‘ವಕ್ಫ್ ಬೋರ್ಡ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದೂ ಹಸ್ತಕ್ಷೇಪ ಬೇಡ !’ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ

ಬೆಂಗಳೂರು – ಕೇಂದ್ರ ಸರಕಾರ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಅದಕ್ಕಾಗಿಯೇ ವಕ್ಫ್ ಬೋರ್ಡ್ ಕುರಿತು ಸುಧಾರಣೆ ಮಾಡುತ್ತಿದೆ. ವಕ್ಫ್ ಬೋರ್ಡ್ ಆ ಸಮಾಜದ ಕಾನೂನು. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದು ಬೇಡ ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಹಿಂದೂ ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಏಕೆ ? – ಸಾಮಾಜಿಕ ಮಾಧ್ಯಮದಿಂದ ಪ್ರಶ್ನೆ

ಸಿದ್ದರಾಮಯ್ಯ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ‘ವಕ್ಫ್ ಬೋರ್ಡ್ ಮುಸ್ಲಿಮರಿಗೆ ಸೇರಿದ್ದು. ಅವರ ಧರ್ಮದಲ್ಲಿ ನಾವು ಹಸ್ತಕ್ಷೇಪ ಮಾಡಬಾರದು; ಆದರೆ ನೀವು ಹಿಂದೂ ದೇವಾಲಯದ ಕಾಣಿಕೆ ಹುಂಡಿಗೆ ಕೈಹಾಕಬಹುದೇ ? ಹಿಂದೂ ದೇವಾಲಯಗಳನ್ನು ಸರಕಾರ ಏಕೆ ನಿಯಂತ್ರಿಸುತ್ತದೆ ?, ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಸಂಪಾದಕೀಯ ನಿಲುವು

ವಕ್ಫ್ ಬೋರ್ಡ್ ಮುಸ್ಲಿಮರಿಗೆ ಸೇರಿಲ್ಲ ಬದಲಾಗಿ ಭಾರತೀಯ ಸಂವಿಧಾನದ ಪ್ರಕಾರ ದೇಶಕ್ಕೆ ಸೇರಿದೆ ಮತ್ತು ಅದನ್ನು ಬದಲಾಯಿಸಬಹುದು ಎಂದು ಸಂವಿಧಾನವೇ ಹೇಳುತ್ತದೆ. ಇದು ಈಗಾಗಲೇ ಬದಲಾಗಿದೆ !