ದ್ವಾರಕಾ (ಗುಜರಾತ) – ಜಿಲ್ಲೆಯ ಮುಸಲ್ಮಾನ ಯುವತಿಯೊಂದಿಗೆ ಮದುವೆಯಾಗಿದಕ್ಕೆ ಆಕೆಯ ಕುಟುಂಬದವರು ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತನ ಹೆಸರು ಯಾಜ್ಞಿಕ ಲಕ್ಷಿದಾಸ ದುಧರೆಜಿಯಾ ಆಗಿದ್ದು, ಯಾಜ್ಞಿಕನು ತನ್ನದೇ ಗ್ರಾಮದ ರಜ್ಮಾ ಹೆಸರಿನ ಮುಸಲ್ಮಾನ ಯುವತಿಯೊಂದಿಗೆ ಒಂದೂವರೆ ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದನು. ರಜ್ಮಾ ಕುಟುಂಬದವರಿಗೆ ಈ ಸಂಬಂಧ ಒಪ್ಪಿಗೆಯಿರಲಿಲ್ಲ. ಸುರಕ್ಷತೆಯ ಭಯದಿಂದ ತನ್ನ ಹೆಂಡತಿಯೊಂದಿಗೆ ಹಳ್ಳಿಯನ್ನು ತೊರೆದು ಹೋಗಿದ್ದ ಯಾಜ್ಞಿಕನನ್ನು ಮೋಸದಿಂದ ಹಳ್ಳಿಗೆ ಕರೆಸಿದರು. ಮತ್ತು ಅಗಸ್ಟ 3 ರಂದು ಕೊಡಲಿಯಿಂದ ಕೊಚ್ಚಿ ಅವನ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ರಜ್ಮಾಳ ಸಹೋದರ ಸಾಜಿದ, ಅವಳ ಮಾವ ಸಲೀಮ, ಅಮೇದ ಮುಸಾ, ಜುಮಾ, ಉಸ್ಮಾನ ಮತ್ತು ಕಾಸಮ ಇವರನ್ನು ಬಂಧಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ …!
1. ದ್ವಾರಕಾ ಜಿಲ್ಲೆಯ ಭಾನವಡ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶೇಡಖಾಯಿ ಗ್ರಾಮದಲ್ಲಿ ವಾಸಿಸುತ್ತಿದ್ದ ಯಾಜ್ಞಿಕನು ಒಂದೂವರೆ ವರ್ಷಗಳ ಹಿಂದೆ, ಪಕ್ಕದಲ್ಲಿ ವಾಸಿಸುತ್ತಿದ್ದ ರಜ್ಮಾ ಹೆಸರಿನ ಮುಸ್ಲಿಂ ಯುವತಿಯೊಂದಿಗೆ ವಿವಾಹವಾದನು.
2. ಯಾಜ್ಞಿಕಗೆ ಜೀವ ಬೆದರಿಕೆ ಕರೆಗಳು ಬರಲು ಪ್ರಾರಂಭವಾದಾಗ, ಅವನು ತನ್ನ ಹೆಂಡತಿಯೊಂದಿಗೆ ಗ್ರಾಮವನ್ನು ತೊರೆದನು. ಒಂದೂವರೆ ತಿಂಗಳ ಹಿಂದೆ, ರಜ್ಮಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು.
3. ಇತ್ತೀಚೆಗೆ ರಜ್ಮಾ ಕುಟುಂಬದವರು ಯಾಜ್ಞಿಕನೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವ ನಾಟಕವಾಡಿದರು. ರಜ್ಮಾಳ ಕುಟುಂಬದವರು ಷಡ್ಯಂತ್ರ್ಯವನ್ನು ಗುರುತಿಸಲು ಸಾಧ್ಯವಾಗದ ಕಾರಣ ಯಾಜ್ಞಿಕನು ಪತ್ನಿ ಮತ್ತು ಮಗುವಿನೊಂದಿಗೆ ಗ್ರಾಮಕ್ಕೆ ಮರಳಿದನು.
4. ಇಂತಹುದರಲ್ಲಿಯೇ ರಜ್ಮಾಳ ಕುಟುಂಬದವರು ಯಾಜ್ಞಿಕನನ್ನು ಕೊಲ್ಲಲು ಸೂಕ್ತ ಸಮಯವನ್ನು ಹುಡುಕುತ್ತಿದ್ದರು. ಆಗಸ್ಟ್ 3 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಯಾಜ್ಞಿಕ ತನ್ನ ಸ್ನೇಹಿತನೊಂದಿಗೆ ಗ್ರಾಮದ ಬಸ್ ನಿಲ್ದಾಣದ ಬಳಿಗೆ ಹೋಗಿದ್ದನು. ಆ ಸಮಯದಲ್ಲಿ ರಜ್ಮಾ ಕುಟುಂಬದವರು ಅವನನ್ನು ಬೆನ್ನಟ್ಟಿ ಹೋದರು. ಅವರೆಲ್ಲರ ಕೈಯಲ್ಲಿ ಕೊಡಲಿ, ಚಾಕು ಮತ್ತು ಕಬ್ಬಿಣದ ಸಲಾಕೆಗಳಿದ್ದವು. ಅವರು ಯಾಜ್ಞಿಕನನ್ನು ನಾಲ್ಕೂ ಬದಿಯಿಂದ ಸುತ್ತುವರಿದರು ಮತ್ತು ಮನಸೋಚ್ಛೆ ಹಲ್ಲೆ ಮಾಡಿದರು. ಯಾಜ್ಞಿಕನಿಗೆ ಏನಾದರೂ ಅರ್ಥವಾಗುವ ಮುನ್ನವೇ ಅವನ ಹೊಟ್ಟೆಗೆ ಚಾಕುವಿನಿಂದ ಅನೇಕ ಬಾರಿ ಇರಿದರು. ತಲೆಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದರು.
5. ಯಾಜ್ಞಿಕನ ಸ್ನೇಹಿತನು ಅವನ ಕುಟುಂಬದವರಿಗೆ ಮೊಬೈಲ ಮೂಲಕ ಎಲ್ಲ ಮಾಹಿತಿಯನ್ನು ನೀಡಿದನು. ತಕ್ಷಣವೇ ಅವನ ತಾಯಿ ಮತ್ತು ಪತ್ನಿ ಸ್ಥಳಕ್ಕೆ ಬಂದರು. ಅಷ್ಟರೊಳಗೆ ದಾಳಿಕೋರರು ಪರಾರಿಯಾಗಿದ್ದರು. ಯಾಜ್ಞಿಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಸಾವನ್ನಪ್ಪಿದನು.
6. ಈ ಪ್ರಕರಣದಲ್ಲಿ ಯಾಜ್ಞಿಕನ ತಾಯಿಯು ಭಾನವಡ ಪೊಲೀಸ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧ ದಾಖಲಿಸಿ ಹಂತಕರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದಿಗಳನ್ನು ಬೆಂಬಲಿಸುವ ಪ್ರಗತಿ(ಅಧೋಗತಿ)ಪರರು, ಸರ್ವಧರ್ಮಸಮಭಾವದವರು ಮತ್ತು ಸಾಮ್ಯವಾದಿಗಳು ಇಂತಹ ಸಮಯದಲ್ಲಿ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು ! |