ಕೋನ್ (ಭಿವಂಡಿ)ಯಲ್ಲಿ ಗ್ರಾಮಸ್ಥರಿಂದ ಫಲಕಗಳ ಮೂಲಕ ಎಚ್ಚರಿಕೆ
ಥಾಣೆ, ಆಗಸ್ಟ್ 15 (ಸುದ್ದಿ) – ಭಿವಂಡಿ ಇದು ಸೂಕ್ಷ್ಮ ಪ್ರದೇಶವಾಗಿದೆ ಪ್ರಸ್ತುತ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಇದೆ. ಆದ್ದರಿಂದ ನುಸುಳುಕೋರರು ನುಸುಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಿವಂಡಿಯ ಕೋನ್ ಗ್ರಾಮದ ಗ್ರಾಮಸ್ಥರು ಬಾಂಗ್ಲಾದೇಶದ ಮುಸಲ್ಮಾನ್ ನುಸುಳುಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದ ಮುಸಲ್ಮಾನ್ ನುಸುಳುಕೋರರು ಗ್ರಾಮದಲ್ಲಿ ವಾಸಿಸುವುದು ಮತ್ತು ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಗ್ರಾಮಸ್ಥರು ಫಲಕಗಳ ಮೂಲಕ ಎಚ್ಚರಿಸಿದ್ದಾರೆ.
ಸಹೋದರತ್ವದಲ್ಲಿ ನಂಬಿಕೆ ಇರುವವರು ತಮ್ಮ ಜ್ಞಾನವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ‘ನಮ್ಮ ಗ್ರಾಮ ನಮ್ಮ ಹೊಣೆಗಾರಿಕೆ’ ಹಾಗೂ ‘ಗ್ರಾಮದಲ್ಲಿ ನುಸುಳುಕೋರರು ಎಲ್ಲಿಯಾದರೂ ಕಂಡು ಬಂದರೆ ಪೊಲೀಸರನ್ನು ಸಂಪರ್ಕಿಸಿ, ’ ಎಂಬ ಫಲಕಗಳನ್ನು ಗ್ರಾಮಸ್ಥರು ಬರೆದಿದ್ದಾರೆ. ಈ ಫಲಕಗಳ ಛಾಯಾಚಿತ್ರಗಳ ಸ್ಟೇಟಸ್ ಅನ್ನು ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದಾರೆ. (‘ಸ್ಟೇಟಸ್’ ಅಂದರೆ ಇತರರು ನೋಡುವುದಕ್ಕಾಗಿ ಸ್ವಂತದ ಮೊಬೈಲ್‌ನಲ್ಲಿ ಇಟ್ಟಿರುವ ಚಿತ್ರ ಅಥವಾ ಬರಹ) ಅಥವಾ ‘ವಾಟ್ಸಾಪ್ ಡಿಪಿ’ಯಲ್ಲಿ ಇಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಸಂಪಾದಕೀಯ ನಿಲುವು
|