ಬರೇಲಿಯಲ್ಲಿನ (ಉತ್ತರ ಪ್ರದೇಶ) ಘಟನೆ
ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಸದ್ದಾಂ ಎಂಬ ಮುಸ್ಲಿಂ ಯುವಕನು ನೆರೆಯಲ್ಲಿ ವಾಸಿಸುತ್ತಿದ್ದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅಪಹರಿಸಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದು, ಸದ್ದಾಂನನ್ನು ಬಂಧಿಸಿದ್ದಾರೆ. ಇದಾದ ನಂತರ ಗ್ರಾಮಸ್ಥರು ಸದ್ದಾಂ ನ ಮನೆಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಗ್ರಾಮಸ್ಥರ ದಾಳಿಯ ಮಾಹಿತಿ ಸಿಕ್ಕ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ವಾಹನದ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಹೆಚ್ಚಿನ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಸದ್ಯ ಇಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಪಾದಕೀಯ ನಿಲುವುಜನರಿಂದ ಈ ರೀತಿ ಉದ್ರೇಕ ಗೊಳ್ಳಲು ಮತಾಂಧರೇ ಕಾರಣ. ಕಾನೂನು ಜಾರಿಗೆ ಬಂದರೂ ಇಂತಹ ಘಟನೆಗಳು ನಿಲ್ಲದ ಕಾರಣ, ಈಗ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ, ಇದು ಎಲ್ಲರೂ ಯೋಚಿಸಬೇಕಾಗಿರುವ ವಿಷಯವಲ್ಲವೇ ? |