|
ಠಾಣೆ, ಆಗಸ್ಟ್ ೧೫ (ವಾರ್ತೆ) – ಮುಂಬ್ರಾದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ‘ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದಿಂದ ತಿರಂಗ ಮೆರವಣಿಗೆ ನಡೆಸಲಾಗಿತ್ತು. ಇದರಲ್ಲಿ ಮತಾಂಧರು ಟಿಪ್ಪು ಸುಲ್ತಾನಿನ ಛಾಯಾಚಿತ್ರ ಇರುವ ಫಲಕ ಕೈಯಲ್ಲಿ ಹಿಡಿದಿದ್ದರು. ಕೆಲವರು ‘ಟಿಪ್ಪು ಸುಲ್ತಾನ್ ಜಿಂದಾಬಾದ್’ ಘೋಷಣೆ ನೀಡುತ್ತಿದ್ದರು. ಬಿಗುವಿನ ವಾತಾವರಣ ನಿರ್ಮಾಣವಾಗಬಾರದೆಂದು; ಪೊಲೀಸರು ಮೆರವಣಿಗೆ ತಡೆದರು. ಆದ್ದರಿಂದ ಮತಾಂಧರು ಅದನ್ನು ನಿಷೇಧಿಸಿದರು.
‘ಟಿಪ್ಪು ಸುಲ್ತಾನ್ ಜಿಂದಾಬಾದ್’ ಘೋಷಣೆ ನೀಡಿದ್ದರಿಂದ ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಪೊಲೀಸರು ಟಿಪ್ಪು ಸುಲ್ತಾನಿನ ಛಾಯಚಿತ್ರ ಇರುವ ಫಲಕ ತೆಗೆಯಲು ಆದೇಶ ನೀಡಿದ ನಂತರ ಸ್ಥಳೀಯ ಮುಸಲ್ಮಾನ ನಾಯಕರು ಮತ್ತು ಕಾರ್ಯಕರ್ತರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು (ಇಂತಹವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುವರು ಅಥವಾ ಅವರ ಎದುರು ಎಂದಿನಂತೆ ಮಂಡಿಯೂರುವರು ? – ಸಂಪಾದಕರು)
ಟಿಪ್ಪುವಿನ ವೈಭವೀಕರಣ ಮಾಡುವವರನ್ನು ಆಯಾ ಸಮಯದಲ್ಲೇ ಮಟ್ಟ ಹಾಕಬೇಕು ! – ಶಾಸಕ ನಿತೇಶ ರಾಣೆ, ಭಾಜಪ
ನಾವು ಟಿಪ್ಪು ಸುಲ್ತಾನನ ಫಲಕ ಹಾಕಿರುವವರನ್ನು ಯೋಗ್ಯ ಸಮಯದಲ್ಲಿ ಮಟ್ಟ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದೇವೆ. ಟಿಪ್ಪು ಸುಲ್ತಾನ್ ಎದುರಿಗೆ ಈ ಜನರನ್ನು ಪಾಠ ಕಲಿಸಲಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವು
|