ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮ ಅವರ ಹೇಳಿಕೆ
ಗೌಹಾಟಿ (ಆಸ್ಸಾಂ) – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಮುಂಬರುವ 10 ರಿಂದ 15 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ ಈ ರಾಜ್ಯಗಳ ಸ್ಥಿತಿಯು ಬಾಂಗ್ಲಾದೇಶದಂತೆ ಆಗಬಹುದು’ ಎಂದು ಹೇಳಿಕೆ ನೀಡಿದ್ದಾರೆ. ಸರಮಾ ಇವರು ಫೇಸಬುಕ ಲೈವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು, ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಹಿಂದೂ ಸಮುದಾಯವು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವುದು ಸಹಜವಾಗಿದೆಯೆಂದು ಹೇಳಿದರು. ಮುಂದಿನ 10-15 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಬಾರದು ಎಂಬುದು ನನ್ನ ಇಚ್ಛೆಯಾಗಿದೆ.
ಅವರು ಹೇಳಿದರು …,
1. ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನ ಮತ್ತು ಶ್ರೀ ದುರ್ಗಾ ದೇವಸ್ಥಾನದ ಧ್ವಂಸ ಮಾಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿವೆ. ಬಾಂಗ್ಲಾದೇಶದಲ್ಲಿ ಓರ್ವ ಹಿಂದೂವನ್ನು ಹತ್ಯೆ ಮಾಡಿ, ಆತನ ಮೃತದೇಹವನ್ನು ಮರಕ್ಕೆ ನೇಣು ಹಾಕಿರುವ ವಿಡಿಯೋ ವ್ಯಾಪಕವಾಗಿ ಪ್ರಸಾರವಾಗಿತ್ತು. ಬಾಂಗ್ಲಾದೇಶದ ಘಟನೆ ನನಗೆ ಮೇಲಿಂದ ಮೇಲೆ ಅಸ್ಸಾಂನ 12 ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂಬುದನ್ನು ನೆನಪಿಸುತ್ತದೆ.
2. 2001 ರಿಂದ 2014 ರವರೆಗೆ, ಅಸ್ಸಾಂ ಪೊಲೀಸ ಇಲಾಖೆಯಲ್ಲಿ ಸುಮಾರು ಶೇ. 30 ರಿಂದ 35 ರಷ್ಟು ನೇಮಕಾತಿಗಳನ್ನು ನಿರ್ದಿಷ್ಟ ಸಮುದಾಯದ (ಮುಸ್ಲಿಮರು) ಜನರನ್ನು ಭರ್ತಿ ಮಾಡಿದ್ದರು. ಇಂದು ಅಸ್ಸಾಂ ಸರಕಾರವು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಇಲಾಖೆಗಳಲ್ಲಿ ಪ್ರತಿಯೊಂದು ಧರ್ಮದ ಜನರನ್ನು ನೇಮಿಸಿಕೊಳ್ಳುತ್ತದೆ ಎಂದು ಹೇಳಿದರು.