ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಾಲೆ !

ಪ್ಯಾರಿಸ್ ಒಲಿಂಪಿಕ್ಸ್ 2024

ಪ್ಯಾರಿಸ್ (ಫ್ರಾನ್ಸ್) – ಒಲಿಂಪಿಕ್ ಕ್ರೀಡಾಕೂಟದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಅವರು’ ಥ್ರೀ ಪೊಸಿಷನ್ ‘ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಖಾಶಾಬಾ ಜಾಧವ್ ಅವರ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಸ್ವಪ್ನಿಲ್ ಮಹಾರಾಷ್ಟ್ರದ ಎರಡನೇ ಅಥ್ಲೀಟ್ ಎನ್ನಿಸಿಕೊಂಡರು. ಸ್ವಪ್ನಿಲ್ ಮೂಲತಃ ಕೊಲ್ಲಾಪುರದವರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತವು ಇದುವರೆಗೆ ಒಟ್ಟು ಮೂರು ಪದಕಗಳನ್ನು ಗೆದ್ದಿದೆ. ಈ ಮೂರು ಕಂಚಿನ ಪದಕಗಳು ಶೂಟಿಂಗ್‌ನಲ್ಲಿ ಬಂದಿವೆ.

ಸ್ವಪ್ನಿಲ್ ಕುಸಾಲೆಗೆ ರೈಲ್ವೇಯಲ್ಲಿ ಬಡ್ತಿ ಸಿಗುವುದು !

ಸೆಂಟ್ರಲ್ ರೈಲ್ವೇಯ ಪುಣೆ ವಿಭಾಗದಲ್ಲಿ ಟಿಟಿಇ (ಟಿಕೆಟ್ ಕಲೆಕ್ಟರ್) ಆಗಿ ಕಾರ್ಯನಿರ್ವಹಿಸುತ್ತಿರುವ ಸ್ವಪ್ನಿಲ್ ಕುಸಾಲೆ ಒಲಂಪಿಕ್ ಪದಕ ಗೆದ್ದ ಕಾರಣ ಅವರಿಗೆ ಬಡ್ತಿ ನೀಡಲಾಗುವುದು ಎಂದು ರೈಲ್ವೆ ಜನರಲ್ ಮ್ಯಾನೇಜರ್ ರಾಮಕರಣ್ ಯಾದವ್ ಮಾಹಿತಿ ನೀಡಿದ್ದಾರೆ.