ಇದುವರೆಗೆ 341 ಶವಗಳ ಮರಣೋತ್ತರ ಪರೀಕ್ಷೆ !
ತಿರುವನಂತಪುರಂ (ಕೇರಳ) – ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಐದನೇ ದಿನದಂದು, ಪರಿಹಾರ ಕಾರ್ಯಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತವು ವೈಫಲ್ಯವಾದವು ಎಂದು ಒಪ್ಪಿಕೊಂಡಿದೆ. ಭೂಕುಸಿತ ದುರಂತದಲ್ಲಿ 341 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 29 ರ ರಾತ್ರಿ ವಯನಾಡಿನಲ್ಲಿ 4 ಭೂಕುಸಿತ ಘಟನೆಗಳು ಸಂಭವಿಸಿವೆ. ಇದರಲ್ಲಿ ನಾಲ್ಕು ಗ್ರಾಮಗಳು ಕೊಚ್ಚಿ ಹೋಗಿವೆ. ಸಂತ್ರಸ್ತರಿಗೆ 91 ಶಿಬಿರಗಳಲ್ಲಿ ವಸತಿ ಕಲ್ಪಿಸಲಾಗಿದೆ. ಈ ಶಿಬಿರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಸೇನಾದಳದ ಮೇಜರ್ ಜನರಲ್ ವಿ.ಟಿ. ಮ್ಯಾಂಥ್ಯು ಇವರು, ಮುಡಕ್ಕೈ, ಚುರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಲ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಈಗ ಮೃತದೇಹಗಳ ಶೋಧ ಕಾರ್ಯ ಮಾತ್ರ ನಡೆಯುತ್ತಿದೆ ಎಂದು ಹೇಳಿದರು.