|
ನವದೆಹಲಿ – ಕೇಂದ್ರ ಸರಕಾರ ಬಾಂಗ್ಲಾದೇಶದಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳ ನೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ 57 ಚಿಂತಕರು ಕೇಂದ್ರದ ಭಾಜಪ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿಂಸಾಚಾರವನ್ನು ಭಾರತೀಯ ಸಂಸತ್ತು ‘ಹಿಂದೂಗಳ ಮೇಲಿನ ಧಾರ್ಮಿಕ ಹಿಂಸಾಚಾರ’ ಎಂದು ಗುರುತಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಬಾಂಗ್ಲಾದೇಶದ ಮೆಹರಪುರದಲ್ಲಿ ಇಸ್ಕಾನ್ ಮಂದಿರವನ್ನು ಸುಟ್ಟುಹಾಕಿದ ವಿಡಿಯೋ ಮತ್ತು ಸಮೂಹದಿಂದ ಹಿಂದೂಗಳ ಹತ್ಯೆಯ ವಿಡಿಯೋವನ್ನು ಉಲ್ಲೇಖಿಸಿ, ಘಟನೆಗಳು ಕಳವಳಕಾರಿ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಪತ್ರದಲ್ಲಿ ವಿಕ್ರಮ ಸಂಪತ್, ಅಭಿನವ ಅಗರ್ವಾಲ್, ಅರುಣ ಕೃಷ್ಣನ್, ಹರ್ಷ್ ಗುಪ್ತಾ ಮಧುಸೂದನ, ಸ್ಮಿತಾ ಬರುವಾ, ವಿಜ್ಞಾನಿ ಆನಂದ ರಂಗನಾಥನ್ ಮತ್ತು ಇಂಜಿನಿಯರ್ ಯೋಗಿನಿ ದೇಶಪಾಂಡೆ ಮುಂತಾದವರಿದ್ದಾರೆ.
ಹಿಂದೂಗಳ ಮೇಲಿನ ದಬ್ಬಾಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಈ ಚಿಂತಕರು,
1. ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಿಂಸಾಚಾರ ಹೊಸ ವಿಧಾನದತ್ತ ವಿಶ್ವದ ಗಮನ ಸೆಳೆದಿದೆ. ಹಿಂದೂಗಳ ಮೇಲೆ ಏಕಾಏಕಿ ದಾಳಿಯ ಘಟನೆಗಳು ನಡೆಯುತ್ತಿವೆ, ಎಂದಲ್ಲ. ಬಾಂಗ್ಲಾದೇಶದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ರಾಜಕೀಯ ಅಸ್ಥಿರತೆಯ ಅವಧಿಯಲ್ಲಿ ಹಿಂದೂಗಳ ಮೇಲಿನ ದಾಳಿಗಳು ತೀವ್ರಗೊಳ್ಳುತ್ತವೆ.
2. ಬಾಂಗ್ಲಾದೇಶ ಪೂರ್ವ ಪಾಕಿಸ್ತಾನವಾಗಿದ್ದಾಗ ಪಾಕಿಸ್ತಾನ ಸೇನೆಯು 25 ಲಕ್ಷ ಹಿಂದೂಗಳನ್ನು ಹೇಗೆ ಕೊಂದಿತು ಎಂಬುದನ್ನು ಇದು ನಮಗೆ ನೆನಪಿಸುತ್ತದೆ. 2013 ರಿಂದ ಇಲ್ಲಿಯವರೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 3 ಸಾವಿರದ 600 ಕ್ಕೂ ಹೆಚ್ಚು ದಾಳಿಗಳು ನಡೆದಿವೆ.
3. ಬಾಂಗ್ಲಾದೇಶ ಹಿಂದೂಗಳ ನೋವನ್ನು ನೆನಪಿಸಿಕೊಳ್ಳಬೇಕು ಮತ್ತು ಅವರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚುನಾಯಿತ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ತಮ್ಮ ಮಟ್ಟದಲ್ಲಿ ಪ್ರಸ್ತಾಪಿಸಬೇಕು ಮತ್ತು ಭಾರತ ಸರಕಾರವು ಇದನ್ನು ಉನ್ನತ ಮಟ್ಟದಲ್ಲಿ ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ಭಾರತೀಯ ಸಂಸತ್ತು ಇದರ ವಿರುದ್ಧ ಠರಾವನ್ನು ಅಂಗೀಕರಿಸಬೇಕು. ಹಿಂದೂಗಳ ಸುರಕ್ಷತೆಗಾಗಿ, ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಂತ್ರಸ್ತರಿಗೆ ಸಹಾಯ ಮಾಡುವುದರಿಂದ ಹಿಡಿದು ಆಶ್ರಯದವರೆಗೆ ಪರ್ಯಾಯಗಳನ್ನು ವಿಚಾರ ಮಾಡಬೇಕು.