ಮುಂಬಯಿ – ಪಾನ ಮಸಾಲ ಜಾಹೀರಾತು ಮಾಡುವವರು ಸಾವನ್ನು ಮಾರುತ್ತಾರೆ. ಯಾರು ‘ಫಿಟ್ನೆಸ್’ ಬಗ್ಗೆ (ಶಾರೀರಿಕ ಕ್ಷಮತೆಯ ಬಗ್ಗೆ) ಮಾತನಾಡುತ್ತಾರೆ, ಅವರೇ ಪಾನ ಮಸಾಲದ ಪ್ರಚಾರ ಮಾಡುತ್ತಾರೆ. ಪಾನ ಮಸಾಲ ಉದ್ಯಮದ ವಾರ್ಷಿಕ ವಹಿವಾಟು ೪೫ ಸಾವಿರ ಕೋಟಿ ರೂಪಾಯಿ ಇದೆ. ಇದು ನಿಮಗೆ ತಿಳಿದಿದೆಯೇ ? ಇದರ ಅರ್ಥ ಸರಕಾರ ಕೂಡ ಈ ಉದ್ಯಮವನ್ನು ಬೆಂಬಲಿಸುತ್ತಿದೆ. ನೀವು ಮೃತ್ಯು ಮಾರುತ್ತೀರಾ. ನೀವು ಹೇಗೆ ಬದುಕಲು ಸಾಧ್ಯ ? ಎಂದು ಹಿಂದಿ ಚಲನಚಿತ್ರ ನಟ ಜಾನ್ ಅಬ್ರಾಹಿಂ ಇವರು ರಣವೀರ ಅಲಹಾಬಾದಿಯಾ ಇವರಿಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದರು.
೧. ಪಾನ್ ಮಸಾಲದ ಜಾಹೀರಾತು ಮಾಡುವ ಕಲಾವಿದರ ಬಗ್ಗೆ ಅವರು, ”ನಾನು ನನ್ನ ಬದುಕು ಪ್ರಾಮಾಣಿಕವಾಗಿ ನಡೆಸಿದ್ದೇನೆ ಮತ್ತು ನಾನು ಏನು ಮಾತನಾಡುತ್ತೇನೆ ಅದನ್ನೇ ಆಚರಣೆಯಲ್ಲಿ ತರುತ್ತೇನೆ, ಆಗ ಮಾತ್ರ ನಾನು ಓರ್ವ ಆದರ್ಶ ವ್ಯಕ್ತಿ ಆಗಿದ್ದೇನೆ; ಆದರೆ ನಾನು ಜನರ ಎದುರು ಸ್ವಂತದ ಒಂದು ಬೇರೆಯೇ ರೂಪ ತೋರಿಸುವುದು ಮತ್ತು ನಂತರ ಒಂದು ಬೇರೆಯ ವ್ಯಕ್ತಿ ಇರುವ ಹಾಗೆ ವರ್ತಿಸುತ್ತಿದ್ದರೆ, ಆಗ ಜನರು ಒಂದಲ್ಲ ಒಂದು ದಿನ ಗುರುತಿಸುತ್ತಾರೆ. ನಾನು ಎಂದೂ ಸಾವನ್ನು ಮಾರುವುದಿಲ್ಲ ಎಂದು ಹೇಳಿದರು.
೨. ಚಲನಚಿತ್ರ ನಟ ಅಜಯ ದೇವಗನ್, ಶಾಹರುಖ ಖಾನ್, ಟೈಗರ ಶ್ರಾಫ್ ಪಾನ ಮಸಾಲದ ಜಾಹೀರಾತು ನೀಡುತ್ತಾರೆ ಹಾಗೂ ಅಕ್ಷಯ ಕುಮಾರ್ ಮತ್ತು ಅಮಿತಾ ಬಚ್ಚನ್ ಇವರು ಟೀಕೆಗಳ ನಂತರ ಜಾಹೀರಾತದಿಂದ ಹಿಂದೆ ಸರಿದರು. ಅಕ್ಷಯ ಕುಮಾರ್ ಇವರು ಈ ಸಂದರ್ಭದಲ್ಲಿ ಕ್ಷಮೆ ಕೂಡ ಯಾಚಿಸಿದ್ದರು ಎಂದು ಹೇಳಿದರು.