ಅಟಲ್ ಸೇತುವೆಯಿಂದ ಹೊಳೆಯಲ್ಲಿ ಶೇ.60ರಷ್ಟು ಮೀನುಗಳು ಕಡಿಮೆಯಾಗಿದ್ದು ಮೀನುಗಾರರಿಗೆ ನಷ್ಟಪರಿಹಾರ ನೀಡಬೇಕು!

  • ‘ಮರೀ ಆಯಿ ಮಚ್ಛಿಮಾರ್ ಸಹಕಾರಿ ಸಂಘ’ದ ಅರ್ಜಿ ಮೂಲಕ ಬೇಡಿಕೆ

  • ಆಗಸ್ಟ್ 28 ರಂದು ವಿಚಾರಣೆ

ಮುಂಬಯಿ – ಅಟಲ್ ಸೇತುವೆಯಿಂದಾಗಿ ಹೊಳೆಯಲ್ಲಿ ಶೇ. 60 ರಷ್ಟು ಮೀನುಗಳು ಕಡಿಮೆಯಾಗಿದೆ. ಇದು ಮೀನುಗಾರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು ನಮ್ಮ ಆದಾಯ ಕುಗ್ಗಿದೆ. ಆದ್ದರಿಂದ ಇಲ್ಲಿನ ಮೀನುಗಾರರಿಗೆ ನಷ್ಟ ಪರಿಹಾರ ನೀಡಬೇಕು, ಎಂದು ‘ಮರೀ ಆಯಿ ಮೀನುಗಾರರ ಸಹಕಾರ ಸಂಘ’ವು ಆಗ್ರಹಿಸಿ, ಸಂಘವು ಈ ಕುರಿತು ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಆಗಸ್ಟ್ 28ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಅಟಲ್ ಸೇತುವೆಯಿಂದಾಗಿ, ವಾಶಿಗಾಂವ್, ಜುಹುಗಾಂವ್, ಕೋಪರ್ ಖೈರಾಣೆ, ಘನ್ಸೋಲಿ, ಗೋಠೀವಲಿ, ದಿವಾ ಮತ್ತು ಬೇಲಾಪುರದ ಹೊಳೆಯಲ್ಲಿ ಮೀನುಗಾರರ ಆದಾಯ ಕಡಿಮೆಯಾಗಿದೆ.