ದಾಖಲೆ ಸಾಧಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ !

7 ವರ್ಷಗಳಲ್ಲಿ 67 ಸಾವಿರ ಎಕರೆ ಅತಿಕ್ರಮಿತ ಸರಕಾರಿ ಭೂಮಿ ಮುಕ್ತ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ 7 ವರ್ಷಗಳಲ್ಲಿ 67 ಸಾವಿರ ಎಕರೆ ಸರಕಾರಿ ಭೂಮಿಯನ್ನು ಅತಿಕ್ರಮಣ ಮುಕ್ತ ಅಭಿಯಾನ ನಡೆಸಿ ಮುಕ್ತಗೊಳಿಸಿದ್ದಾರೆ. ಅಲ್ಲದೇ ಅಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಕೂಡ ತಡೆಯಲಾಗಿದೆ. ಮುಕ್ತಗೊಳಿಸಿದ ಭೂಮಿಯಲ್ಲಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಕ್ರೀಡಾಂಗಣವನ್ನೂ ಸಹ ನಿರ್ಮಿಸಲಾಗಿದೆ. ಹೀಗಿದ್ದರೂ ಸಾವಿರಾರು ಎಕರೆ ಭೂಮಿ ಅತಿಕ್ರಮಣವಾಗಿದ್ದು ಅವುಗಳನ್ನು ಮುಕ್ತಗೊಳಿಸಲು ಸರಕಾರ ಕಾನೂನು ರೂಪಿಸಲು ಪ್ರಯತ್ನಿಸುತ್ತಿದೆ.

1. ಮುಖ್ತಾರ್ ಅನ್ಸಾರಿ ಎಂಬ ಕುಖ್ಯಾತ ರೌಡಿ ಅತಿಕ್ರಮಣ ಮಾಡಿಕೊಂಡಿದ್ದ ಭೂಮಿಯನ್ನು ಮುಕ್ತಗೊಳಿಸಿ ಅಲ್ಲಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.

2. ‘ಲಖನೌ ಅಭಿವೃದ್ಧಿ ಪ್ರಾಧಿಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ 300 ಚದರ ಅಡಿಯ 76 ಫ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳನ್ನು ಲಾಟರಿ ಮೂಲಕ ಬಡವರಿಗೆ ನೀಡಲಾಗುವುದು. ಪ್ರತಿ ಫ್ಲಾಟ್‌ನ ಮೌಲ್ಯ ಏಳೂವರೆ ಲಕ್ಷ ರೂಪಾಯಿ ಆಗಲಿದೆ. ಅದಕ್ಕಾಗಿ ಸರಕಾರ ಎರಡೂವರೆ ಲಕ್ಷ ರೂಪಾಯಿ ಸಹಾಯಧನವನ್ನೂ ಸಹ ನೀಡಲಿದೆ.

3. ಪ್ರಯಾಗ್‌ರಾಜ್‌ನಲ್ಲಿನ ರೌಡಿ ಅತೀಕ್ ಅಹ್ಮದ್ ನಿಂದ ಮುಕ್ತಗೊಳಿಸಲಾದ ಭೂಮಿಯಲ್ಲಿ ಇದೀಗ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.

ಸಂಪಾದಕೀಯ ನಿಲುವು

  • ಉತ್ತರಪ್ರದೇಶದಂತಹ ಒಂದು ರಾಜ್ಯದಲ್ಲಿಯೇ ಇಷ್ಟೊಂದು ಎಕರೆ ಭೂಮಿ ಅತಿಕ್ರಮಣಕ್ಕೊಳಗಾಗಿದ್ದರೆ, ದೇಶದಲ್ಲಿ ಇನ್ನೆಷ್ಟು ಇರಬಹುದು ? ಯೋಗಿ ಆದಿತ್ಯನಾಥ್ ಅವರು ಸಾಧಿಸಿದ್ದನ್ನು ಇತರ ರಾಜ್ಯಗಳು ಮತ್ತು ಕೇಂದ್ರ ಸರಕಾರವು ಸಾಧಿಸಲು ಏಕೆ ಸಾಧ್ಯವಿಲ್ಲ?
  • ಅತಿಕ್ರಮಣದಿಂದ ಮುಕ್ತಗೊಂಡ ಭೂಮಿಯೇ ಇಷ್ಟಿದ್ದರೆ, ಇನ್ನೂ ಮುಕ್ತಗೊಳ್ಳದಿರುವ ಭೂಮಿ ಇನ್ನೆಷ್ಟಿರಬಹುದು?
  • ಭೂಮಿ ಅತಿಕ್ರಮಣವಾಗುತ್ತಿದ್ದರೂ ಆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳದವರನ್ನು ಮತ್ತು ಅವರಿಗೆ ಸಹಾಯ ಮಾಡುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !