ಪುರಾತತ್ವ ಇಲಾಖೆಯ ಕಾನೂನಿನ ಉಲ್ಲೇಖ
ಜಬಲ್ಪುರ (ಮಧ್ಯಪ್ರದೇಶ) – ಬುರಹಾನಪೂರ ಜಿಲ್ಲೆಯ ಕೆಲವು ಪ್ರಮುಖ ಐತಿಹಾಸಿಕ ಕ್ಷತ್ರಗಳ ಮಾಲೀಕತ್ವದ ಮೇಲೆ ತಮ್ಮ ಹಕ್ಕಿನ ದಾವೆ ಮಾಡಿದ್ದ ಮಧ್ಯಪ್ರದೇಶದ ವಕ್ಫ್ ಮಂಡಳಿಯ ಆದೇಶವನ್ನು ಅಲ್ಲಿನ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ. 19 ಜುಲೈ 2013 ರಂದು ವಕ್ಫ್ ಬೋರ್ಡ್ ನೀಡಿದ ತನ್ನ ಆದೇಶದಲ್ಲಿ ಶಾಹ್ ಶುಜಾ ಕಬರ(ಗೋರಿ), ನಾದಿರ್ ಶಾಹ್ ಗೋರಿ, ಬೀಬಿ ಸಾಹಿಬ ಮಶೀದಿ ಮತ್ತು ಬುರಹಾನಪೂರ ಕೋಟೆಯಲ್ಲಿರುವ ಒಂದು ಅರಮನೆಯನ್ನು ಬೋರ್ಡಿನ ಆಸ್ತಿಯೆಂದು ಘೋಷಿಸಿತ್ತು.
ಪುರಾತತ್ವ ಇಲಾಖೆ ಈ ಸ್ಮಾರಕಗಳ ಸಂರಕ್ಷಣೆಯನ್ನು ಮಾಡುತ್ತಿದ್ದು, ಅದು ಕೇಂದ್ರ ಸರಕಾರದ ಆಸ್ತಿಯಾಗಿದೆಯೆಂದು ಕಾರಣ ನೀಡುತ್ತಾ, ಪುರಾತತ್ವ ಇಲಾಖೆಯು ಈ ಆದೇಶವನ್ನು ಪ್ರಶ್ನಿಸಿತ್ತು. ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅವರು ಮಾತನಾಡಿ, ಈ ಆಸ್ತಿಯು ಒಂದು ಪುರಾತನ ಮತ್ತು ಸಂರಕ್ಷಿತ ಸ್ಮಾರಕವಾಗಿದ್ದು, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯಿದೆ, 1904ರ ಅಡಿಯಲ್ಲಿ ಕ್ರಮಬದ್ಧವಾಗಿ ಅಧಿಸೂಚನೆಗೊಳಿಸಲಾಗಿದೆ. ಆದ್ದರಿಂದ ಮಧ್ಯಪ್ರದೇಶ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅರ್ಜಿದಾರರಿಗೆ(ಪುರಾತತ್ವ ಇಲಾಖೆಗೆ) ಆಸ್ತಿಯನ್ನು ತೆರವುಗೊಳಿಸುವಂತೆ ನೀಡಿರುವ ನಿರ್ದೇಶನವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ. ಇದರಿಂದಾಗಿ ಮಧ್ಯಪ್ರದೇಶ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 19 ಜುಲೈ 2013ರಂದು ನೀಡಿದ ಆದೇಶವನ್ನು ರದ್ದುಗೊಳಿಸಲಾಗಿದೆ. ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಅರ್ಜಿದಾರರ (ಪುರಾತತ್ವ ಇಲಾಖೆ) ರಕ್ಷಣೆಯಲ್ಲಿ ಅನೇಕ ಪುರಾತನ ಸ್ಮಾರಕಗಳು ಮತ್ತು ಪ್ರಾಚೀನ ಸ್ಥಳಗಳಿವೆ, ಇದು ಭಾರತದ ಪ್ರಾಚೀನ ಇತಿಹಾಸದ ಅದ್ಭುತ ಪರಂಪರೆಯಾಗಿದೆ. ಶಾ ಶುಜಾ ಗೋರಿ, ನಾದಿರಶಾ ಗೋರಿ, ಬುರಹಾನಪೂರ ಕೋಟೆಯ ಬೀಬಿ ಸಾಹಿಬ ಮಶೀದಿ, ಇವು ಪುರಾತನ ಮತ್ತು ಸಂರಕ್ಷಿತ ಸ್ಮಾರಕಗಳಾಗಿವೆ ಎಂದು ತಿಳಿಸಿದೆ.