ಮಹಿಳೆಯರ ಮೇಲೆ ನಡೆಸಿದ ಪರೀಕ್ಷೆಯಲ್ಲಿ 100% ಯಶಸ್ಸು
ಲಂಡನ್ (ಬ್ರಿಟನ್) – ಎಚ್.ಐ.ವಿ. ( ಏಡ್ಸ್) ರೋಗಿಗಳಿಗಾಗಿ ಲಸಿಕೆಯನ್ನು ಕಂಡುಹಿಡಿಯಲಾಗಿದೆ. ಈ ಕುರಿತ ಸಂಶೋಧನೆಯ ಲೇಖನವು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ನಲ್ಲಿ ಪ್ರಕಟವಾಗಿದೆ. ಒಂದು ವರ್ಷದೊಳಗೆ ಎರಡು ಚುಚ್ಚುಮದ್ದನ್ನು ಪಡೆದ ನಂತರ, ಸ್ತ್ರೀ ರೋಗಿಗಳಲ್ಲಿ 100%ರಷ್ಟು ಉತ್ತಮ ಫಲಿತಾಂಶ ಕಂಡುಬಂದಿದೆ. ಅಲ್ಲದೆ, ಅವರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ. ಈ ಲಸಿಕೆಗೆ ‘ಲೆನ್ಕಾಪಾವಿರ್’ ಎಂದು ಹೆಸರಿಡಲಾಗಿದೆ. ಈ ಲಸಿಕೆಯನ್ನು ಅಮೇರಿಕಾದ ಬಯೋಫಾರ್ಮಾಸ್ಯುಟಿಕಲ್ ಕಂಪನಿ ‘ಜೀಲೆಡ್ ಸೈನ್ಸಸ್’ ಅಭಿವೃದ್ಧಿಪಡಿಸಿದೆ.
Finally a vaccine to cure AIDS.
▫️ A trial on women showed 100% success rate.#HealthCare#HealthAndWellness pic.twitter.com/xdfuDivgeq
— Sanatan Prabhat (@SanatanPrabhat) August 2, 2024
ಈ ಲಸಿಕೆಯನ್ನು ಪರೀಕ್ಷಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿನ ಹದಿಹರೆಯದ ಹುಡುಗಿಯರು ಹಾಗೂ ಯುವತಿಯರು ಭಾಗಿಯಾಗಿದ್ದರು. ‘ತಮ್ಮ ಸಂಗಾತಿಯಿಂದ ಈ ಕಾಯಿಲೆ ಬರುವ ಅಪಾಯವಿದ್ದವರಿಗೂ ಕೂಡ ಈ ಲಸಿಕೆಯಿಂದ ಉತ್ತಮ ಪರಿಣಾಮ ಬೀರುವುದು’ ಎಂದು ಹೇಳಲಾಗುತ್ತಿದೆ.