ಸುಪೌಲ್ (ಬಿಹಾರ) – ಇಲ್ಲಿನ ತ್ರಿವೇಣಿಗಂಜ ಪ್ರದೇಶದ ಸೇಂಟ್ ಜಾನ್ಸ್ ಬೋರ್ಡಿಂಗ್ ಶಾಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ ಹೌದು ಇಲ್ಲಿಯ ಶಿಶು ವರ್ಗದ ಬಾಲಕನೊಬ್ಬ (7 ವರ್ಷ ವಯಸ್ಸಿನ) 3ನೇ ತರಗತಿಯ (12 ವರ್ಷ ವಯಸ್ಸಿನ) ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಪಿಸ್ತೂಲ್ ಬಾಗಿದ್ದರಿಂದ ಗುಂಡು ಬಾಲಕನ ಎಡ ಅಂಗೈಗೆ ತಾಗಿದೆ. ಅವನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವನು ಅಪಾಯದಿಂದ ಪಾರಾಗಿದ್ದಾನೆ.
Nursery student brings a gun to school; shoots a student of the third standard !
📍 Supaul, Bihar
👉 Such incidents showcase the extent to which our society is morally degraded, isn’t it ?
Image Credit : @Bhaaratsamvad #CrimeWatch pic.twitter.com/HcHlDzDdeE
— Sanatan Prabhat (@SanatanPrabhat) August 1, 2024
3ನೇ ತರಗತಿ ವಿದ್ಯಾರ್ಥಿಯ ಹೆಸರು ಆಸಿಫ್ ಆಗಿದ್ದು, ಜುಲೈ 31ರಂದು ಬೆಳಗಿನ ನಮಾಜ ಮುಗಿಸಿ ತರಗತಿಗೆ ಮರಳಿದ್ದನು. ಇದಾದ ಬಳಿಕ 7 ವರ್ಷದ ಬಾಲಕ ತರಗತಿಯೊಳಗೆ ಬಂದು ಆಸಿಫ್ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯಿಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಂಪಾದಕೀಯ ನಿಲುವುಇಷ್ಟು ಸಣ್ಣ ವಯಸ್ಸಿನ ಬಾಲಕನ ಕೈಯಲ್ಲಿ ಪಿಸ್ತೂಲು ಎಲ್ಲಿಂದ ಬಂದಿದೆ ? ಇದರಿಂದ ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದು ಕಲ್ಪನೆ ಮಾಡಬಹುದು |