Wayanad Landslide : ವಯನಾಡ್ ಭೂಕುಸಿತದ ನಂತರ ನಿರಾಶ್ರಿತರಾದವರ ಮನೆಗಳಲ್ಲಿ ಕಳ್ಳತನ !

ಇದು ಕೇರಳದ ಸಿಪಿಐ(ಮಾಕಪ) ಸರಕಾರಕ್ಕೆ ಲಜ್ಜಾಸ್ಪದ !

ತಿರುವನಂತಪುರಂ (ಕೇರಳ) – ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 365ಕ್ಕೆ ಏರಿಕೆಯಾಗಿದೆ. ಇದರಲ್ಲಿ 30 ಮಕ್ಕಳು ಸೇರಿದ್ದಾರೆ. 206 ಮಂದಿ ಇನ್ನೂ ಕಾಣೆಯಾಗಿದ್ದಾರೆ. ಆಗಸ್ಟ್ 4ರ 6ನೇ ದಿನವೂ ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಭೂಕುಸಿತದಿಂದಾಗಿ ಸ್ಥಳಾಂತರಗೊಂಡ ಜನರು, ತಮ್ಮ ಮನೆಗಳಲ್ಲಿ ಕಳ್ಳತನ ಆಗುತ್ತಿದೆ ಹಾಗೂ ಕೆಲವರು ರಾತ್ರಿ ವೇಳೆ ಬಂದು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ ಎಂದು ಹೇಳಿದ್ದಾರೆ ಈ ಸಂಬಂಧ ದೂರಿನನ್ವಯ ಪೊಲೀಸರು ಇದೀಗ ಕಳ್ಳರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಭೂಕುಸಿತದಲ್ಲಿ ಮನೆ ಮತ್ತು ಭೂಮಿ ಕಳೆದುಕೊಂಡ ಜನರ ಪುನರ್ವಸತಿಗಾಗಿ ಕೇರಳ ಸರಕಾರ ಸುರಕ್ಷಿತ ವಲಯದಲ್ಲಿ ಪಟ್ಟಣವನ್ನು ನಿರ್ಮಿಸಲಿದೆ. ಭೂಕುಸಿತ ಪೀಡಿತ ಪ್ರದೇಶಗಳ ಉಳಿದ ಜನರಿಗೆ ಇಲ್ಲಿ ಪುನರ್ವಸತಿ ಮಾಡಲಾಗುವುದು. ಈ ಪುನರ್ವಸತಿ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದಿದ್ದಾರೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದ್ದಾರೆ.