ಬಾಂಗ್ಲಾದೇಶದಲ್ಲಿನ ಹಿಂದೂಗಳ ಪ್ರಾಣ ಮತ್ತು ಆಸ್ತಿಯ ರಕ್ಷಣೆಗೆ ಅಂತರಾಷ್ಟ್ರೀಯ ಶಕ್ತಿಗಳು ಮುಂದಾಗಬೇಕು ! – ಜಗದ್ಗುರು ನರೇಂದ್ರಚಾರ್ಯ ಮಹಾರಾಜ

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ಅತ್ಯಾಚಾರವನ್ನು ಖಂಡಿಸಿದ ಜಗದ್ಗುರು ನರೇಂದ್ರಚಾರ್ಯ ಮಹಾರಾಜ

ನಾಣಿಜ, ಆಗಸ್ಟ್ ೯ (ವಾರ್ತೆ.) – ಬಾಂಗ್ಲಾದೇಶದಲ್ಲಿ ಹಾಹಾಕಾರವೆದ್ದಿದ ಅರಾಜಕತೆಯನ್ನು ಮತ್ತು ಹಿಂದುಗಳ ಮೇಲೆ ನಡೆಯುವ ಅತ್ಯಾಚಾರ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಹಿಂದುಗಳ ರಕ್ಷಣೆಗಾಗಿ ನಾವು ಹಿಂದುಗಳೇ ಮುಂದೆ ಬರಬೇಕಾಗಿದೆ, ಅಂತ ಸಮಯ ಬಂದಿದೆ. ಕ್ಷುಲ್ಲಕ ಕಾರಣಕ್ಕಾಗಿ ಹಿಂದುಗಳನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ. ಬಾಂಗ್ಲಾದೇಶದಲ್ಲಿನ ಜನಸಂಖ್ಯೆಯ ಶೇಕಡ ೮.೫೪ ಹಿಂದುಗಳಿದ್ದಾರೆ, ಅಂದರೆ ಆ ಸ್ಥಳದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ; ಆದ್ದರಿಂದಲೇ ಉದ್ದೇಶಪೂರ್ವಕವಾಗಿ ಹಿಂದುಗಳ ದೇವಸ್ಥಾನಗಳು, ಮನೆಗಳು, ಮಕ್ಕಳ ವಸತಿಗೃಹಗಳು, ಕೈಗಾರಿಕೆಗಳನ್ನು ಗುರಿ ಮಾಡಲಾಗುತ್ತಿದೆ. ಇದರ ಹಿಂದೆ ಬೇರೆ ಬೇರೆ ದೇಶಗಳು ಮತ್ತು ಕಮ್ಯುನಿಷ್ಟರ ಷಡ್ಯಂತ್ರವಿದೆ. ‘ಹಿಂದೂ ಧರ್ಮ’ ಮುಗಿಸಬೇಕು, ಇದೇ ಇದರ ಹಿಂದಿನ ಉದ್ದೇಶವಾಗಿದೆ, ಇದು ಬಲವಾಗಿ ಕಂಡು ಬರುತ್ತಿದೆ. ಅಂತರಾಷ್ಟ್ರೀಯ ವ್ಯವಸ್ಥೆಯು ನಮ್ಮ ಹಿಂದುಗಳ ಆಸ್ತಿ, ಜೀವನ, ನ್ಯಾಯ, ಅಧಿಕಾರ, ಧಾರ್ಮಿಕತೆಯ ಸಂರಕ್ಷಣೆ ಮಾಡಬೇಕೆಂದು, ಜಗದ್ಗುರು ನರೇಂದ್ರಚಾರ್ಯ ಮಹಾರಾಜ ಇವರು ಕರೆ ನೀಡಿದರು. ಈ ಸಮಯದಲ್ಲಿ ಅವರು ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದರು.

ಜಗದ್ಗುರು ನರೇಂದ್ರಾಚಾರ್ಯ ಮಹಾರಾಜ ಮಾತು ಮುಂದುವರಿಸಿ, ಹಿಂದುಗಳು ಸಹಿಷ್ಣುಗಳಾಗಿದ್ದಾರೆ, ಅಶಕ್ತರಲ್ಲ. ಬಾಂಗ್ಲಾದೇಶದಲ್ಲಿನ ಘಟನೆಗಳ ಕುರಿತು ಭಾರತದಲ್ಲಿನ ವಿವಿಧ ಪಕ್ಷಗಳು ಅದರ ನಿಲುವನ್ನು ಸ್ಪಷ್ಟ ಪಡಿಸುವ ಆವಶ್ಯಕತೆ ಇದೆ. ಹೀಗೆಯೇ ನರಸಂಹಾರ ನೀವು ಮುಂದುವರೆಸಲು ಬಿಡುವರೇ ? ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ನೇತೃತ್ವ ವಹಿಸಬೇಕು ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು ಎಂದು ಹೇಳಿದರು.