ಪ್ಯಾರಿಸ್ (ಫ್ರಾನ್ಸ್) – ಭಾರತದ ಪ್ರಸಿದ್ಧ ಶೂಟರ್ ಮನು ಭಾಕರರವರು ಪ್ಯಾರಿಸ್ ಒಲೆಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲೆಂಪಿಕನಲ್ಲಿ ೨ ಪದಕಗಳನ್ನುಗೆಲ್ಲುವ ಭಾಕರರು ದೇಶದ ಮೊದಲನೇ ಕ್ರೀಡಾಪಟುವಾಗಿದ್ದಾರೆ. ಅವರು ಮಹಿಳೆಯರ ವೈಯಕ್ತಿಕ ೧೦ ಮೀ. ಏರ ರೈಫಲ್ ನ ಅಂತಿಮ ಸುತ್ತಿನಲ್ಲಿ ಕಂಚಿನ ಪದಕವನ್ನು ಗೆದ್ದರು. ಈಗ ಅವರು ಸರಬಜ್ಯೋತ ಸಿಂಹರೊಂದಿಗೆ ಮಿಶ್ರ ಜೋಡಿಯಲ್ಲಿ ೧೦ ಮೀ. ಏರ ರೈಫಲ್ ನ ಅಂತಿಮ ಸುತ್ತಿನಲ್ಲಿ ಇನ್ನೊಂದು ಕಂಚಿನ ಪದಕವನ್ನು ಗೆದ್ದು ಇತಿಹಾಸವನ್ನು ರಚಿಸಿದ್ದಾರೆ. ಮನು ಭಾಕರರ ಮೊದಲು ನಾರ್ಮನ್ ಪ್ರಿಚರ್ಡ್ ರವರು ೧೯೦೦ರಲ್ಲಿ ಅಥ್ಲೆಟಿಕ್ಸ್ ನಲ್ಲಿ ೨ ಬೆಳ್ಳಿಯ ಪದಕಗಳನ್ನು ಗೆದ್ದಿದ್ದರು. ಆಗ ಭಾರತವು ಬ್ರಿಟೀಷರ ಅಧಿಪತ್ಯದಲ್ಲಿತ್ತು.
ಅನೇಕ ಭಾರತೀಯ ಕ್ರೀಡಾಪಟುಗಳು ತಮ್ಮ ಕಾರ್ಯಕಾಲದಲ್ಲಿ ಒಲೆಂಪಿಕ ಸ್ಪರ್ಧೆಯಲ್ಲಿ ಒಟ್ಟೂ ೨ ಪದಕಗಳನ್ನು ಗೆದ್ದಿದ್ದಾರೆ. ಇವರಲ್ಲಿ ಸುಶೀಲ ಕುಮಾರ (ಕುಸ್ತಿ) ಹಾಗೂ ಪಿ. ವಿ. ಸಿಂಧೂ (ಬ್ಯಾಡ್ಮಿಂಟನ್) ಸೇರಿದ್ದಾರೆ. ೨೦೧೨ರ ಲಂಡನ್ ಒಲೆಂಪಿಕನಲ್ಲಿ ಬೆಳ್ಳಿಯ ಪದಕವನ್ನು ಗೆದ್ದ ಸುಶೀಲರವರು ೨೦೦೮ರ ಬೀಜಿಂಗ್ ಒಲೆಂಪಿಕನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಬ್ಯಾಡ್ಮಿಂಟನಪಟುವಾದ ಪಿ. ವಿ. ಸಿಂಧೂರವರು ೨೦೧೬ರ ರಿಯೋ ಒಲೆಂಪಿಕನಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿದ್ದರು, ಅವರು ೨೦೨೦ರಲ್ಲಿ ಟೋಕಿಯೋ ಒಲೆಂಪಿಕನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.