ಕೇರಳ ರಾಜ್ಯದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆ
ವಾಯನಾಡ (ಕೇರಳ) – ವಾಯನಾಡನಲ್ಲಿ ಧಾರಾಕಾರ ಮಲೆಯ ನಂತರ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 165 ಕ್ಕೆ ಏರಿದೆ. 220ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮುಂಡಕ್ಕಾಯಿ, ಚುರಾಮಾಲಾ, ಅಟ್ಟಾಮಾಲಾ ಮತ್ತು ನೂಲಪುಳಾ ಗ್ರಾಮಗಳಲ್ಲಿ ಜುಲೈ 29 ರ ತಡರಾತ್ರಿ ಭೂಕುಸಿತ ನಡೆದಿತ್ತು. ಅದರಲ್ಲಿ ಹಲವು ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ವಾಹನಗಳು ಕೊಚ್ಚಿ ಹೋಗಿವೆ. ಈ ಅಪಘಾತದ ನಂತರ ರಾಜ್ಯದಲ್ಲಿ 2 ದಿನಗಳ ರಾಜಕೀಯ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೆ, ರಾಜ್ಯದ 12 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
1. ಭಾರತೀಯ ಸೇನೆ, ವಾಯುಪಡೆ, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಜುಲೈ 30 ರಂದು, 225 ಸೈನಿಕರನ್ನು ಕನ್ನೂರಿನಿಂದ ವಾಯನಾಡಿಗೆ ಕಳುಹಿಸಲಾಗಿದೆ.
2. ಹವಾಮಾನ ಇಲಾಖೆಯು ಜುಲೈ 31 ರಂದು ವಾಯನಾಡ, ಮಲಪ್ಪುರಂ, ಕೋಝಿಕೋಡ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದಂತೆ 5 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ ಹಾಗೂ ಎರ್ನಾಕುಲಂ, ಇಡುಕ್ಕಿ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ’ (ಸಾಧಾರಣ ಮಳೆ) ಎಚ್ಚರಿಕೆಯನ್ನು ನೀಡಿದೆ.