RSS on Bangladesh Hindus : ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ಮಾಡುವುದು, ಪ್ರತಿಯೊಬ್ಬರ ಜವಾಬ್ದಾರಿ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಸ್ವಸಂರಕ್ಷಣೆ ಮತ್ತು ಸ್ವಾತಂತ್ರ್ಯ, ಇದೇ ಭಾರತದ ಆದ್ಯತೆ ಇರುವುದಾಗಿ ಪ್ರತಿಪಾದನೆ !

ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ನಾಗಪುರ – ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ತೊಂದರೆಯಾಗಬಾರದು, ಇದನ್ನು ನೋಡಿಕೊಳ್ಳುವುದು ಒಂದು ದೇಶ ಎಂದು ಹೇಗೆ ಸರಕಾರದ ಹೊಣೆ ಆಗಿರುತ್ತದೆ, ಅದೇ ರೀತಿ ನಮ್ಮದು ಕೂಡ ಆಗಿರುತ್ತದೆ. ಸರಕಾರ ಅದರ ಕಾರ್ಯ ಮಾಡುತ್ತದೆ; ಆದರೆ ಅದಕ್ಕಾಗಿ ದೇಶದ ನಾಗರಿಕರ ಬೆಂಬಲದ ಆವಶ್ಯಕತೆ ಕೂಡ ಇರುತ್ತದೆ. ದೇಶದಲ್ಲಿ ಯೋಗ್ಯ ಮತ್ತು ಶಾಂತಿಯ ವಾತಾವರಣ ನಿರ್ಮಾಣ ಮಾಡುವುದು ಇದು ಕೂಡ ಎಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸಮಾಜ ತನ್ನ ಜೀವನದಲ್ಲಿನ ಸಣ್ಣಪುಟ್ಟ ಸಮಸ್ಯೆಯ ಮೇಲೆ ಉಪಾಯ ಹುಡುಕಬೇಕು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ.ಪೂ. ಸರಸಂಘಚಾಲಕ ಮೋಹನಜಿ ಭಾಗವತ ಇವರ ಹಸ್ತದಿಂದ ಧ್ವಜಾರೋಹಣ ನಡೆಯಿತು, ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಡಾ. ಭಾಗವತ ಇವರು ಮಾತು ಮುಂದುವರಿಸಿ,

೧. ದೇಶಕ್ಕಾಗಿ ಬಲಿದಾನ ನೀಡುವ ಸಮೂಹ ಮತ್ತು ಅವರ ಬೆನ್ನಿಗೆ ನಿಂತಿರುವ ಸಮಾಜ, ಇದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ದೊರಕಿಸಿ ಕೊಟ್ಟಿರುವ ಪೀಳಿಗೆ ಹೊರಟು ಹೋಗಿದೆ; ಆದರೆ ಇಂದಿನ ಪೀಳಿಗೆಯ ಮೇಲೆ ಸ್ವಾತಂತ್ರ್ಯದ ರಕ್ಷಣೆಯ ಜವಾಬ್ದಾರಿ ಇದೆ.

೨. ದೇಶದ ಗಡಿಯಲ್ಲಿ ಸೈನಿಕರು ಹೋರಾಡುತ್ತಾರೆ. ಅವರ ಕುಟುಂಬದ ಕಾಳಜಿ ವಹಿಸುವುದು, ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

೩. ಸ್ವಾತಂತ್ರ್ಯ ಸಿಕ್ಕಿರುವ ದೇಶಕ್ಕಾಗಿ ಯಾವ ಮಾರ್ಗ ಆಯ್ಕೆ ಮಾಡಿದ್ದೇವೆ, ಅದರಲ್ಲಿಯೇ ಮುಂದೆ ಸಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಸಾಂವಿಧಾನಿಕ ನಿಯಮಗಳ ಪಾಲನೆ ಮಾಡುವುದು ಆವಶ್ಯಕವಾಗಿದೆ.

೪. ನೆರೆಯ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುತ್ತಿದೆ, ಅಲ್ಲಿಯ ಹಿಂದೂ ಬಾಂಧವರಿಗೆ ಇಂದಿಗೂ ಕೂಡ ವಿನಾಕಾರಣ ಕಷ್ಟ ಸಹಿಸಬೇಕಾಗುತ್ತದೆ. ಆದ್ದರಿಂದ ಸ್ವಸಂರಕ್ಷಣೆ ಮತ್ತು ಸ್ವಾತಂತ್ರ್ಯ, ಇದೇ ಭಾರತದ ಆದ್ಯತೆಯಾಗಿದ್ದು ಅದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದು ಹೇಳಿದರು.