿತ್ತು; ಆದರೆ ಬಾಂಗ್ಲಾದೇಶ ಎಂದಿಗೂ ಅದನ್ನು ಪ್ರಯತ್ನಿಸಲಿಲ್ಲ. ಈಗ ಎಲ್ಲ ಅಲ್ಪಸಂಖ್ಯಾತ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು. ಇದು ಬಂಗಾಳ ಮತ್ತು ಅಸ್ಸಾಂನಲ್ಲಿನ ಧಾರ್ಮಿಕ ಮಟ್ಟದಲ್ಲಿ ಜನಸಂಖ್ಯಾ ಬದಲಾವಣೆಯ (ಇಸ್ಲಾಮೀಕರಣ) ಮೇಲೆ ಪರಿಣಾಮ ಬೀರಬಹುದು. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಹಿಂದೂಗಳನ್ನು ಭಾರತಕ್ಕೆ ತೆಗೆದುಕೊಳ್ಳಬೇಕು. ಹಿಂದೂಗಳನ್ನು ವೈದ್ಯಕೀಯವಾಗಿ ಸುಲಭವಾಗಿ ಗುರುತಿಸಬಹುದು. ಭಾರತವು ಈ ಹಿಂದೂಗಳಿಗೆ ಭೂಮಿಯನ್ನು ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಮತ್ತು ಸೈನ್ಯವನ್ನೂ ಕರೆಯಬೇಕು. ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಭಾರತೀಯ ಸೇನೆಯ 10 ಸಾವಿರ ಟ್ರಕ್‌ಗಳನ್ನು ಗಡಿಯಿಂದ 200 ಕಿಮೀ ಒಳಗೆ ನಿಯೋಜಿಸಬೇಕು. ಅಸ್ಸಾಂನ ತೇಜ್‌ಪುರ ಮತ್ತು ಬಂಗಾಳದ ಬಾಗ್ಡೋಗ್ರಾದಲ್ಲಿರುವ ಭಾರತೀಯ ವಾಯುಪಡೆಯ ನೆಲೆಗಳಲ್ಲಿ ರಫೇಲ್ ವಿಮಾನಗಳ ಮೂಲಕ ಗಸ್ತು ತಿರುಗಬೇಕು. ಸೇನಾ ಒತ್ತಡದಿಂದಲೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ನಿಲ್ಲದಿದ್ದರೆ ಢಾಕಾದಲ್ಲಿ ಬಾಂಬ್ ದಾಳಿ ಮಾಡಿ ಅಲ್ಲಿನ ಸರಕಾರದ ತಕ್ಕ ಶಾಸ್ತಿ ಮಾಡಬೇಕು ಎಂದು ದೆಹಲಿಯಲ್ಲಿರುವ ಅಂತರಾಷ್ಟ್ರೀಯ ವ್ಯವಹಾರಗಳ ತಜ್ಞ ಮಯಾಂಕ್ ಜೈನ್ ಇವರು ‘ಸನಾತನ ಪ್ರಭಾತ್’ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.
2001 ರಲ್ಲಿ, ಜೈನ್ ಅವರು ‘ಬಾಂಗ್ಲಾ ಕ್ರೆಸೆಂಟ್’ ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದರು. ಅದರಲ್ಲಿ ಅವರು ಭಾರತ-ಬಾಂಗ್ಲಾದೇಶ ಗಡಿ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಜನಸಂಖ್ಯೆ ಮತ್ತು ಹಿಂದೂಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದರು.