Paris Olympics Sexual Assault : ಪ್ಯಾರಿಸ್ ಒಲಿಂಪಿಕ್ : ಲೈಂಗಿಕ ದೌರ್ಜನ್ಯ ಆರೋಪ; ಈಜಿಪ್ಟ್ ಕುಸ್ತಿಪಟು ಮಹಮ್ಮದ ಅಲಸಯೀದ ಬಂಧನ !

ಈಜಿಪ್ಟ್ ಕುಸ್ತಿಪಟು ಮಹಮ್ಮದ ಅಲಸಯೀದ

ಪ್ಯಾರಿಸ್ (ಫ್ರಾನ್ಸ್) – ಈಜಿಪ್ಟ್ ಕುಸ್ತಿಪಟು ಮಹಮ್ಮದ ಅಲಸಯೀದನನ್ನು ಫ್ರಾನ್ಸ ಪೊಲೀಸರು ಬಂಧಿಸಿದ್ದಾರೆ. ಅವನು ಅಲ್ಲಿಯ ಕೆಫೆಯೊಂದರಲ್ಲಿ ಓರ್ವ ಮಹಿಳೆಯೊಂದಿಗೆ ಅಸಭ್ಯ ತೋರಿದ ಆರೋಪದ ಮೇಲೆ ಅವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆ ಸಮಯದಲ್ಲಿ ಅವನು ಮದ್ಯದ ಅಮಲಿನಲ್ಲಿದ್ದನೆಂದು ಹೇಳಲಾಗುತ್ತಿದೆ.

26 ವರ್ಷದ ಮಹಮ್ಮದ ಅಲಸಯೀದ ಕುಸ್ತಿ ಜಗತ್ತಿನಲ್ಲಿ ಪ್ರಖ್ಯಾತರಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 67 ಕೆಜಿ ಗ್ರೀಕೋ-ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಸೆಮಿಫೈನಲ್ ಸುತ್ತಿನಲ್ಲಿ ಸೋಲು ಅನುಭವಿಸಿದರು. ‘ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಅಸೋಸಿಯೇಶನ್’ 23 ವರ್ಷ ಒಳಗಿನ ಅತ್ಯುತ್ತಮ ಕುಸ್ತಿಪಟು ಎಂದು ಅವನನ್ನು ಆಯ್ಕೆ ಮಾಡಿತ್ತು. ಮಹಮ್ಮದ ಅಲಸಯೀದ 2021 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಈಜಿಪ್ಟ್ ಒಲಿಂಪಿಕ್ ಸಮಿತಿಯ ನಿಲುವು ಮಹಮ್ಮದ ಅಲಸಯೀದ ಶಿಸ್ತುಭಂಗದ ವಿಚಾರಣೆಯನ್ನು ಎದುರಿಸಬೇಕಾಗುವುದು ಎಂದು ಈಜಿಪ್ಟ್ ಒಲಿಂಪಿಕ್ ಸಮಿತಿಯು ಘೋಷಿಸಿದೆ. ಸಮಿತಿಯ ಹೇಳಿಕೆಯಂತೆ ಆರೋಪ ಸಾಬೀತಾದರೆ ಅವನನ್ನು ಆಟದಿಂದ ಆಜೀವ ನಿಷೇಧ ಸೇರಿದಂತೆ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಈಗ ಯಾರಾದರೂ ಈ ಘಟನೆಯಿಂದ ಈ ಕುಸ್ತಿಪಟುವಿನ ಧರ್ಮ ಮತ್ತು ಮಹಿಳಾ ದೌರ್ಜನ್ಯಗಳ ನಡುವೆ ಸಂಬಂಧವನ್ನು ಜೋಡಿಸಿದರೆ ಆಶ್ಚರ್ಯ ಪಡಬಾರದು !